ಅಪ್ಪು ಫೋಟೋದ ಮುಂದೆ ಮದುವೆಯಾದ Chikkamagaluru ಜೋಡಿ

By Suvarna NewsFirst Published Apr 30, 2022, 12:38 PM IST
Highlights

ಚಿಕ್ಕಮಗಳೂರಿನ ಅಪ್ಪು ಅಭಿಮಾನಿಯೋರ್ವ ತನ್ನ ಮದುವೆಯ ದಿನವೂ ಅಪ್ಪು ನೆನೆಪಿಯಲ್ಲೇ ನವ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಧು ಮಗ ಅಪ್ಪಟ ಅಪ್ಪು ಅಭಿಮಾನಿ. ಅದಕ್ಕಾಗಿ ಆ ಅಭಿಮಾನಿ ಮದುವೆ ಮನೆಯಲ್ಲಿ ಅಪ್ಪು ಭಾವಚಿತ್ರವನ್ನು ಎಲ್ಲೆಡೆ ಹಾಕಿಸಿದ್ದಾರೆ.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಎ.30): ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್ ದೈಹಿಕವಾಗಿ ನಮ್ಮ ಜೊತೆಗೆ ಇಲ್ಲ, ಆದ್ರೆ ಮಾನಸಿಕವಾಗಿ ಪುನೀತ್ ಸದಾ ನಮ್ಮೊಂದಿಗೆಇದ್ದಾರೆ. ನಗುಮುಖದ ಅಪ್ಪು ನಮ್ಮನ್ನು ಅಗಲಿ ತಿಂಗಳುಗಳೆ ಕಳೆದಿದೆ. ಆದ್ರೆ ಅಪ್ಪು ಮಾತ್ರ ಅಭಿಮಾನಿಗಳ ಮನೆ ಮನದಲ್ಲಿ ಚಿರಸ್ಥಾಯಿಯಾಗಿ ನೆಲೆ ನಿಂತಿದ್ದಾರೆ. ರಾಜ್ಯದಲ್ಲಿ ನಡೆಯುವ ಜಾತ್ರೆ, ಮೆರವಣಿಗೆಯಲ್ಲಿ ಭಾವಚಿತ್ರದೊಂದಿಗೆ ಅಭಿಯಾನಿಗಳು ಇದ್ದೇ ಇರುತ್ತಾರೆ. ಆದ್ರೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲ ಅಭಿಯಾನಿಯೊಬ್ಬರು ಅಪ್ಪುಗೆ ನಮನ ಸಲ್ಲಿಸಿ ಮಾಂಗಲ್ಯ ಧಾರಣೆ ಮಾಡುವ ಮೂಲಕ ಅಪ್ಪು ಅಮರ ಎನ್ನುವುದನ್ನು ಸಾರಿ ಹೇಳಿದ್ದಾರೆ. 

Latest Videos

ಮದುವೆ ಮನೆಯಲ್ಲಿ ಅಪ್ಪು ಜಪ: ನಗುವಿನ ಸರದಾರ, ಕರ್ನಾಟಕ ರತ್ನ  ಅಪ್ಪು ಮನೆ ಮನಗಳ ಅಜಾತಶುತ್ರು. ಡಾ ಪುನೀತ್ ರಾಜ್ ಕುಮಾರ್ ನಮ್ಮನ್ನ ಅಗಲಿ ತಿಂಗಳುಗಳೇ ಕಳೆದಿದೆ. ಆದರೆ, ಅಪ್ಪು ಮಾತ್ರ ಅಭಿಮಾನಿಗಳ ಮನದಲ್ಲಿ ಚಿರಸ್ಥಾಯಿಯಾಗಿ ನೆಲೆ ನಿಂತಿದ್ದಾರೆ. ಇದಕ್ಕೆ ಚಿಕ್ಕಮಗಳೂರು ನಗರದಲ್ಲಿ ನಡೆದ ಮದುವೆಯೇ ಜೀವಂತ ಸಾಕ್ಷಿಯಾಗಿದೆ. ಅಭಿಮಾನಿಗಳು ಅಪ್ಪುವನ್ನ ಜೀವನದ ಪ್ರತಿಕ್ಷಣವೂ ನೆನಪು ಮಾಡಿಕೊಳ್ಳುತ್ತಿದ್ದಾರೆ.

ಅಗಲಿದ ನಟನನ್ನ ಹುಟ್ಟುಹಬ್ಬದಂದೋ ಅಥವ ಪುಣ್ಯ ಸ್ಮರಣೆಯ ದಿನವೋ ನೆನೆಪು ಮಾಡಿಕೊಳ್ಳುವುದು ಸಾಮಾನ್ಯ. ಆದರೆ, ಚಿಕ್ಕಮಗಳೂರಿನ ಅಪ್ಪು ಅಭಿಮಾನಿಯೋರ್ವ ತನ್ನ ಮದುವೆಯ ದಿನವೂ ಅಪ್ಪು ನೆನೆಪಿಯಲ್ಲೇ ನವ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಧು ಮಗ ಅಪ್ಪಟ ಅಪ್ಪು ಅಭಿಮಾನಿ. ಅದಕ್ಕಾಗಿ ಆ ಅಭಿಮಾನಿ ಮದುವೆ ಮನೆಯಲ್ಲಿ ಅಪ್ಪು ಭಾವಚಿತ್ರವನ್ನು ಎಲ್ಲೆಡೆ ಹಾಕಿಸಿದ್ದಾರೆ. ಜೊತೆಗೆ ತಾಳಿ ಕಟ್ಟುವ ಮುನ್ನವೂ ಅವರ ನೆನೆಪಿಯಲ್ಲೇ ನೂತನ ಜೀವನಕ್ಕೆ ಪಾದರ್ಯಪಣೆ ಮಾಡಿದ್ದಾರೆ.

CBSE Fake Notice ಟರ್ಮ್ 2 ಪರೀಕ್ಷೆ ನಿಯಮಗಳ ಕುರಿತ ನಕಲಿ ಪೋಸ್ಟ್ ವೈರಲ್!

ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಬಳಿಕ ಮಾಂಗಲ್ಯಧಾರಣೆ: ನವವಧುಗಳು ಕಲ್ಯಾಣಮಂಟಪದಲ್ಲಿ ಇಟ್ಟಿದ್ದ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಪೂಜೆ ಸಲ್ಲಿಸಿದ್ದಾರೆ. ಬಳಿಕ ಪೋಟೋಗೆ ನಮಸ್ಕರಿಸಿದ ಬಳಿಕ ಮಾಂಗಲ್ಯಧಾರಣೆಯನ್ನು ಮಧುಮಗ ಮಾಡಿದ್ದಾರೆ.ಹೌದು ನಿನ್ನೆ ನಗರದ ಅಂಬೇಡ್ಕರ್ ಭವನದಲ್ಲಿ ಸೋಮವಾರ್ ನಿಲಯ್ ಹಾಗೂ ಸುಪ್ರೀಯಾ ಎಂಬುವರ ಮದುವೆ ಸಂದರ್ಭದಲ್ಲಿ ಅಪ್ಪುವನ್ನ ನೆನೆದು ಕಣ್ಣೀರಿಟ್ಟಿದ್ದಾರೆ.

ಮದುವೆ ಮನೆಯಲ್ಲೂ ಅಪ್ಪುವಿನ ಭಾವಚಿತ್ರ ಹಾಕಲಾಗಿತ್ತು. ವೇದಿಕೆ ಮುಂಭಾಗದಲ್ಲಿ ಅಪ್ಪು ಭಾವಚಿತ್ರಕ್ಕೆ ನವದಂಪತಿಗಳು ಹೂವಿನ ಮಾಲೆ ಹಾಕಿ ಪೂಜೆ ಸಲ್ಲಿಸಿ ನಂತರ ಮಾಂಗಲ್ಯ ಧಾರಣೆ ಮಾಡಿದ್ದಾರೆ. ಮದುವೆ ಮಂಟಪದ ಎಲ್ಇಡಿ ವಾಲ್ನಲ್ಲೂ ಸಹ ಅಪ್ಪು ಅಜಾತಶತ್ರುವಾಗಿದ್ದರು. ನವದಂಪತಿಗಳಿಬ್ಬರು ಅಪ್ಪುವಿನ ಅಭಿಮಾನಿಗಳಾಗಿದ್ದರು. ವಿವಾಹದ ಲಗ್ನಪತ್ರಿಕೆಯಲ್ಲೂ ಕೂಡ ತಮ್ಮ ಹೆಸರಿನ ಮುಂದೆ ಅಪ್ಪು ಎಂದು ನಮೂದಿಸುವ ಮೂಲಕ ಅಭಿಮಾನ ಮೆರೆದಿದ್ದಾರೆ. ಮಧುಮಗ ನಿಲಯ್ ಅಪ್ಪುವಿನ ಅಪ್ಪಟ ಅಭಿಮಾನಿ. ಅವರ ಹುಟ್ಟುಹಬ್ಬ, ಸಿನಿಮಾ ಬಿಡುಗಡೆ ವೇಳೆ ಬಡವರು, ರೋಗಿಗಳಿಗೆ ಸಹಾಯ ಮಾಡುವ ಸಮಾಜಮುಖಿ ಕಾರ್ಯಗಳನ್ನ ಮಾಡುತ್ತಿದ್ದರು.

INDIAN ARMY RECRUITMENT 2022: 4 ವರ್ಷಗಳ B.SC  ನರ್ಸಿಂಗ್ ಕೋರ್ಸ್ 2022 ಗಾಗಿ ಅಧಿಸೂಚನೆ

ಅಪ್ಪು ಯೂತ್ ಬ್ರಿಗೇಡ್ ರಚನೆ ಮಾಡಿದ್ದ ಸೋಮವಾರ್ ನಿಲಯ(ಅಪ್ಪು ): ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಪ್ಪು ಯೂತ್ ಬ್ರಿಗೇಡ್ ರಚನೆಯನ್ನು ನಿಲಯ (ಅಪ್ಪು )ಮಾಡಿದ್ದರು. ಅಪ್ಪು ನಿಧನವಾದ ಸಮಯದಲ್ಲಿ ಅಂತಿಮ ದರ್ಶನ ಪಡೆದು ಅಪ್ಪು ನೆನಪಿನಲ್ಲಿ ಅನ್ನದಾನ,ನೇತ್ರದಾನ ಕಾರ್ಯಕ್ರವನ್ನು ಕೂಡ ನಿಲಯ ಹಮ್ಮಿಗೊಂಡಿದ್ದರು.ಒಟ್ಟಾರೆ ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಎಂಬಂತೆ ಅಪ್ಪು ದೈಹಿಕವಾಗಿ ನಮ್ಮಗಳ ಜೊತೆ ಇಲ್ಲದಿದ್ದರೂ ಮಾನಸಿಕವಾಗಿ ಅಪ್ಪು ಎಂಬ ಪವರ್ ನಾಡಿನ ಮನೆ-ಮನಗಳಲ್ಲಿ ಅಜರಾಮರ. ಚಿರಸ್ಥಾಯಿ. ಮರೆಯದ ಮರೆಯಲಾಗದ ಚೇತನವಾಗಿದ್ದಾರೆ.

click me!