ಜಾತ್ರೆಗೆ ಸನ್ನಿ ಲಿಯೋನ್ ಅಭಿಮಾನಿ ಬಳಗದಿಂದ ಸ್ವಾಗತ ಸುಸ್ವಾಗತ

By Suvarna News  |  First Published Mar 21, 2022, 6:28 PM IST

* ಜಾತ್ರೆಗೆ ಸನ್ನಿ ಲಿಯೋನ್ ಅಭಿಮಾನಿ ಬಳಗದಿಂದ ಸ್ವಾಗತ
* ಸನ್ನಿ ಲಿಯೋನ್ ಅಭಿಮಾನಿಗಳು ಜಾತ್ರೆಗೆ ಸ್ವಾಗತ ಕೋರಿ ಫ್ಲೇಕ್ಸ್
* ಊರ ಜಾತ್ರೆಯಲ್ಲಿ ಗಮನಸೆಳೆದ ಸನ್ನಿ ಲಿಯೋನ್  ಫ್ಲೇಕ್ಸ್


ವರದಿ: ದೊಡ್ಡೇಶ್ ಯಲಿಗಾರ್ ಏಷ್ಯಾಯಾನೆಟ್ ಸುವರ್ಣ ನ್ಯೂಸ್

ಕೊಪ್ಪಳ, (ಮಾ.21):
ಸನ್ನಿ ಲಿಯೋನ್  (Sunny Leone) ಯಾರಿಗೆ ತಾನೇ ಗೋತ್ತಿಲ್ಲ ಹೇಳಿ.‌ಅದರಲ್ಲಿಯೂ ವಿಶೇಷವಾಗಿ ಪಡ್ಡೆ ಹುಡುಗರ ಹಾಟ್ ಫೇವರೆಟ್ ಈ ಸನ್ನಿ ಲಿಯೋನ್. ಇಷ್ಟು ದಿನಗಳ ಕಾಲ ಸನ್ನಿ ಲಿಯೋನ್ ನ ಅಭಿಮಾನಿಗಳು ಕೇವಲ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇದೀಗ ಸನ್ನಿ ಲಿಯೋನ್ ಅಭಿಮಾನಿಗಳು ಗ್ರಾಮೀಣ ಪ್ರದೇಶದಲ್ಲಿಯೂ ಸಹ ಕಾಣಿಸಿಕೊಳ್ಳಲು ಆರಂಭ ಮಾಡಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಇಲ್ಲೊಂದು ಗ್ರಾಮವೊಂದರಲ್ಲಿ ಸನ್ನಿ ಲಿಯೋನ್ ಅಭಿಮಾನಿಗಳು ಜಾತ್ರೆಗೆ ಸ್ವಾಗತ ಕೋರಿ ಫ್ಲೇಕ್ಸ್ ವೊಂದನ್ನು ಹಾಕಿರುವುದು ಇದೀಗ ಭಾರೀ ವೈರಲ್ ಆಗಿದೆ.

ಹಾವೇರಿಯ ಜಾತ್ರೆಗೆ ಸ್ವಾಗತ ಕೋರಿದ ಸನ್ನಿ ಲಿಯೋನ್ ಅಭಿಮಾನಿಗಳು!

Tap to resize

Latest Videos

ಹೌದು....ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಅತ್ಯಂತ ಕಟ್ಟಕಡೆಯ ಗ್ರಾಮ ಹಾಬಲಕಟ್ಟಿ ಗ್ರಾಮ. ಈ ಗ್ರಾಮದಲ್ಲಿ ಶರಣಬಸವೇಶ್ವರ ಜಾತ್ರೆ ಏರ್ಪಡಿಸಲಾಗಿತ್ತು. ಈ ವೇಳೆಯಲ್ಲಿ ಹಲವಾರು ಜನ ಜಾತ್ರೆಗೆ ಶುಭಾಶಯ ಕೋರಿ ಫ್ಲೇಕ್ಸ್ ಗಳನ್ನು ಹಾಕಿದ್ದರು. ಆದರೆ ಆ ಫ್ಲೇಕ್ಸ್ ಗಳ ಪೈಕಿ ಹೆಚ್ಚು ಗಮನಸೆಳೆದದ್ದು ಮಾತ್ರ ಸನ್ನಿ ಲಿಯೋನ್ ಅಭಿಮಾನಿಗಳು ಹಾಕಿದ್ದ ಫ್ಲೇಕ್ಸ್. 

ಹಾಬಲಕಟ್ಟಿ ಗ್ರಾಮದಲ್ಲಿ ಸನ್ನಿ ಲಿಯೋನ್ ಅಭಿಮಾನಿಗಳಿದ್ದು, ಇವರೆಲ್ಲರೂ ತಮ್ಮನ್ನು ತಾವು ಸನ್ನಿ ಲಿಯೋನ್ ಬಾಯ್ಸ್ ಎಂದು ಕರೆದುಕೊಳ್ಳುತ್ತಾರೆ. ಹೀಗಾಗಿ ಇವರೆಲ್ಲರೂ ಸೇರಿಕೊಂಡು ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಾಬಲಕಟ್ಟಿ ಗ್ರಾಮದ ಸನ್ನಿ ಲೊಯೋನ್ ಬಾಯ್ಸ್ ಕಡೆಯಿಂದ ಸರ್ವರಿಗೂ ಸುಸ್ವಾಗತ ಎಂದು ಫ್ಲೇಕ್ಸ್ ಹಾಕಿದ್ದಾರೆ. ಈ ಫ್ಲೇಕ್ಸ್ ನಲ್ಲಿ ಸನ್ನಿ ಲಿಯೋನ್ ಅಭಿಮಾನಿಗಳ  ಅನೇಕ ಯುವಕರ ಫೋಟೋಗಳು ಸಹ ಇವೆ.

ಇನ್ನು ಹಾಬಲಕಟ್ಟಿ ಗ್ರಾಮದಲ್ಲಿ ಜಾತ್ರೆಯ ಜೊತೆಗೆ  ಸಾಮೂಹಿಕ ವಿವಾಹಗಳನ್ನು ಸಹ  ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಜಾತ್ರೆ ಹಾಗೂ ಸಾಮೂಹಿಕ ವಿವಾಹಕ್ಕೆ ಬಂದು ಜನರಿಗೆ ಸನ್ನಿ ಲಿಯೋನ್ ಅಭಿಮಾನಿಗಳ ಈ ಸ್ವಾಗತ ಫ್ಲೇಕ್ಸ್ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಎಲ್ಲರೂ ಈ ಫ್ಲೇಕ್ಸ್ ನೋಡಿ ಅರೇ ಇದೇನಪ್ಪ ಜಾತ್ರೆಯಲ್ಲಿ ಸನ್ನಿ ಲಿಯೋನ್ ಅಭಿಮಾನಿಗಳ ಫ್ಲೇಕ್ಸಾ ಎಂದು ಆಶ್ಚರ್ಯ ಪಡುತ್ತಿದ್ದರು.

ಒಟ್ಟಿನಲ್ಲಿ ಇಷ್ಟು ದಿನ ಜಾತ್ರೆಗಳಲ್ಲಿ ಗ್ರಾಮಸ್ಥರ,ರಾಜಕೀಯ ನಾಯಕರ,ಮುಖಂಡರ ಫ್ಲೇಕ್ಸ್ ಹಾಕಲಾಗುತ್ತಿತ್ತು. ಆದರೆ ಇದೀಗ ಹಾಬಲಕಟ್ಟಿ ಗ್ರಾಮದ ಶರಣಬಸವೇಶ್ವರ ಜಾತ್ರೆಯಲ್ಲಿ ಸನ್ನಿ ಲಿಯೋನ್ ಅಭಿಮಾನಿಗಳ ಫ್ಲೇಕ್ಸ್ ಹಾಕಿರುವುದು ವಿಶೇಷವೇ ಸರಿ.

ಸನ್ನಿ ಅಭಿಮಾನಿಗಳ ಸಂಘ
ಮಾಜಿ ನೀಲಿತಾರೆ, ಬಾಲಿವುಡ್ ನಟಿ ಸನ್ನಿ ಲಿಯೋನ್ ಅಂದರೆ ಮೂಗು ಮುರಿದುಕೊಳ್ಳುವವರೆ ಜಾಸ್ತಿ. ಆಕೆ ನೀಲಿತಾರೆ ಎನ್ನುವ ಕಾರಣಕ್ಕಾಗಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಬಹಿರಂಗವಾಗಿ ‘ತಾವು ಸನ್ನಿಲಿಯೋನ್ ಅಭಿಮಾನಿ’ ಎಂದು ಹೇಳಿಕೊಳ್ಳುವುದಿಲ್ಲ. ಆದರೆ, ಕರ್ನಾಟಕದಲ್ಲಿ, ಅದರಲ್ಲೂ ಹೈದರಾಬಾದ್ ಕರ್ನಾಟಕದಲ್ಲಿ ‘ಸನ್ನಿ ಲಿಯೋನ್ ಅಭಿಮಾನಿ ಸಂಘ’ಗಳು ಎರಡು ಇವೆ. ಬಹಿರಂಗವಾಗಿಯೇ ತಾವು ಸನ್ನಿ ಲಿಯೋನ್ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಎಂದು ಹೇಳುತ್ತಾರೆ. ಹೇಳುವುದಷ್ಟೇ ಅಲ್ಲ, ಸಂಘದ ಬ್ಯಾನರ್ ಅನ್ನು ಸೋಷಿಯಲ್ ಮೀಡಿಯಾದಲ್ಲೂ ಹಾಕುತ್ತಾರೆ.

ಹಾವೇರಿಯಲ್ಲೂ ಸನ್ನಿ ಫ್ಯಾನ್ಸ್
ಶ್ರೀ ಶ್ರೀ ಶರಭಾರ್ಯ ಸ್ವಾಮಿ ಹಾಗೂ ಶ್ರೀ ರಾಜೇಶ್ವರಿ ದೇವಿ ಜಾತ್ರಾ ಮಹೋತ್ಸವಕ್ಕೆ ಸರ್ವರಿಗೂ ಸ್ವಾಗತ ಎಂದು ಕೋರಿದ್ದಾರೆ.  ಸ್ವಾಗತ ಕೋರುವವರು ಸನ್ನಿ ಲಿಯೋನ್ ಅಭಿಮಾನಿ ಬಳಗ ಹುಲ್ಲೂರು ಅಂತ ಇದೆ. ಹಾವೇರಿ ಜಿಲ್ಲೆಯಲ್ಲಿ ಹುಲ್ಲೂರು ಎಂಬ ಊರಿದೆ ಎನ್ನುವುದು ಮಾಹಿತಿ. ಒಟ್ಟಿನಲ್ಲಿ ಈ ಪೋಸ್ಟರ್ ಮಾತ್ರ ಸಖತ್ ವೈರಲ್ ಆಗುತ್ತಿದೆ. 

click me!