ಚಿಕ್ಕಮಗಳೂರು ನಗರಸಭೆ ಸಿಬ್ಬಂದಿ ಕರ್ತವ್ಯಕ್ಕೆ ಚಕ್ಕರ್...ದಿ ಕಾಶ್ಮೀರ್ ಫೈಲ್ಸ್ ಸಿನಿಮಾಕ್ಕೆ ಹಾಜರ್

By Suvarna News  |  First Published Mar 21, 2022, 7:01 PM IST

* ನಗರಸಭೆ ಸಿಬ್ಬಂದಿ ಕರ್ತವ್ಯಕ್ಕೆ ಚಕ್ಕರ್...ದಿ ಕಾಶ್ಮೀರ್ ಫೈಲ್ಸ್ ಸಿನಿಮಾಕ್ಕೆ ಹಾಜರ್
* ಕೆಲಸದ ಹಾಜರಾತಿ ಪುಸಕ್ತಕ್ಕೆ ಸಹಿ, ಕೆಲಸಕ್ಕೆ ಚಕ್ಕರ್ ಹಾಕಿ ಸಿನಿಮಾಕ್ಕೆ
* ಚಿಕ್ಕಮಗಳೂರು ನಗರಸಭೆಯಲ್ಲಿ ಅಧಿಕಾರಿಗಳು ಸಿಬ್ಬಂದಿಗಳು ಇಲ್ಲದೇ ಖಾಲಿ ಖಾಲಿ
* ದಿ ಕಾಶ್ಮೀರ ಫೈಲ್ಸ್ ಸಿನಿಮಾ ನೋಡಲು ಹೋದವರ ವಿರುದ್ದ ಕಾಂಗ್ರೇಸ್ ಪ್ರತಿಭಟನೆ.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್  ಸುವರ್ಣ ನ್ಯೂಸ್ ಚಿಕ್ಕಮಗಳೂರು

 

Tap to resize

Latest Videos

ಚಿಕ್ಕಮಗಳೂರು, (ಮಾ.21): 32 ವರ್ಷಗಳ ಹಿಂದೆ ಕಾಶ್ಮೀರದಲ್ಲಿ ನಡೆದ ಘಟನೆಯನ್ನು  ದಿ ಕಾಶ್ಮೀರ್ ಫೈಲ್ಸ್ (The Kashmir Files) ಮೂಲಕ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತೆರೆಗೆ ತಂದಿದ್ದಾರೆ. ಕಾಶ್ಮೀರ ಪಂಡಿತರ ಮೇಲಾದ ದೌರ್ಜನ್ಯ, ನಿರಾಶ್ರಿತರು, ಹತ್ಯೆಯನ್ನು ಸಿನಿಮಾದಲ್ಲಿ ತೋರಿಸಿದ್ದಾರೆ.

ಈ ಚಿತ್ರ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ರಾಜ್ಯದಲ್ಲೂ ದಿ ಕಾಶ್ಮೀರ ಫೈಲ್ಸ್ ಗೆ ತೆರಿಗೆ ವಿನಾಯಿತಿಯನ್ನು ನೀಡಲಾಗಿದೆ. ಆಡಳಿಯ ಪಕ್ಷವಾದ ಬಿಜೆಪಿ ಈ ಸಿನಿಮಾವನ್ನು ಜನರಿಗೆ ತೋರಿಸುವ ಉತ್ಸಾಹದಲ್ಲಿದೆ. ಈ ಮಧ್ಯೆ ಚಿಕ್ಕಮಗಳೂರು ನಗರಸಭೆಯ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಈ ಸಿನಿಮಾವನ್ನು ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳಿಗೆ ತೋರಿಸುವ ಭರದಲ್ಲಿ  ವಿವಾದಕ್ಕೆ ಗುರಿಯಾಗಿದೆ. 

The Kashmir Files Free Download ಲಿಂಕ್‌ ಬಗ್ಗೆ ಸೈಬರ್‌ ತಜ್ಞರ ಎಚ್ಚರಿಕೆ!

ಅಧಿಕಾರಿಗಳು ಇಲ್ಲದೇ ನಗರಸಭೆ ಖಾಲಿ ಖಾಲಿ 
ಇವತ್ತು ಸೋಮವಾರ ಸರ್ಕಾರಿ ಕಛೇರಿಗೆ ರಜೆ ಇಲ್ಲ, ಅದ್ರೂ ಚಿಕ್ಕಮಗಳೂರು ನಗರಸಭೆಯಲ್ಲಿ  ಕುರ್ಚಿಗಳು  ಅಧಿಕಾರಿ, ಡಿ ದರ್ಜೆ ಸಿಬ್ಬಂದಿಗಳು ಇಲ್ಲದೇ ಖಾಲಿ ಖಾಲಿ ಆಗಿತ್ತು. ಹಾಜರಾತಿ ಪುಸಕ್ತವನ್ನು ನೋಡಿದ್ರೆ ಅಧಿಕಾರಿಗಳ, ಸಿಬ್ಬಂದಿಗಳು ಸಹಿ ಇತ್ತು. ಎಲ್ಲಿಗೆ ಹೋಗಿದ್ದಾರೆ ಎಂದು ಸಾರ್ವಜನಿಕರು ಪ್ರಶ್ನೆಸಿಲು ಶುರುಮಾಡಿದ್ದಾರೆ. ಆಗ ಅಧಿಕಾರಿಗಳು ಸಿಬ್ಬಂದಿಗಳು (Chikkamagaluru Municipality Staff) ಕರ್ತವ್ಯಕ್ಕೆ ಚಕ್ಕರ್ ಹಾಕಿ ಎಲ್ಲಾರು ದಿ ಕಾಶ್ಮೀರ್ ಫೈಲ್ಸ್ ಸಿನಿಮಾಕ್ಕೆ ಹಾಜರ್ ಆಗಿರುವ ಮಾಹಿತಿ ಸಿಕ್ಕಿದೆ. ಇದರಿಂದ ಕೆಲಸದ ನಿಮಿತ್ತ ನಗರಸಭೆಗೆ ಬಂದ ಸಾರ್ವಜನಿಕರು ವಾಪಸ್ಸು ಮನೆಗೆ ತೆರಳಿದ್ದಾರೆ. 

ಸಿನಿಮಾ ವೀಕ್ಷಣೆಗೆ ಅಧ್ಯಕ್ಷರಿಂದಲೇ ಆಹ್ವಾನ 
ನಗರದ ಶ್ರೀಲೇಖ ಚಿತ್ರಮಂದಿರದಲ್ಲಿ ದಿ ಕಾಶ್ಮೀರ ಫೈಲ್ಸ್ ಸಿನಿಮಾವನ್ನು ಉಚಿತವಾಗಿ ತೋರಿಸುವುದಾಗಿ ನಗರಸಭೆ ಅಧ್ಯಕ್ಷ ವರಸಿದ್ದ ವೇಣುಗೋಪಾಲ್ ನಿನ್ನೆಯೇ ಎಲ್ಲಾರಿಗೂ ವಾಟ್ಸಾಫ್ ಸಂದೇಶ ಕಳುಹಿಸಿದ್ದಾರೆ. ಈ ಹಿನ್ನಲೆಯಲ್ಲಿ ಬೆಳಿಗ್ಗೆ ಎಂದಿನಂತೆ ಕೆಲಸಕ್ಕೆ ಬಂದ ಸಿಬ್ಬಂದಿಗಳು ಹಾಜರಾತಿ ಪುಸಕ್ತದಲ್ಲಿ ಸಹಿಹಾಕಿ ಬೆಳಿಗ್ಗಿನ ಶೋ 11.30ಕ್ಕೆ ಸಿನಿಮಾಕ್ಕೆ ತೆರಳಿದ್ದಾರೆ.100ಕ್ಕೂ ಹೆಚ್ಚು ಸಿಬ್ಬಂದಿಗಳು ಸಿನಿಮಾಕ್ಕೆ ಹೋಗಿದ್ದಾರೆ. ಬೆರಳೆಣಿಕೆಯಷ್ಟು ಸಿಬ್ಬಂದಿಗಳು ಮಾತ್ರ ಕೆಲಸದಲ್ಲಿ ಹಾಜರಿದ್ದರು. 

ಸಿಬ್ಬಂದಿಗಳ ವಿರುದ್ದ ಕಾಂಗ್ರೆಸ್ ಪ್ರತಿಭಟನೆ
ಕೆಲಸಕ್ಕೆ ಚಕ್ಕರ್ ಹಾಕಿ ಎಲ್ಲಾರೂ ಸಿನಿಮಾಕ್ಕೆ ತೆರಳಿದ ಪರಿಣಾಮ ಇಡೀ ನಗರಸಭೆ ಖಾಲಿ ಖಾಲಿ ಆಗಿತ್ತು. ನಗರಸಭೆಗೆ ಕೆಲಸದ ನಿಮಿತ್ತ ಬಂದ ಕೆಲ ಸಾರ್ವಜನಿಕರು ಕೆಲಹೊತ್ತು ಪರದಾಟ ನಡೆಸಿದರು. ಕಛೇರಿ ಇರುವ ದಿನ ಸಿನಿಮಾಕ್ಕೆ ಹೋಗಿರುವ ಬಗ್ಗೆ ಕೆಲ ಸಾರ್ವಜನಿಕರು ಅಪಸ್ವರವನ್ನು ಎತ್ತಿದ್ದರು. ನಿನ್ನೆ ಭಾನುವಾರ ರಜೆ ಇತ್ತು ಎಲ್ಲಾ ಸಿಬ್ಬಂದಿಗಳು ಸಿನಿಮಾಗೆ ಹೋಗಬಹುದಾಗಿತ್ತು. ಆದ್ರೆ ಸೋಮವಾರ ಕಛೇರಿ ಇರುವ ದಿನ ಹೋಗಿರುವ ಬಗ್ಗೆ ಕೆಲವರು ಅಸಮಾಧಾನವನ್ನು ಹೊರಹಾಕಿದರು. 

ಈ ವಿಚಾರ ಗೋತ್ತಾದ ತಕ್ಷಣ ನಗರಸಭೆಗೆ ತೆರಳಿದ ಕಾಂಗ್ರೆಸ್  (Congress) ಮುಖಂಡರು , ಕಾರ್ಯಕರ್ತರು ನಗರಸಭೆ ಅಧ್ಯಕ್ಷ, ಸಿಬ್ಬಂದಿಗಳು ವಿರುದ್ದ ಘೋಷಣೆಗಳನ್ನು ಕೂಗಿದರು. ಕೆಲ ಕಾಲ ನಗರಸಭೆ ಆವರಣದ ಒಳಗೆ ಪ್ರತಿಭಟನೆ ನಡೆಸಿದರು. ತದನಂತೆ  ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಜಿಲ್ಲಾಧಿಕಾರಿ ಕೆ ಎನ್ ರಮೇಶ್ ಗೆ ನಗರಸಭೆ ಅಧಿಕಾರಿ,  ಸಿಬ್ಬಂದಿಗಳು ವಿರುದ್ದ ಕ್ರಮ ಕೈಗೊಳ್ಳುವಂತೆ ಮನವಿಯನ್ನು ಸಲ್ಲಿಸಿದರು.ಸಿನಿಮಾವನ್ನು ನೋಡುದು ತಪ್ಪಲ್ಲ, ಆದ್ರೆ ಕೆಲಸಕ್ಕೆ ಚಕ್ಕರ್ ಹಾಕಿ ಸಿನಿಮಾ ನೋಡಲು ಹೋಗಿದ್ದು ತಪ್ಪು ಎಂದು ಕಾಂಗ್ರೇಸ್ ಮುಖಂಡರು ಆಕ್ರೋಶವನ್ನು ಹೊರಹಾಕಿದರು.

click me!