ಸದಾ ಮಳೆಯಾಗುತ್ತಿದ್ದ ಕಾಫಿನಾಡಲ್ಲೀಗ ತೀವ್ರ ಬರಗಾಲದ ಛಾಯೆ. ವರ್ಷಪೂರ್ತಿ ಹಚ್ಚಹಸುರಿನಿಂದ ಕಂಗೊಳಿಸುತ್ತಿದ್ದ ಮಲೆನಾಡು ಇದೀಗ ತೀವ್ರ ಬರಗಾಲದಿಂದ ನೀರಿಗಾಗಿ ಹಾಹಾಕಾರ ಪಡುವಂತಾಗಿದೆ. ರೈತರು ಮಳೆಗಾಗಿ ಆಕಾಶ ನೋಡುತ್ತಿದ್ದು,ದೇವರ ಮೊರೆ ಹೋಗಿದ್ದಾರೆ.
ಚಿಕ್ಕಮಗಳೂರು (ಏ.2) : ಕಾಫಿನಾಡಿನಾದ್ಯಂತ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು ಜನ ಮಳೆಗಾಗಿ ಆಕಾಶ ನೋಡುತ್ತಿದ್ದು, ಮಳೆಗಾಗಿ ದೇವರ ಮೊರೆ ಹೋಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹೆಸಗಲ್ ಗ್ರಾಮದಲ್ಲಿರುವ ಬಸವೇಶ್ವರ ಸ್ವಾಮಿಗೆ ಊರಿನ ಜನರೆಲ್ಲಾ ಸೇರಿ ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥಿಸಿದ್ದಾರೆ. ಸ್ವಾಮೀಜಿಗಳು ಹಾಗೂ ಜನನಾಯಕರೆಲ್ಲಾ ಸೇರಿ ಬಸವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಕೂಡಲೇ ಮಳೆಯಾಗುವಂತೆ ಬೇಡಿಕೊಂಡಿದ್ದಾರೆ.
undefined
ಬೆಳೆ ಉಳಿಸಿಕೊಳ್ಳೊದೇ ಬೆಳೆಗಾರರಿಗೆ ಸವಾಲು :
ರಾಜ್ಯದಲ್ಲೇ ಅತಿ ಹೆಚ್ಚಿ ಮಳೆ ಬೀಳುವ ಚಿಕ್ಕಮಗಳೂರು ಜಿಲ್ಲೆಯಲ್ಲೇ ಮಳೆಗಾಗಿ ಜನ ಆಕಾಶ ನೋಡುತ್ತಿದ್ದಾರೆ. ಕೆರೆ-ಕಟ್ಟೆ, ಹಳ್ಳ-ಕೊಳ್ಳ-ನದಿ-ತೊರೆಗಳು ನೀರಿಲ್ಲದ ಒಣಗಿ ನಿಂತಿವೆ. ಜಾನುವಾರುಗಳಿಗೂ ಕುಡಿಯೋಕೆ ನೀರಿಲ್ಲದಂತಹಾ ಸ್ಥಿತಿ ನಿರ್ಮಾಣವಾಗಿದೆ. ವಾರ್ಷಿಕ ದಾಖಲೆ ಮಳೆ ಸುರಿಯೋ ಮೂಡಿಗೆರೆಯಂತಹಾ ಮಲೆನಾಡ ತಾಲೂಕಿನಲ್ಲೇ ವಾರಕ್ಕೊಮ್ಮೆ ನೀರು ಬಿಡುವಂತಹಾ ಸ್ಥಿತಿ ನಿರ್ಮಾಣವಾಗಿದ್ದು ಕೂಡಲೇ ಮಳೆಯಾಗದಿದ್ದರೆ ಮುಂದಿನ ದಿನಗಳಲ್ಲಿ ಜನ ಹನಿನೀರಿಗೂ ಹಾಹಾಕಾರ ಪಡುವಂತಹಾ ಸ್ಥಿತಿ ನಿರ್ಮಾಣವಾಗಲಿದೆ.
ವಿಧಾನಸಭಾ ಚುನಾವಣೆ ಬಹಿಷ್ಕರಿಸಿದ್ದ ಈ ಗ್ರಾಮಸ್ಥರಿಂದ ಲೋಕಸಭಾ ಚುನಾವಣೆಗೂ ಬಹಿಷ್ಕಾರ!
ಮಲೆನಾಡಲ್ಲಿ ಕಳೆದ 20 ವರ್ಷದಲ್ಲೇ ಬಾರದಂತಹಾ ಬರಗಾಲ ಬಂದಿದ್ದು ಕಾಫಿ-ಅಡಿಕೆ-ಮೆಣಸನ್ನ ಉಳಿಸಿಕೊಳ್ಳೊದೇ ಬೆಳೆಗಾರರಿಗೆ ಸವಾಲಾಗಿದೆ. ಬರಗಾಲದಲ್ಲಿ ಇಲ್ಲಿಗೆ ಬಂದು ಪೂಜೆ ಸಲ್ಲಿಸಿ ಬೇಡಿಕೊಂಡರೆ ಮಳೆ ಬರುತ್ತೆ ಅನ್ನೋದು ಭಕ್ತರ ನಂಬಿಕೆ. ಹಾಗಾಗಿ, ಮಾಜಿ ಸಚಿವೆ ನಯನಾ ಮೋಟಮ್ಮ ಸೇರಿದಂತೆ ಗುಣನಾಥ ಸ್ವಾಮೀಜಿ ಹಾಗೂ ಜನಸಾಮಾನ್ಯರು ಪೂಜೆ ಸಲ್ಲಿಸಿ, ಮಳೆಗಾಗಿ ಬೇಡಿಕೊಂಡಿದ್ದಾರೆ.