Chikkamagaluru: ಕಾಫಿನಾಡಿನ ಜಿಲ್ಲಾಸ್ಪತ್ರೆಗೆ ರಾಜ್ಯ ಮಟ್ಟದ ಪ್ರಶಸ್ತಿ

By Govindaraj S  |  First Published Aug 3, 2023, 8:06 PM IST

ಮೆದುಳು ನಿಷ್ಕ್ರಿಯಗೊಂಡಿದ್ದ ಯುವತಿಗೆ ಅಂಗಾಂಗಳನ್ನು ಹೊರತೆಗೆದು ಅಗತ್ಯವಿರುವವರಿಗೆ ಜೋಡಿಸಲು ನೆರವಾಗಿದ್ದ ಚಿಕ್ಕಮಗಳೂರು ಜಿಲ್ಲಾ ಮಲ್ಲೇಗೌಡ ಸಾರ್ವಜನಿಕ ಆಸ್ಪತ್ರೆಗೆ ರಾಜ್ಯಮಟ್ಟದ ಪ್ರಶಸ್ತಿ ದೊರೆತಿದೆ. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಆ.03): ಮೆದುಳು ನಿಷ್ಕ್ರಿಯಗೊಂಡಿದ್ದ ಯುವತಿಗೆ ಅಂಗಾಂಗಳನ್ನು ಹೊರತೆಗೆದು ಅಗತ್ಯವಿರುವವರಿಗೆ ಜೋಡಿಸಲು ನೆರವಾಗಿದ್ದ ಚಿಕ್ಕಮಗಳೂರು ಜಿಲ್ಲಾ ಮಲ್ಲೇಗೌಡ ಸಾರ್ವಜನಿಕ ಆಸ್ಪತ್ರೆಗೆ ರಾಜ್ಯಮಟ್ಟದ ಪ್ರಶಸ್ತಿ ದೊರೆತಿದೆ. ರಾಷ್ಟ್ರಮಟ್ಟದಲ್ಲೆ ಪ್ರಥಮ ಜಿಲ್ಲಾಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಇಂದು ಜಿಲ್ಲಾ ಸರ್ಜನ್ ಡಾ.ಸಿ.ಮೋಹನ್ಕುಮಾರ್ ಬೆಂಗಳೂರಿಗೆ ತೆರಳಿ ಸೆಂಟ್ರಲ್ ಕಾಲೇಜಿನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಆರೋಗ್ಯ ಸಚಿವರಿಂದ ಪ್ರಶಸ್ತಿ ಸ್ವೀಕರಿಸಿದ್ದಾರೆ.

Tap to resize

Latest Videos

undefined

ರಾಷ್ಟ್ರಮಟ್ಟದಲ್ಲಿ ಜೀವನ ಸಾರ್ಥಕತೆ ಸಂಸ್ಥೆ ಮಲ್ಲೇಗೌಡ ಸಾರ್ವಜನಿಕ ಆಸ್ಪತ್ರೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದೆ.ಅಂಗಾಂಗ ಹೊರತೆಗೆಯಲು 13 ಮಂದಿ ವೈದ್ಯರು ಮತ್ತು ಸಿಬ್ಬಂದಿಗಳು ಕಾರ್ಯನಿರ್ವಹಿಸಿದ್ದರು. ಅವರೆಲ್ಲರಿಗೂ ಪ್ರಶಸ್ತಿಯ ಗೌರವ ಸಂದಾಯವಾಗಲಿದೆ. ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರವನ್ನು ಮುಖ್ಯಮಂತ್ರಿಗಳು ನೀಡಿ ಗೌರವಿಸಲಿದ್ದಾರೆ.

ಕಸ್ತೂರಿ ರಂಗನ್ ವರದಿ ಬಫರ್ ಝೋನ್ ವಿರುದ್ಧ ಪ್ರತಿಭಟನೆಗೆ ರಾಜ್ಯ ರೈತ ಸಂಘ ಸಜ್ಜು

ಏನಿದು ಪ್ರಕರಣ: ಕಡೂರು ತಾಲ್ಲೂಕು ಸೋಮನಹಳ್ಳಿ ತಾಂಡ್ಯದ ಪಿಯುಸಿ ವಿದ್ಯಾರ್ಥಿನಿ ರಕ್ಷಿತಾಬಾಯಿ ಸ್ನೇಹಿತೆಯೊಂದಿಗೆ ಊರಿಗೆ ತೆರಳಲು ಬಸ್ನಲ್ಲಿ ತೆರಳುವಾಗ ಎಐಟಿ ವೃತ್ತದ ಬಳಿ ಬಸ್ಸಿನಿಂದ ಬಿದ್ದಿದ್ದು, ತಕ್ಷಣ ಮಲ್ಲೇಗೌಡ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. 25ಕ್ಕೂ ಹೆಚ್ಚು ಬಾರಿ ಪರೀಕ್ಷೆ ನಡೆಸಿ ಮೆದುಳು ನಿಷ್ಕ್ರಿಯಗೊಂಡಿರುವುದನ್ನು ಖಾತ್ರಿಪಡಿಸಿಕೊಳ್ಳಲಾಗಿತ್ತು.ಜಿಲ್ಲಾಸರ್ಜನ್ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಸಂಬಂಧಿಕರೊಂದಿಗೆ ಚರ್ಚೆ ನಡೆಸಿ ಅಂಗಾಂಗ ದಾನಕ್ಕೆ  ತಂದೆ,ತಾಯಿಗಳನ್ನು ಒಪ್ಪಿಸುವಂತೆ ತಿಳಿಸಲಾಗಿತ್ತು. 

ಸಂಬಂಧಿಕರ ಯುವಕರು ಪರಿಸ್ಥಿತಿಯನ್ನು ತಂದೆ,ತಾಯಿಗಳಿಗೆ ವಿವರಿಸಿ ಅವರನ್ನು ಒಪ್ಪಿಸಲಾಗಿತ್ತು. ಪೋಷಕರು ಮಗಳ ಅಂಗಾಂಗ ದಾನಕ್ಕೆ ಸಮ್ಮತಿಸಿದ್ದರಿಂದ ಜಿಲ್ಲಾಸ್ಪತ್ರೆ ವೈದ್ಯರು ಮುಂದಿನ ವೈದ್ಯಕೀಯ ಪ್ರಕ್ರಿಯೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.ಬೆಂಗಳೂರು ಮತ್ತು ಮಂಗಳೂರು ಆಸ್ಪತ್ರೆಯಿಂದ ತಜ್ಞವೈದ್ಯರು ಆಗಮಿಸಿದ್ದು, ಜಿಲ್ಲಾಸ್ಪತ್ರೆಯ ವೈದ್ಯರು ಅವರೊಂದಿಗೆ ಅಂಗಾಂಗ ಹೊರತೆಗೆಯಲು ಮುಂದಾದರು. 

ಏರ್ಲಿಫ್ಟ್ ಮೂಲಕ ಬೆಂಗಳೂರಿಗೆ: ಹೃದಯ,ಕಿಡ್ನಿ, ಲಿವರ್ ಮತ್ತು ಕಣ್ಣುಗಳನ್ನು ವಿದ್ಯಾರ್ಥಿನಿಯ ದೇಹದಿಂದ ಹೊರತೆಗೆಯಲಾಯಿತು. ಹೃದಯವನ್ನು ಏರ್ಲಿಫ್ಟ್ ಮೂಲಕ ಬೆಂಗಳೂರಿಗೆ ಕೊಂಡೊಯ್ಯಲಾಯಿತು. ಉಳಿದ ಅಂಗಾಂಗಗಳನ್ನು ಆಂಬುಲೆನ್ಸ್ ಮೂಲಕ ಜಿರೋ ಟ್ರಾಫಿಕ್ ಮೂಲಕ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲಾಯಿತು.

ದಕ್ಷಿಣ ಕರ್ನಾಟಕದಲ್ಲಿ ಪಕ್ಷ ಕಟ್ಟುತ್ತೇನೆ: ಮಾಜಿ ಸಚಿವ ಸುಧಾಕರ್‌

ಪ್ರತಿ ಅಂಗಾಂಗಗಳು ಹೊರಬಂದಾಗ ಅವುಗಳನ್ನು ಇರಿಸಿದ್ದ ಬಾಕ್ಸ್ಗಳಿಗೆ ತಂದೆ,ತಾಯಿ ನಮಸ್ಕರಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಈ ಪ್ರಕರಣದಲ್ಲಿ ಬಾಲಕಿಯ ದೇಹದಾನ ರಾಜ್ಯಮಟ್ಟದಲ್ಲಿ ದೊಡ್ಡಸುದ್ದಿಯಾಯಿತು. ಆದರೆ ಜಿಲ್ಲಾಮಟ್ಟದ ಆಸ್ಪತ್ರೆಯಲ್ಲಿ ಅಂಗಾಂಗಗಳನ್ನು ಹೊರತೆಗೆದಿರುವುದು ಆಸ್ಪತ್ರೆಯ ಸಾಧನೆ ಪ್ರಚಾರಕ್ಕೆ ಬರಲಿಲ್ಲ, ಜಿಲ್ಲಾಮಟ್ಟದ ಆಸ್ಪತ್ರೆವೊಂದು ಈ ರೀತಿಯ ಸಾಧನೆ ಮಾಡಿರುವುದನ್ನು ಗಮನಿಸಿ ಜಿಲ್ಲಾಸ್ಪತ್ರೆಗೆ ರಾಜ್ಯಮಟ್ಟದ ಪ್ರಶಸ್ತಿನೀಡಿ ಗೌರವಿಸಲಾಗುತ್ತಿದೆ.

click me!