Chikkamagaluru Utsava: ಕೆಸರುಗದ್ದೆ ಅಖಾಡದಲ್ಲಿ ಸ್ಪರ್ಧಾಳುಗಳೊಂದಿಗೆ ಓಡಿದ ಚಿಕ್ಕಮಗಳೂರು ಡಿ.ಸಿ. ರಮೇಶ್

By Suvarna News  |  First Published Jan 17, 2023, 5:51 PM IST

ಚಿಕ್ಕಮಗಳೂರು ಹಬ್ಬದ ಅಂಗವಾಗಿ ಇಂದು ಏರ್ಪಡಿಸಲಾಗಿದ್ದ ಕೆಸರುಗದ್ದೆ ಓಟದ ಸ್ಪರ್ಧೆಯು ಸಾರ್ವಜನಿಕರಿಗೆ ಭರಪೂರ ಮನರಂಜನೆ ಒದಗಿಸಿತು. ವಿಧಾನ ಪರಿಷತ್ ಸದಸ್ಯರು, ಜಿಲ್ಲಾಧಿಕಾರಿಗಳು ಸೇರಿದಂತೆ ಚುನಾಯಿತ ಪ್ರತಿನಿಧಿಗಳು, ಸರ್ಕಾರಿ ನೌಕರರು ಕೆಸರುಗದ್ದೆಗಿಳಿದು ಎದ್ದು, ಬಿದ್ದು ಓಡಿದರು.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಜ.17): ಚಿಕ್ಕಮಗಳೂರು ಹಬ್ಬದ ಅಂಗವಾಗಿ ಇಂದು ಏರ್ಪಡಿಸಲಾಗಿದ್ದ ಕೆಸರುಗದ್ದೆ ಓಟದ ಸ್ಪರ್ಧೆಯು ಸಾರ್ವಜನಿಕರಿಗೆ ಭರಪೂರ ಮನರಂಜನೆ ಒದಗಿಸಿತು. ವಿಧಾನ ಪರಿಷತ್ ಸದಸ್ಯರು, ಜಿಲ್ಲಾಧಿಕಾರಿಗಳು ಸೇರಿದಂತೆ ಚುನಾಯಿತ ಪ್ರತಿನಿಧಿಗಳು, ಸರ್ಕಾರಿ ನೌಕರರು ಕೆಸರುಗದ್ದೆಗಿಳಿದು ಎದ್ದು, ಬಿದ್ದು ಓಡಿದರು. ಚಿಕ್ಕಮಗಳೂರು ನಗರದ ನೆಲ್ಲೂರು ರಸ್ತೆಯ ಪಕ್ಕದ ಗ್ದದೆಯಲ್ಲಿ ಆಯೋಜಿಸಲಾಗಿದ್ದ ಸ್ಪರ್ಧೆಗಳಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಸಿಡಿಎ ಅಧ್ಯಕ್ಷ ಸಿ.ಆನಂದ್, ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಉಪ ವಿಭಾಗಾಧಿಕಾರಿ ರಾಜೇಶ್ ಸೇರಿದಂತೆ ಕಂದಾಯ ಇಲಾಖೆ, ಅರಣ್ಯ ಹಾಗೂ ಪೊಲಿಸ್ ಇಲಾಖೆ ಸಿಬ್ಬಂದಿಗಳು ಗ್ರಾ.ಪಂ. ಅಧ್ಯಕ್ಷರು, ಸದಸ್ಯರು ಹಾಗೂ ನೂರಾರು ಮಹಿಳೆಯರು, ಸಾರ್ವಜನಿಕರು ಕೆಸರುಗದ್ದೆಯಲ್ಲಿ ಓಡಿ ಸಂತಸ ಪಟ್ಟರು.

Latest Videos

undefined

ಕೆಸರು ಗದ್ದೆಯಲ್ಲಿ ಎದ್ದು ಬಿದ್ದು ಓಡಿದ ಅಧಿಕಾರಿಗಳು: 
ಕೆಸರಿನಲ್ಲಿ ಓಡುವ ಸ್ಪರ್ಧೆ ಜೊತೆಗೆ ಪತಿ-ಪತ್ನಿ ಸ್ಪರ್ಧೆ, ಲೆಮನ್ ಅಂಡ್ ಸ್ಪೂನ್, ಜೋಡಿ ಓಟ, ಹಗ್ಗ ಜಗ್ಗಾಟ ಸೇರಿದಂತೆ ವಿವಿಧ ಆಟಗಳನ್ನು ಕೆಸರಿನಲ್ಲಿ ಆಡಿಸಲಾಯಿತು. ಕೆಲವರು ಕೆಸರಿನಲ್ಲಿ ಹೂತುಕೊಂಡು ಮೇಲೇಳಲಾಗದೆ ಸ್ಪರ್ಧೆ ಮುಗಿಸಿದರೆ, ಮತ್ತೆ ಕೆಲವರು ಅರ್ಧದಲ್ಲೇ ಮುಗ್ಗರಿಸಿದರು. ಇನ್ನೂ ಕೆಲವರು ಗೆಲುವಿನ ಗೆರೆಯವರೆಗೆ ಬಂದು ಎಡವಿದರು. ಸ್ಪರ್ಧೆಗಳನ್ನು ವೀಕ್ಷಿಸಲು ಸೇರಿದ್ದ ದೊಡ್ಡ ಸಂಖ್ಯೆಯ ಪ್ರೇಕ್ಷರು ಕರತಾಡನ ಮಾಡಿ, ಸೀಟಿ ಹೊಡೆದು ಹುರಿದುಂಬಿಸಿದರು. ಅಪರೂಪಕ್ಕೊಮ್ಮೆ ಸಿಗುವ ಅವಕಾಶವನ್ನು ಬಳಸಿಕೊಳ್ಳಲು ಬಹುತೇಕರು ಸ್ಪರ್ದೆಗಿಳಿದು ಶಕ್ತಿ ಪ್ರದರ್ಶನ ಮಾಡಿದರು.

ನಶಿಸಿ ಹೋಗುತ್ತಿರುವ ಕ್ರೀಡೆಗಳಿಗೆ ಪುನರುಜ್ಜೀವನ :
ಸ್ಪರ್ಧೆಗಳಿಗೆ ಚಾಲನೆ ನೀಡಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ಗ್ರಾಮೀಣಕ್ರಿಡೆಗಳು ನಶಿಸಿಹೋಗುತ್ತಿರುವ ಸಂದರ್ಭದಲ್ಲಿ ಹೆಚ್ಚಿನ ಒತ್ತುಕೊಡುವ ಕೆಲಸ ಆಗಬೇಕಿದೆ. ಇಂದಿನ ಆಧುನಿಕ ದಿನಗಳಲ್ಲಿ ಮಕ್ಕಳಿಗೆ ಗ್ರಾಮೀಣ ಕ್ರೀಡೆಗಳ ಬಗ್ಗೆ ಮಾಹಿತಿಯೇ ಇರುವುದಿಲ್ಲ.ವಚನ ಸಾಹಿತ್ಯ, ದಾಸ ಸಾಹಿತ್ಯಗಳ ಜೊತೆಗೆ ಗ್ರಾಮೀಣ ಆಟಗಳನ್ನು ಆಗಾಗ ಈ ರೀತಿ ಪರಿಚಯಿಸುವ ಕೆಲಸ ಅಬೇಕಿದೆ. ಕೃಷಿ ಆಧಾರಿತ ಬದುಕು ನಮ್ಮದಾಗಿರುವ ಹಿನ್ನೆಲೆಯಲ್ಲಿ ಎಲ್ಲರೂ ಒಳಗೊಳ್ಳಬೇಕು ಎಂದು ತಿಳಿಸಿದರು.

ಚಿಕ್ಕಮಗಳೂರು ಹಬ್ಬದ ಅಂಗವಾಗಿ ಆಯೋಜಿಸಿದ್ದ ಕುಸ್ತಿ ಪಂದ್ಯಾವಳಿ, ಜಟ್ಟಿಗಳಿಗೆ ಪ್ರೇಕ್ಷಕರ ಚಪ್ಪಾಳೆ

ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮಾತನಾಡಿ, ನಮ್ಮ ದೇಶದ ಎಲ್ಲಾ ಕ್ರೀಡೆಗಳು ಪ್ರಾರಂಭ ಆಗಿರುವುದೇ ಗ್ರಾಮೀಣ ಪ್ರದೇಶಗಳಲ್ಲಿ ಆದರೆ ಈಗ ನಶಿಸಿಹೋಗುತ್ತಿರುವ ಕ್ರೀಡೆಗಳಿಗೆ ಪುನರುಜ್ಜೀವನ ನೀಡುವ ಸಲುವಾಗಿ ಸರ್ಕಾರ ನಡೆಸುವ ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚು ಒತ್ತು ನೀಡಲು ತೀರ್ಮಾನಿಸಲಾಗಿದೆ. ಇಂತಹ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಸ್ಪರ್ಧಾಳುಗಳಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದು ತಿಳಿಸಿದರು.

Chikkamagaluru Utsava: ಹಬ್ಬದ ಅಂಗವಾಗಿ ದೇಶ ವಿದೇಶಗಳ ವಿವಿಧ ಬಗೆಯ ಹೂವಿನ

ಉಪ ವಿಭಾಗಾಧಿಕಾರಿ ರಾಜೇಶ್ ಮಾತನಾಡಿ, ಗ್ರಾಮೀಣ ಕ್ರೀಡೆಗೆ ಉತ್ತೇಜನ ನೀಡುವುದು ಹಾಗೂ ಅದರ ಮೌಲ್ಯ ಎಷ್ಟಿದೆ ಎನ್ನುವುದು ಎಲ್ಲರಿಗೂ ಗೊತ್ತಾಗಬೇಕು ಎನ್ನುವ ಕಾರಣಕ್ಕೆ ಸ್ಪರ್ಧೆ ಏರ್ಪಡಿಸಿದೆ ಎಂದರು.ನಾವೂ ಸಹ ರೈತ ಕುಟುಂಬದಿಂದ ಬಂದವರು ಆದರೂ ಸುಮಾರು 22 ವರ್ಷದಿಂದ ಗದ್ದೆಗೆ ಇಳಿದಿರಲಿಲ್ಲ. ಇಂದು ಎಲ್ಲರ ಜೊತೆ ಓಡಿದ ಅನುಭವ ರೊಂಮಾಂಚನವಾಗಿತ್ತು. ಮೂರು ಬಾರಿ ಜಾರಿ ಬಿದ್ದರೂ ಅದರ ಆನಂದವೇ ಬೇರೆಯಾಗಿತ್ತು ಎಂದರು.

click me!