ಹಿಂದೂ ಎಂಬ ಶಬ್ದವೇ ಅವಮಾನಕರ, ಅದನ್ನು ತೆಗೆದುಹಾಕಿ : ಫ್ರೊ.ಕೆ.ಎಸ್ ಭಗವಾನ್

By Suvarna NewsFirst Published Oct 11, 2020, 1:26 PM IST
Highlights

ಹಿಂದೂ ಎಂಬ ಶಬ್ದವೇ ಅವಮಾನಕರ. ಅದನ್ನು ತೆಗೆದು ಹಾಕಿ. ಅದು ಮುಸ್ಲಿಂರು ಇಟ್ಟ ಹೆಸರಾಗಿದೆ ಎಂದು ಮೈಸೂರಿನಲ್ಲಿ ಕೆ.ಎಸ್ ಭಗವಾನ್ ಹೇಳಿದ್ದಾರೆ

ಮೈಸೂರು (ಅ.11) : ಹಿಂದೂ ಎಂಬ ಶಬ್ದ ಅವಮಾನಕರ. ಹಿಂದೂ ಧರ್ಮ ಧರ್ಮವೇ  ಅಲ್ಲ ಎಂದು ಪ್ರೊ.ಕೆ.ಎಸ್.ಭಗವಾನ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ಮೈಸೂರಿನಲ್ಲಿ ಮಾತನಾಡಿದ ಪ್ರೊ.ಭಗವಾನ್ ಹಿಂದೂ ಧರ್ಮ ಎಂದರೆ ಬ್ರಾಹ್ಮಣ ಎಂದರ್ಥ.  ಗ್ರಾಮೀಣ ಜನರಿಗೆ ಹಿಂದೂ ಎಂದರೆ ಗೊತ್ತೆ ಇಲ್ಲ. ನೀವು ಯಾವ ಧರ್ಮ ಎಂದರೆ ವಕ್ಕಲಿಗ, ಕುರುಬ ಅಂತ ಜಾತಿಗಳ ಹೆಸರನ್ನಷ್ಟೇ ಹೇಳುತ್ತಾರೆ. 

ದೇವರನ್ನು ಗಟಾರಕ್ಕೆ ಎಸೆಯಿರಿ: ಭಗವಾನ್ ..

 ಹಿಂದೂ‌ ಪದವನ್ನೇ ತೆಗೆದು ಹಾಕಬೇಕು ಎಂದು ಮೈಸೂರಿನಲ್ಲಿ ಪ್ರೊ.ಕೆ.ಎಸ್.ಭಗವಾನ್ ಹೇಳಿದ್ದಾರೆ.  ಮುಸ್ಲಿಂರನ್ನ ಕೊಳಕು ಎನ್ನುವ ನೀವು ಅವರಿಂದ ಬಾಯಿಂದ ಬಂದಿರುವ ಹಿಂದೂ ಪದವನ್ನ ನಿಮ್ಮ ಧರ್ಮಕ್ಕೆ ಇಟ್ಟಿದ್ದೀರ. ನಿಮಗೆ ಮಾನ ಮರ್ಯಾದೆ ಇದ್ದರೆ ಆ ಪದ ತೆಗೆದು ಹಾಕಿ ಎಂದಿದ್ದಾರೆ.

ಪರ್ಶಿಯನ್ನರು ಸಿಂಧೂ ಪದವನ್ನು ಹಿಂದೂ ಎಂದರು.  ಅವರು ಬಳಸಿದ ಪದವನ್ನ ನಿಮ್ಮ ಧರ್ಮದ ಹೆಸರಿಗೆ ಬಳಸಿಕೊಂಡಿದ್ದೀರ. ಹಿಂದೂ ಎಂದರೆ ಬ್ರಾಹ್ಮಣರು, ಉಳಿದವರೆಲ್ಲಾ ಶೂದ್ರರು.  ಶೂದ್ರರೂ ಎಂದರೆ ಮನುಸ್ಮೃತಿಯಲ್ಲಿ ವೇಶ್ಯೆಯರು ಎಂದು ಉಲ್ಲೇಖವಾಗಿದೆ ಆ ಪದ ಬಿಟ್ಟು ನಿಮಗೆ ಬೇರೆ ಹುಡುಕಲು ಆಗಿಲ್ಲವೇ ಎಂದು ಮೈಸೂರಿನಲ್ಲಿ ಪ್ರೊ‌.ಕೆ.ಎಸ್.ಭಗವಾನ್ ಹೇಳಿಕೆ.

click me!