ದಲಿತರಿಗೆ ಪ್ರವೇಶ ನಿರಾಕರಿಸಿದ ಗ್ರಾಮಸ್ಥರ ಮನೆ ಲಾಕ್‌ ಮಾಡಿ, ದೇವಾಲಯಕ್ಕೆ ನುಗ್ಗಿ ಪೂಜಿಸಿದ ದಲಿತ ಯುವಕ

By Sathish Kumar KHFirst Published Jan 9, 2024, 5:18 PM IST
Highlights

ನಮ್ಮ ಗ್ರಾಮದೊಳಗೆ ಪ್ರವೇಶವಿಲ್ಲ ಎಂದು ಯುಕನನ್ನು ಥಳಿಸಿದ ಗ್ರಾಮಸ್ಥರ ಮನೆಗಳನ್ನು ಲಾಕ್‌ ಮಾಡಿ, ದೇವಸ್ಥಾನದ ಗರ್ಭಗುಡಿಗೆ ನುಗ್ಗಿ ಪೂಜೆ ಸಲ್ಲಿಸಿದ ದಲಿತ ಯುವಕ.

ಚಿಕ್ಕಮಗಳೂರು (ಜ.09): ನಮ್ಮ ಗ್ರಾಮದಲ್ಲಿ ತಿಂಗಳ ಪೂಜೆಯಿದ್ದು, ದಲಿತ ಸಮುದಾಯದವರನ್ನು ಒಳಗೆ ಬಿಡುವುದಿಲ್ಲ ಎಂದು ಹೇಳಿ ದಲಿತ ಯುವಕನಿಗೆ ಗ್ರಾಮಸ್ಥರು ಥಳಿಸಿದ್ದರು. ಆದರೆ, ಕಾನೂನಿನ ಅಧಿಕಾರ ಹಾಗೂ ನೂರಾರು ದಲಿತರೊಂದಿಗೆ ಗ್ರಾಮಕ್ಕೆ ಪ್ರವೇಶಿಸಿದ ಯುವಕ ಎಲ್ಲರ ಮನೆಗಳನ್ನೂ ಲಾಕ್‌ ಮಾಡಿ, ದೇವಾಲಯಕ್ಕೆ ಹಾಕಿದ್ದ ಬೀಗವನ್ನು ಮುರಿದು ಒಳಗೆ ಪ್ರವೇಶಿಸಿದ್ದಾನೆ. ನಂತರ ದೇವಾಲಯದ ಗರ್ಭಗುಡಿಯಲ್ಲಿ ನಿಂತು ರಂಗನಾಥಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿದ್ದಾನೆ. 

ಹೌದು, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳು ಕಳೆದಿವೆ. ಜಾತೀಯತೆ ಬಿಟ್ಟು ಸಮಾನತೆಯನ್ನು ಕಾಣಬೇಕು ಎಂದು ಸಂವಿಧಾನದಲ್ಲಿ ತಿಳಿಸಲಾಗಿದೆ. ಜೊತೆಗೆ, ಸಾರ್ವಜನಿಕ ಸ್ಥಳದಲ್ಲಿ ಅಸ್ಪೃಶ್ಯತೆ ಆಚರಣೆ ಅಪರಾಧವೆಂದೂ ಕಾನೂನಿನಲ್ಲಿದೆ. ಆದರೂ, ಸಾರ್ವಜನಿಕ ಸ್ಥಳವಾದ ದೇವಾಲಯದೊಳಗೆ ಪ್ರವೇಶಿಸಲು ಮುಂದಾದ ದಲಿತ ಯುವಕನನ್ನು ಗ್ರಾಮಸ್ಥರು ತಡೆದು ನಿಲ್ಲಿಸಿ ಆತನನ್ನು ಥಳಿಸಿದ್ದರು. ಈ ಘಟನೆಯ ನಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗುತ್ತಿದೆ. ಆದರೆ, ಈ ಪ್ರಕರಣದ ಗಂಭೀರತೆಯನ್ನು ಅರಿತ ತರೀಕೆರೆ ತಾಲೂಕಿನ ತಹಸೀಲ್ದಾರರು ದಲಿತರಿಗೆ ದೇವಸ್ಥಾನದೊಳಗೆ ಪ್ರವೇಶಿಸಲು ಅವಕಾಶ ಕಲ್ಪಿಸಿಕೊಟ್ಟು ಸಂವಿಧಾನದ ಅನುಸಾದ ಅಸ್ಪೃಶ್ಯತೆ ಆಚರಣೆಯನ್ನು ತಡೆದಿದ್ದಾರೆ.

ಸನಾತನ ಧರ್ಮ ನಾಶಕ್ಕೆ ಕರೆಕೊಟ್ಟ ಉದಯನಿಧಿ ಸ್ಟಾಲಿನ್‌ಗೆ ಶೀಘ್ರದಲ್ಲಿ ಉಪಮುಖ್ಯಮಂತ್ರಿ ಪಟ್ಟ!

ಇನ್ನು ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಗೊಲ್ಲರಹಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇನ್ನು ದಲಿತ ಯುವಕರಿಗೆ ದೇವಾಲಯ ಪ್ರವೇಶ ನಿಷೇಧಿಸಿ ಥಳಿಸಿದ ನಂತರ ಪೊಲೀಸರು ಹಾಗೂ ತಹಸೀಲ್ದಾರ್‌ ಅವರೊಂದಿಗೆ ದೇವಾಲಯ ಪ್ರವೇಶಿಸಲು ಮುಂದಾಗಿದ್ದಾರೆ. ಆಗ ಗ್ರಾಮಸ್ಥರು ದೇವಾಲಯಕ್ಕೆ ಬೀಗ ಹಾಕಿದ್ದು, ತಮ್ಮ ಬಳಿ ಕೀ ಇಲ್ಲವೆಂದು ಹೇಳಿದ್ದಾರೆ. ಆಗ, ನೀವು ಕೀ ತೆಗೆಯದಿದ್ದರೆ ನಾವೇ ತೆಗೆಯುತ್ತೇವೆಂದ ತಾಲೂಕು ಆಡಳಿತ ಮಂಡಳಿಯಿಂದ ಸೂಚಿಸಲಾಗಿದೆ. ಕೊನೆಗೆ ಪೊಲೀಸರು ಹಾಗೂ ತಾಲೂಕು ಆಡಳಿತ ಮಂಡಳಿ ನೇತೃತ್ವದಲ್ಲಿ ದೇವಾಲಯದ ಬೀಗವನ್ನು ಮುರಿದು ದಲಿತ ಸಮುದಾಯದ ಜನರು ದೇವಾಲಯದೊಳಗೆ ಪ್ರವೇಶಕ್ಕೆ ಅವಕಾಶ ನೀಡಿದ್ದಾರೆ.

ದೇವಾಲಯದೊಳಗೆ ದಲಿತರ ಪ್ರವೇಶದ ವೇಳೆ ಪರಿಸ್ಥಿತಿ ವಿಕೋಪಕ್ಕೆ ತೆರಳಬಹುದು ಎನ್ನುವ ಮುನ್ನೆಚ್ಚರಿಕೆಯಿಂದ ಪೊಲೀಸರು ಬಿಗಿ ಭದ್ರತೆಯನ್ನು ಒದಗಿಸಿದ್ದರು. ಪೊಲೀಸರು, ತಹಶೀಲ್ದಾರ್, ಎಸಿ ನೇತೃತ್ವದಲ್ಲಿ ದಲಿತ ಸಮುದಾಯದವರು ದೇವಾಲಯ ಪ್ರವೇಶ ಮಾಡಿದ್ದಾರೆ. ಈ ವೇಳೆ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್, ಕೆ.ಎಸ್.ಆರ್.ಪಿ ತುಕಡಿ ನಿಯೋಜನೆ ಮಾಡಲಾಗಿತ್ತು. ಅಸ್ಪೃಶ್ಯತೆ ಆಚರಣೆ ಮಾಡುವ ಗೊಲ್ಲರಹಟ್ಟಿ ಗ್ರಾಮಸ್ಥರಿಗೆ ಮನೆಯಿಂದ ಹೊರಬಾರದಂತೆ ಸೂಚನೆ ನೀಡಲಾಗಿತ್ತು. ಈ ವೇಳೆ ಗ್ರಾಮಸ್ಥರ ಎಲ್ಲಾ ಮನೆಗಳನ್ನು ಲಾಕ್ ಮಾಡಲಾಗಿತ್ತು.

ಹೇಯ್ ಪ್ರಭು ಯೇ ಕ್ಯಾ ಹುವಾ... ಇವರೇ ನೋಡಿ ಜಗನ್ನಾಥನ ಹೆಸರು ಕೂಗಿ ವೈರಲ್ ಆದ ಹುಡುಗ

ದೇವಾಲಯದೊಳಗೆ ಪೂಜೆ ಮಾಡಿದ ದಲಿತ:  ದೇವಾಲಯದ ಕೀ ಮುರಿದು ಒಳಗೆ ಹೋದ ದಲಿತರಲ್ಲಿ ಹಲ್ಲೆಗೊಳಗಾದ ಯುವಕ ಮಾರುತಿ, ಗ್ರಾಮದ ರಂಗಸ್ವಾಮಿ ದೇವಾಲಯದ ಗರ್ಭಗುಡಿ ಒಳ ಹೋಗಿ ದೇವರಿಗೆ ಪೂಜೆ ಸಲ್ಲಿಸಿದ್ದಾನೆ. ಈ ಕುರಿತು ಮಾತನಾಡಿದ ಯುವಕ, ಅವತ್ತು ನನಗೆ ಹೊಡೆದು, ಹಲ್ಲೆ ಮಾಡಿದ್ದರು. ನನಗೆ ಹೊಡೆದವರಿಗೂ ಭಗವಂತ ಒಳೆದು ಮಾಡಲಿ. 30-40 ಜನ ನನಗೆ ದೊಣ್ಣೆಯಿಂದ ಹಲ್ಲೆ ಮಾಡಿದ್ದರು. ಅವರನ್ನ ದ್ವೇಷ ಮಾಡಲ್ಲ, ಪ್ರೀತಿಸ್ತೇನೆ. ನನಗೆ ದಲಿತ ಎಂದು ಹೊಡೆದಿದ್ರು, ನೋವು ಮಾಡಿದ್ರು. ಇಂದು ಅದೇ ದೇಗುಲದ ಪೂಜೆ ಮಾಡಿದ್ದು ಸಂತೋಷ ತಂದಿದೆ. ದೇವರು ಎಲ್ಲರಿಗೂ ಒಳಿತನ್ನು ಮಾಡಲಿ. ತಿಂಗಳ ಪೂಜೆ ಇದೆ, ಮೈಲಿಗೆ ಆಯ್ತು ಎಂದು ಹಲ್ಲೆ ಮಾಡಿದ್ದರು. ಇವತ್ತು ನನಗೆ ನೆಮ್ಮದಿ ಆಗಿದೆ. ಭಗವಂತ ಅವರಿಗೆ, ನಮಗೆ ಎಲ್ಲರಿಗೂ ಒಳ್ಳೆದು ಮಾಡಲಿ ಎಂದು ಹೇಳಿದ್ದಾನೆ.

ಜನವರಿ 1 ರಂದು ದಲಿತ ಊರೊಳಗೆ ಬಂದನೆಂದು ಹಲ್ಲೆ ಮಾಡಲಾಗಿತ್ತು. ದೇವರಿಗೆ ಮೈಲಿಗೆಯಾಗಿದೆ ಎಂದು ಗೊಲ್ಲರಹಟ್ಟಿ ಜನ ಹಲ್ಲೆ ಮಾಡಿದ್ದರು. ನಂತರ ದಲಿತ ಸಂಘಟನೆಯಿಂದ ಗೊಲ್ಲರಹಟ್ಟಿ ಗ್ರಾಮದಲ್ಲಿ ಪ್ರತಿಭಟನೆ ಮಾಡಲಾಗಿತ್ತು. ಜೊತೆಗೆ, ದಲಿತ ಯುವಕನ ಮೇಲೆ ಹಲ್ಲೆಗೈದ 15 ಜ‌ನರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿತ್ತು. 

click me!