ಗಂಗಾವತಿ: ಮಧ್ಯಾಹ್ನದ ಬಿಸಿಯೂಟ ಸೇವಿಸಿ 15ಕ್ಕೂ ಹೆಚ್ಚು ಮಕ್ಕಳು ತೀವ್ರ ಅಸ್ವಸ್ಥ!

By Ravi JanekalFirst Published Apr 2, 2024, 6:14 PM IST
Highlights

ಮಧ್ಯಾಹ್ನ ಬಿಸಿಯೂಟ ಸೇವಿಸಿ 15ಕ್ಕೂ ಹೆಚ್ಚು ಮಕ್ಕಳು ತೀವ್ರ ಅಸ್ವಸ್ಥಗೊಂಡ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಂಗಾಪುರ ಗ್ರಾಮದ ಶ್ರೀರಂಗದೇವರಾಯ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನಡೆದಿದೆ.

ಕೊಪ್ಪಳ (ಏ.2): ಮಧ್ಯಾಹ್ನ ಬಿಸಿಯೂಟ ಸೇವಿಸಿ 15ಕ್ಕೂ ಹೆಚ್ಚು ಮಕ್ಕಳು ತೀವ್ರ ಅಸ್ವಸ್ಥಗೊಂಡ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಂಗಾಪುರ ಗ್ರಾಮದ ಶ್ರೀರಂಗದೇವರಾಯ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನಡೆದಿದೆ.

ಇಂದು ಮಧ್ಯಾಹ್ನ ಊಟಕ್ಕೆ ಹೋಗಿದ್ದ ವಿದ್ಯಾರ್ಥಿಗಳು. ಮಧ್ಯಾಹ್ನ ಊಟಕ್ಕೆ ಅನ್ನ ಸಾಂಬಾರು ಬದಲು ಇಂದು ಚಿತ್ರಾನ್ನ ಮಾಡಿರುವ ಬಿಸಿಯೂಟ ಸಿಬ್ಬಂದಿ. ಚಿತ್ರಾನ್ನ ಸೇವಿಸಿದ ಕೆಲವೊತ್ತಿನಲ್ಲೇ ಕೆಲವು ಮಕ್ಕಳಿಗೆ ವಾಂತಿ ಭೇದಿಯಾಗಿದೆ. ಬಳಿಕ ಇತರೆ ಮಕ್ಕಳಿಗೆ ಇದೇ ರೀತಿ ಆಗಿದೆ. ಮಧ್ಯಾಹ್ನ ಬಿಸಿಯೂಟ ಮಾಡಿದ ಮಕ್ಕಳ ಪೈಕಿ ಸುಮಾರು ಹದಿನೈದು ಮಕ್ಕಳು ವಾಂತಿ ಭೇದಿಯಿಂದ ತೀವ್ರ ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಅಸ್ವಸ್ಥ ಮಕ್ಕಳನ್ನು ಸಂಗಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಘಟನೆ ಮಾಹಿತಿ ತಿಳಿದು ಆಸ್ಪತ್ರೆ ಡಿಎಚ್‌ಓ ಡಾ.ಲಿಂಗರಾಜ್ ಸೇರಿದಂತೆ ಅನೇಕ ಅಧಿಕಾರಿಗಳು ಭೇಟಿ ನೀಡಿದರು. ಇತ್ತ ಮಕ್ಳಳು ಅಸ್ವಸ್ಥಗೊಂಡ ಘಟನೆಯಿಂದ ಪೋಷಕರು ತೀವ್ರ ಆತಂಕಕ್ಕೊಳಗೆ ಆಸ್ಪತ್ರೆ ಓಡಿ ಬಂದ ಘಟನೆ ನಡೆಯಿತು. ಮಕ್ಕಳ ಸ್ಥಿತಿ ಕಂಡು ಕಣ್ಣೀರು ಹಾಕಿದ ಪಾಲಕರು.

ಬಿಸಿನೀರಿನ ಪಾತ್ರೆಗೆ ಆಯಾತಪ್ಪಿ ಬಿದ್ದು ಗಾಯಗೊಂಡಿದ್ದ ಅಡುಗೆ ಸಿಬ್ಬಂದಿ; ಚಿಕಿತ್ಸೆ ಫಲಿಸದೇ ಸಾವು

ಬಿಸಿಯೂಟಕ್ಕೆ ಕಳಪೆ ಆಹಾರ ಬಳಸಲಾಗಿದೆಯೇ? ಸ್ವಚ್ಛತೆ ಬಗ್ಗೆ ಅನುಮಾನ ಮೂಡಿಸಿದೆ. ಈ ಹಿಂದೆಯೂ ಇಂಥ ಘಟನೆ ನಡೆದಿವೆ. ಆದರೂ ಎಚ್ಚೆತ್ತುಕೊಳ್ಳದ ಆಡುಗೆ ಸಿಬ್ಬಂದಿ ಪದೇ ಪದೆ ಆಹಾರ ಸೇವನೆಯಿಂದ ಅಸ್ವಸ್ಥಗೊಳ್ಳುವ ಪ್ರಕರಣಗಳು ಎಚ್ಚೆತ್ತಿರುವುದರಿಂದ ಬಿಸಿಯೂಟ ಸೇವಿಸಲು ಮಕ್ಕಳು ಹಿಂಜರಿಯುವಂತಾಗಿದೆ. ಅಲ್ಲದೇ ಪಾಲಕರಿಗೂ ಚಿಂತೆಗೀಡು ಮಾಡಿದೆ.

click me!