* ತನಿಖೆಗೆ ಆದೇಶ ಮಾಡದಿದ್ರೆ ಕಚೇರಿ ಎದುರು ಮತ್ತೆ ಪ್ರತಿಭಟನೆ ಮಾಡಲಾಗುವುದು
* ನಂಜುಂಡಪ್ಪ ವರದಿ ಪ್ರಕಾರ ಉತ್ತರ ಕರ್ನಾಟಕ ಅಭಿವೃದ್ಧಿ ಆಗಬೇಕು
* ಬೆಂಗಳೂರಿನಲ್ಲಿರುವ ಕೇಂದ್ರ ಕಚೇರಿಗಳು ಉತ್ತರ ಕರ್ನಾಟಕಕ್ಕೆ ಬಂದರೆ ಯುವಕರಿಗೆ ಕೆಲಸ ಸಿಗುತ್ತೆ
ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ
ಧಾರವಾಡ(ಏ.30): ಕರ್ನಾಟಕ ನೀರಾವರಿ ಕಚೇರಿಯನ್ನ ಧಾರವಾಡ(Dharwad) ಜಿಲ್ಲೆಯಿಂದ ಹೇಗಾದ್ರೂ ಮಾಡಿ ಸ್ಥಳಾಂತರಿಸಬೇಕು ಎಂದು ಆಡಳಿತ ಸರಕಾರಗಳು ಶತ ಪ್ರಯತ್ನ ಮಾಡುತ್ತಲೇ ಬಂದಿದೆ. ಇದಕ್ಕೆ ಮಹದಾಯಿ ಹೋರಾಟಗಾರ ವೀರೇಶ ಸೊಬರದಮಠ(Veeresh Sobaradamath) ತೀವ್ರ ವಿರೋಧವನ್ನ ವ್ಯಕ್ತಪಡಿಸಿದ್ದಾರೆ.
ಇಂದು(ಶನಿವಾರ) ನಗರದ ಸರ್ಕಿಟ್ ಹೌಸ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ನೀರಾವರಿ ನಿಗಮದ(Karnataka Irrigation Corporation) ಕೇಂದ್ರ ಕಚೇರಿ ಧಾರವಾಡದಲ್ಲಿದೆ. ಈ ಕಚೇರಿಯು 22 ಜಿಲ್ಲೆಗಳ ಪ್ರಧಾನ ಕಚೇರಿಯಾಗಿ ಕೆಲಸವನ್ನ ಮಾಡುತ್ತಿದೆ. ಇನ್ನು ಈ ಕಚೇರಿಯ ಅಕ್ರಮದ ಬಗ್ಗೆ ಸಿಬಿಐಗೆ(CBI) ತನಿಖೆ ಮಾಡಬೇಕು ಎಂದು ಆಗ್ರಹವನ್ನ ಮಾಡಿದ್ದಾರೆ. ನಂಜುಂಡಪ್ಪ ವರದಿ ಪ್ರಕಾರ ಉತ್ತರ ಕರ್ನಾಟಕ ಅಭಿವೃದ್ಧಿ ಆಗಬೇಕು. ಬೆಂಗಳೂರಿನಲ್ಲಿರುವ ಕೇಂದ್ರ ಕಚೇರಿಗಳು ಉತ್ತರ ಕರ್ನಾಟಕಕ್ಕೆ(North Karnataka) ಬಂದರೆ ಯುವಕರಿಗೆ ಕೆಲಸ ಸಿಗುತ್ತೆ. ನಿರುದ್ಯೂಗ ಕಡಿಮೆಯಾಗುತ್ತೆ ಎಂದು ವೀರೇಶ ಸೊಬರದಮಠ ಹೇಳಿದ್ದಾರೆ.
ಪಿಎಸ್‌ಐ ಹುದ್ದೆಗೆ ಮರುಪರೀಕ್ಷೆ ನಿರ್ಧಾರಕ್ಕೆ ಎಚ್‌ಡಿಕೆ ಆಕ್ಷೇಪ
ಸಿಬಿಐಗೆ ನೀರಾವರಿ ಕಚೇರಿ ತನಿಖೆಯಾಕೆ?
2018ರ ಕ್ಯಾಬಿನೆಟ್ ಸಭೆಯಲ್ಲಿ 9 ಇಲಾಖೆಗಳನ್ನ ಉತ್ತರ ಕರ್ನಾಟಕಕ್ಕೆ ಸ್ಥಳಾಂತರ ಮಾಡಿ ಆದೇಶ ಮಾಡಿದ್ರು ಸದ್ಯ ಯಾವುದು ಜಾರಿ ಆಗಿಲ್ಲ. ನಾವು ನಮ್ಮ ಕಾರ್ಯಕರ್ತರಿಂದ ಕೇಸ್ ಹಾಕಿಸಿದ್ದೇವೆ. 2014 ರಿಂದ 2022 ರ ವರೆಗೆ ಕಾಮಗಾರಿಯಾಗದೆ 28 ಕೋಟಿ ಹಣ ನುಂಗಿ ಹಾಕಿದ್ದರು. ಕೆಲ ಭ್ರಷ್ಟ ಅಧಿಕಾರಿಗಳು ಆ ಕೇಸ್‌ನಲ್ಲಿ 22 ಜನರನ್ನ ಅಮಾನತು ಮಾಡಲಾಗಿದೆ. ಅದು ನಮ್ಮ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಇನ್ನು ಆ ಇಲಾಖೆಯಲ್ಲಿ ರಿಟೈಡ್ ಆದವರು ಮತ್ತು ಕೆಲಸದಲ್ಲಿರುವ 22 ಜನರ ಮೇಲೆ ಕೇಸ್ ಆಗಿದೆ. ಆ ಕೇಸನ್ನ ಸಿಓಡಿಗೆ ಕೊಟ್ಟು ಪ್ರಕರಣವನ್ನ ಮುಚ್ಚಿ ಹಾಕುತ್ತಿದ್ದಾರೆ. 22 ಜಿಲ್ಲೆಗಳಿಗೆ ಸಂಭಂದಪಟ್ಟಂತಹ ದೊಡ್ಡ ಇಲಾಖೆ ನೀರಾವರಿ ಇಲಾಖೆ. ಇದರ ಪ್ರಧಾನ ಕಚೇರಿ ಧಾರವಾಡದ ಶ್ರಿನಗರದಲ್ಲಿದೆ. ಕೇವಲ 28 ಕೋಟಿ ಅಲ್ಲ 1000 ಕೋಟಿಗೂ ಅಧಿಕ ಹಣ ಭ್ರಷ್ಟಾಚಾರವಾಗಿದೆ.(Corruption) ಈ ಪ್ರಕರಣವನ್ನ ಸಿಬಿಐಗೆ ವಹಿಸಬೇಕು. ನಾನು ಸಹ ಪ್ರಧಾನಮಂತ್ರಿ, ಅಮಿತ್ ಶಾಗೆ ಮನವಿ ಮಾಡಿದ್ದೇನೆ. ಗದಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ಮಾಡಿ ಪ್ರಸ್ತಾಪ ಮಾಡಿಲಾಗಿದೆ ಎಂದರು.
ಹುಬ್ಬಳ್ಳಿ ಗಲಭೆಕೋರರಿಗೆ ಜಮೀರ್ ಸಹಾಯ, ಸಿಟಿ ರವಿ ಕೆಂಡಾಮಂಡಲ
ಎಲ್ಲ ದಾಖಲೆಗಳು ನಮ್ಮ ಹತ್ರ ಇವೆ 2018 ರ ಸಾಲಿನಲ್ಲಿ ಹೊಸ ಕಟ್ಟಡಕ್ಕೆ 4 ಕೋಟಿ 80 ಲಕ್ಷ ರೂಪಾಯಿ ಟೆಂಡರ್ ಕರೆದಿದ್ರು. ಬಾಡಿಗೆ ಇಲಾಖೆಯಲ್ಲಿ ನೀರಾವರಿ ಕಚೇರಿ ಇದೆ. ಸಿಇ ಕಚೇರಿಯ ಹಿಂದೆ ಕಟ್ಟಡ ಕಟ್ಟಲು ಜಾಗ ಕೂಡ ಪೀಕ್ಸ್ ಆಗಿತ್ತು. ಬಳಿಕ ರಾಜಕೀಯ ಪಿತೂರಿಗಳಿಂದ ಟೆಂಡರ್ ರಿಜೆಕ್ಟ್ ಮಾಡಲಾಗಿದೆ. ಆ 4 ಕೋಟಿ 80 ಲಕ್ಷ ಹಣ ಹಾಗೆ ಉಳಿದಿದೆ. ಬಾಡಿಗೆ ಕಟ್ಟಡಕ್ಕೆ ಕೊಟ್ಡಿರುವ ಹಣಕ್ಕೆ ಮತ್ತು ಟೆಂಡರ್ ಕೊಟ್ಟಂತಹ ಹಣಕ್ಕೆ ಸಮವಾಗಿದೆ. ಜಾಗವಿದ್ರೂ ಟೆಂಡರ್ ಕರೆದಿಲ್ಲ ಈ ನೀರಾವರಿ ಕಚೇರಿಯನ್ನ ಬೇರೆ ಕಡೆ ತೆಗೆದುಕೊಂಡು ಹೋಗುವ ಪ್ಲಾನ್ ಸರಕಾರದ್ದಾಗಿದೆ ಅಂತ ಆರೋಪಿಸಿದ್ದಾರೆ.
ನೀರಾವರಿ ಇಲಾಖೆಯ ಆಯುಕ್ತರಾಗಿ ಕಳೆದ 6 ವರ್ಷದಿಂದ ರಾಕೇಶ್ ಸಿಂಗ್(Rakesh Singh) ಅವರು ಒಂದೇ ಹುದ್ದೆಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಕಳೆದ 6 ವರ್ಷದಿಂದ ಅದೇ ಸ್ಥಾನದಲ್ಲಿದ್ದಾರೆ ಇದು ಸರ್ಕಾರಕ್ಕೆ ಮತ್ತು ಸಂವಿಧಾನಕ್ಕೆ ಗೌರವ ತರಲ್ಲ. ಆ ವ್ಯಕ್ತಿ ಯ ಬಗ್ಗೆ ಭ್ರಷ್ಟಾಚಾರ ಮಾಡಿದ್ದಾನೆ ಇಲ್ವೋ ಎಂಬುದರ ಬಗ್ಗೆ ಸಿಬಿಐಗೆ ತನಿಖೆಗೆ ಆದೇಶಿಸಬೇಕು ಸರ್ಕಾರಕ್ಕೆ 15 ದಿನ ಡೆಡ್ ಲೈನ್ ನೀಡಿ ಅಂತ ಮಹದಾಯಿ ಹೋರಾಟಗಾರ ವಿರೇಶ್ ಸೊಬದರಮಠ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ತನಿಖೆಗೆ ಆದೇಶ ಮಾಡದೆ ಇದ್ರೆ ಕಚೇರಿ ಎದುರು ಮತ್ತೆ ಪ್ರತಿಭಟನೆಯನ್ನ ಮಾಡಲಾಗುವುದು ಅಂತ ಹೇಳಿದ್ದಾರೆ.