ಬೆಂಗಳೂರಿನ ಜನರೇ ಹುಷಾರ್, ಕಿಲ್ಲರ್ ಬಿಎಂಟಿಸಿ ನಿಮ್ಮ ಪ್ರಾಣವನ್ನೂ ಹೊತ್ತೊಯ್ಯಬಹುದು!

By Sathish Kumar KHFirst Published Jan 9, 2024, 1:15 PM IST
Highlights

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ವಾಹನಾ ಚಾಲಕರ ನಿರ್ಲಕ್ಷ್ಯಕ್ಕೆ ಬರೋಬ್ಬರಿ  156 ಜನರು ಬಲಿಯಾಗಿದ್ದಾರೆ. ಇವರಿಗೆ ಚಾಲನಾ ತರಬೇತಿ ಕೊಡುವುದಿಲ್ಲವೇ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಜ.09): ರಾಜ್ಯ ರಾಜಧಾನಿ ಬೆಂಗಳೂರೂರಿನಲ್ಲಿ ಸಾರ್ವಜನಿಕರಿಗೆ ಸಾರಿಗೆ ಸೇವೆ ಒದಗಿಸುವ ಬಿಎಂಟಿಸಿ ಬಸ್‌ಗಳು ಪ್ರಯಾಣಿಕರನ್ನು ಸೇವೆ ಕೊಡುವ ಜೊತೆಗೆ ಪಾದಾಚಾರಿಗಳು ಹಾಗೂ ಬೈಕ್‌ ಸವಾರರ ಪ್ರಾಣವನ್ನೂ ಹೊತ್ತೊಯ್ಯುತ್ತಿವೆ. ಕಳೆದ 5 ವರ್ಷಗಳಲ್ಲಿ ಬಿಎಂಟಿಸಿ ಬಸ್‌ಗೆ ಬರೋಬ್ಬರಿ 156 ಜನರು ಬಲಯಾಗಿದ್ದಾರೆ.

ಹೌದು, ಪ್ರತಿ ವರ್ಷವು ಬಿಎಂಟಿಸಿ ಅಪಘಾತ ಪ್ರಮಾಣ ಹೆಚ್ಚಳವಾಗುತ್ತಿದೆ. 2019ರಿಂದ 2023ರವರೆಗಿನ ಐದು ವರ್ಷಗಳ  ಬಿಎಂಟಿಸಿ ಬಸ್‌ಗಳಿಗೆ  156 ಜನರು ಬಲಿಯಾಗಿದ್ದಾರೆ. ಜೊತೆಗೆ, 413 ಜನ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಇನ್ನು ಕಳೆದ ವರ್ಷದ 2023ನೇ ಸಾಲಿನಲ್ಲಿಯೇ 34 ಜನ ಸಾವನ್ನಪ್ಪಿದ್ದು, 97 ಜನರು ಗಂಭೀರ ಗಾಯಗೊಂಡಿದ್ದಾರೆ. ಮುಂದುವರೆದು ಬಿಎಂಟಿಸಿ ಚಾಲಕರ  ವಿರುದ್ಧ 2023ನೇ ಸಾಲಿನಲ್ಲಿ 3271 ಪ್ರಕರಣಗಳು ದಾಖಲು ಆಗಿವೆ.

Latest Videos

ಬೆಂಗಳೂರು: ಸಾರ್ವಜನಿಕ ಸ್ಥಳದಲ್ಲೇ ಯುವತಿ ಮುಂದೆ ಹಸ್ತಮೈಥುನ ಮಾಡ್ಕೊಂಡ ಕಾಮುಕ..!

ಬಿಎಂಟಿಸಿ ಬಸ್‌ ಚಾಲಕರಿಗೆ ಅಪಘಾತ ತಪ್ಪಿಸುವ ಬಗ್ಗೆ ಸುರಕ್ಷಿತವಾಗಿ ವಾಹನ ಸಂಚಾರದ ಬಗ್ಗೆ ಹಾಗೂ ಒಂದು ಜೀವ ಎಷ್ಟು ಅಮೂಲ್ಯವಾದುದು ಎಂಬುದನ್ನು ಮಾತ್ರ ಹೇಳಿಕೊಡದೇ, ಅಪಘಾತ ಮಾಡಿದ ಹಾಗೂ ಸಂಚಾರ ನಿಯಮ ಉಲ್ಲಂಘಿಸಿದ ಬಿಎಂಟಿಸಿ ಬಸ್‌ ಡ್ರೈವರ್‌ಗಳಿಗೆ ದೊಡ್ಡ ಮೊತ್ತದ ದಂಡ ವಸೂಲಿ ಮಾಡಲಾಗುತ್ತಿದೆ. ಬಿಎಂಟಿಸಿ ಚಾಲಕರಿಂದ  21.44 ಲಕ್ಷ ರೂ.ಹಣವನ್ನು ದಂಡವಾಗಿ ವಸೂಲಿ ಮಾಡಲಾಗಿದೆ. ಇದರಿಂದ ಬಿಎಂಟಿಸಿ ಆದಾಯ ಸಂಗ್ರಹ ಆಗುತ್ತಿದೆಯೇ ಹೊರತು, ಸಾರ್ವಜನಿಕರ ಪ್ರಾಣ ರಕ್ಷಣೆಗೆ ಯಾವುದೇ ಕ್ರಮವನ್ನು ಕೈಗೊಂಡ ಸೂಚನೆ ಕಾಣಿಸುತ್ತಿಲ್ಲ. 

ಇನ್ನು ಅಪಘಾತ ಪ್ರಕರಣಗಳಿಂದ ಸಂಚಾರ ಪೊಲೀಸರಷ್ಟೇ ಅಲ್ಲ, ಬಿಎಂಟಿಸಿಯ ಸಾರಥಿ ವಿಭಾಗದಲ್ಲೂ‌ದಂಡ ವಸೂಲಿ ಮಾಡಲಾಗುತ್ತಿದೆ. ನಿಯಮ ಉಲ್ಲಂಘಿಸಿರುವ  ಚಾಲಕರನ್ನು ಪತ್ತೆ ಮಾಡಿ, ನೋಟಿಸ್ ನೀಡಿರುವ ಬಿಎಂಟಿಸಿ ಸಾರಥಿ ವಿಭಾಗ ಮಾಡುತ್ತಿದೆ. ಬಿಎಂಟಿಸಿ‌ ಚಾಲಕರ  ನಿಯಮ ಉಲ್ಲಂಘನೆಯಿಂದ  ಇತರೆ ವಾಹನ ಸವಾರರಿಗೆ ಕಿರಿಕಿರಿ ಉಂಟಾಗುತ್ತಿದೆ. ಪ್ರತಿ ವರ್ಷ ಸಂಚಾರ ಪೊಲೀಸರು ನಿಯಮ ಉಲ್ಲಂಘಿಸುವ ಬಸ್ ಚಾಲಕರ ವಿರುದ್ಧ ಸಾವಿರಾರು ಪ್ರಕರಣಗಳನ್ನು ದಾಖಲು ಆಗುತ್ತಿವೆ.

ಬೆಂಗಳೂರು: ಕುಡಿದ ಮತ್ತಲ್ಲಿ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ, ಓರ್ವ ಸಾವು

ಬಿಎಂಟಿಸಿ ಚಾಲಕರೇ ಲಕ್ಷಾಂತರ ರೂಪಾಯಿ ಹಣವನ್ನು ದಂಡವಾಗಿ ಪಾವತಿ ಮಾಡುತ್ತಿದದರೂ ನಿಯಮ ಉಲ್ಲಂಘನೆ ಮಾಡುವುದನ್ನು ಮಾತ್ರ ಕಡಿಮೆ ಮಾಡಿಲ್ಲ. ಸಿಗ್ನಲ್ ಜಂಪ್, ರಸ್ತೆ ಮಧ್ಯೆ ವಾಹನ ಮಾರ್ಗ ಚಾಲನಾ ಸಮಯದಲ್ಲಿ ಮೊಬೈಲ್ ಬಳಕೆ, ನಿಷೇಧಿತ ಸ್ಥಳಗಳಲ್ಲಿ ವಾಹನ ನಿಲುಗಡೆ, ಬಸ್ ಚಲಿಸುವಾಗ ಬಾಗಿಲು ಮುಚ್ಚದಿರುವುದೂ ಸೇರಿದಂತೆ ವಿವಿಧ ನಿಯಮ ಉಲ್ಲಂಘಿಸಿದ ಪ್ರಕರಣಗಳಲ್ಲಿ ಚಾಲಕರ ವಿರುದ್ದ ದೂರು ದಾಖಲಿಸಿ ದಂಡ ವಸೂಲಿ ಮಾಡಲಾಗುತ್ತಿದೆ. 

click me!