ಮತೀಯ ಗಲಭೆ, ಬಂದೋಬಸ್ತ್, ದರೋಡೆ, ಕೊಲೆ ಪ್ರಕರಣಗಳನ್ನು ಭೇದಿಸುವಲ್ಲಿ ತಾಂತ್ರಿಕವಾಗಿ ಪ್ರಮುಖ ಪಾತ್ರ ವಹಿಸಿದ ಚಿಕ್ಕಮಗಳೂರಿನ ಪೊಲೀಸ್ ಕಾನ್ಸ್‌ಟೇಬಲ್‌ಗೆ ಮುಖ್ಯಮಂತ್ರಿಗಳ ಪದಕ ಲಭಿಸಿದೆ.
ಚಿಕ್ಕಮಗಳೂರು (ಏ.01): ಮತೀಯ ಗಲಭೆ, ಬಂದೋಬಸ್ತ್, ದರೋಡೆ, ಕೊಲೆ ಪ್ರಕರಣಗಳನ್ನು ಭೇದಿಸುವಲ್ಲಿ ತಾಂತ್ರಿಕವಾಗಿ ಪ್ರಮುಖ ಪಾತ್ರ ವಹಿಸಿದ ಚಿಕ್ಕಮಗಳೂರಿನ (Chikkamagaluru) ಪೊಲೀಸ್ ಕಾನ್ಸ್‌ಟೇಬಲ್‌ಗೆ (Police Constable) ಮುಖ್ಯಮಂತ್ರಿಗಳ ಪದಕ ಲಭಿಸಿದೆ. ಜಿಲ್ಲಾ ಪೊಲೀಸ್ ಕಛೇರಿಯ ಟೆಕ್ನಿಕಲ್ ಸೆಲ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಭು ಎಸ್.ಸಿ. (Prabhu SC ), ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್‌ರವರು 2021- 22ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ಪದಕಕ್ಕೆ (Chief Minister Medal) ಭಾಜನರಾಗಿದ್ದಾರೆ. ಮುಖ್ಯ ಮಂತ್ರಿಗಳ ಪದಕಕ್ಕೆ ಭಾಜನರಾಗಿರುವ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಪ್ರಭು ಎಸ್.ಸಿ.ರವರು ಮೂಲತಃ ಚಿಕ್ಕಮಗಳೂರು ತಾಲ್ಲೂಕು ಸಖರಾಯಪಟ್ಟಣದವರು.
ಕೃಷಿಕ ಕುಟುಂಬದ ಚೌಡಪ್ಪ, ಲಕ್ಷ್ಮಿದೇವಿಯವರ ಪುತ್ರನಾಗಿದ್ದು, ಇವರು ಎಂ.ಎ ಪದವಿಧರರಾಗಿದ್ದು, 2009ರಲ್ಲಿ ಇಲಾಖೆಯಲ್ಲಿ ಸೇವೆಗೆ ಸೇರ್ಪಡೆಗೊಂಡಿದ್ದರು. ಪೋಲಿಸ್ ವರಿಷ್ಟಾಧಿಕಾರಿಗಳ ಗುಪ್ತ ವಿಭಾಗದ ಟೆಕ್ನಿಕಲ್ ಸೆಲ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಮತೀಯ ಗಲಭೆ,ಬಂದೋಬಸ್ತ್, ದರೋಡೆ, ಕೊಲೆ ಪ್ರಕರಣಗಳನ್ನು ಭೇದಿಸುವಲ್ಲಿ ತಾಂತ್ರಿಕವಾಗಿ ಪ್ರಮುಖಪಾತ್ರ ವಹಿಸಿರುವುದನ್ನು ಪರಿಗಣಿಸಿದ ಪೋಲಿಸ್ ಇಲಾಖೆ ಇವರಿಗೆ ಮುಖ್ಯಮಂತ್ರಿಗಳ ಪದಕಕ್ಕೆ ಶೀಫಾರಸ್ಸು ಮಾಡಿತ್ತು. ಸಿಎಂ ಪದಕ ಲಭಸಿರುವುದಕ್ಕೆ ಎಸ್ ಪಿ ಅಕ್ಷಯ್ ಅಭಿನಂದನೆ ಸಲ್ಲಿಸಿದ್ದು, ಪದಕ ಲಭಿಸಿರುವುದಕ್ಕೆ ಪ್ರಭು ಹರ್ಷ ವ್ಯಕ್ತಪಡಿಸಿದ್ದಾರೆ.
undefined
ದೇವರಿಗೆ ಪತ್ರ ಬರೆದ ಅಪ್ಪ: ಮಗನ ಬದುಕನ್ನೇ ಬದಲಿಸುವಂತೆ ದೇವರಲ್ಲಿ ಕೋರಿಕೆ
ಅರಣ್ಯ ಅಧಿಕಾರಿ, ಸಿಬ್ಬಂದಿಗೆ ಸಿಎಂ ಪದಕ: 2020ನೇ ಸಾಲಿನ ಮುಖ್ಯ ಮಂತ್ರಿಗಳ ಪದಕಕ್ಕೆ ( Chief Minister Medal) ಭಾಜನರಾಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯ ಪಟ್ಟಿಯನ್ನು ಅರಣ್ಯ ಇಲಾಖೆ ಬಿಡುಗಡೆ ಮಾಡಿದೆ. ಅರಣ್ಯ (Firest) ಮತ್ತು ವನ್ಯ ಜೀವಿಗಳ ಸಂರಕ್ಷಣೆ, ವನ್ಯ ಜೀವಿಗಳಿಂದ ಮಾನವರ ರಕ್ಷಣೆ ಮತ್ತು ಅರಣ್ಯ ಸಂಪತ್ತು ಕಾಪಾಡುವಲ್ಲಿ ಶ್ರಮಿಸಿರುವ ಸುಮಾರು 25 ಮಂದಿಯನ್ನು ಆಯ್ಕೆ ಮಾಡಲಾಗಿದೆ. 2020ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ (Medal) ಅರ್ಹರಾಗಿರುವವರ ಹುದ್ದೆ ಹಾಗೂ ವಿಭಾಗದ ವಿವರ ಕ್ರಮವಾಗಿ ಈ ರೀತಿ ಇದೆ.
ವಿ. ಗಣೇಶ್ (ವಲಯ ಅರಣ್ಯ ಅಧಿಕಾರಿ- ವನ್ಯಜೀವಿ ಸಂರಕ್ಷಣೆ),ಎಂ.ಸಂತೋಷ್ ಕುಮಾರ್ (ಅರಣ್ಯ ರಕ್ಷಕ-ವನ್ಯಜೀವಿ ಸಂರಕ್ಷಣೆ), ಎಂ.ರಾಮಚಂದ್ರ(ವಾಹನ ಚಾಲಕ -ವನ್ಯಜೀವಿ ಸಂರಕ್ಷಣೆ), ಕೆ.ಮಹೇಶ್ (ವಲಯ ಅರಣ್ಯಾಧಿಕಾರಿ-ಶೌರ್ಯ ಮತ್ತು ದಿಟ್ಟತನ), ಎಸ್.ವಿವೇಕ್ (ವಲಯ ಅರಣ್ಯ ಸಂರಕ್ಷಣಾಧಿಕಾರಿ-ಶೌರ್ಯ ಮತ್ತು ದಿಟ್ಟತನ), ರಾಜುಚಂದ್ರ (ಅರಣ್ಯರಕ್ಷಕ-ಶೌರ್ಯ ಮತ್ತು ದಿಟ್ಟತನ), ಎಲ್.ರವಿ ನಂದನ್ (ಅರಣ್ಯ ರಕ್ಷಕ-ಶೌರ್ಯ ಮತ್ತು ದಿಟ್ಟತನ). ಎಸ್.ಡಿ.ಬಬಲಾದಿ (ವಲಯ ಅರಣ್ಯಾಧಿಕಾರಿ-ಅಭಿವೃದ್ಧಿ), ನಾಗಪ್ಪ ಎಸ್.ಸಿದ್ದರ್ (ಅರಣ್ಯರಕ್ಷಕ-ಅಭಿವೃದ್ಧಿ), ಎಚ್.ದೇವರಾಜಪಾಣ (ಅರಣ್ಯ ರಕ್ಷಕ-ಅಭಿವೃದ್ಧಿ), ಟಿ.ಸುನೀತಾ (ವಲಯ ಅರಣ್ಯಾಧಿಕಾರಿ-ಅರಣ್ಯ ಸಂರಕ್ಷಣೆ), ಕಾಂತರಾಜ (ಉಪವಲಯ ಅರಣ್ಯಾಧಿಕಾರಿ-ಅರಣ್ಯ ಸಂರಕ್ಷಣೆ), ಪರಮೇಶ್ (ಅರಣ್ಯ ಸಂರಕ್ಷಕ-ಅರಣ್ಯ ಸಂರಕ್ಷಣೆ), ಅನ್ಸರ್ (ವಾಹನ ಚಾಲಕ-ಅರಣ್ಯ ಸಂರಕ್ಷಣೆ).
Chikkamagaluru: ಸೂಕ್ತ ಪರಿಹಾರಕ್ಕಾಗಿ ಆಗ್ರಹಿಸಿ ಶ್ರೀಗಂಧ ಬೆಳೆಗಾರರಿಂದ ರಕ್ತದ ಚಳವಳಿ
ಎಚ್.ಸಿ.ಪ್ರಿಯದರ್ಶಿನಿ (ವಲಯ ಅರಣ್ಯ ಸಂರಕ್ಷಣಾಧಿಕಾರಿ-ಕಾರ್ಯಯೋಜನೆ), ಸತ್ಯಬೋಧ ಕೆ.ಪುರೋಹಿತ (ಕ್ಷೇಮಾಭಿವೃದ್ಧಿ ನೌಕರ-ಕಾರ್ಯಯೋಜನೆ). ಸಿ.ಅಂತೋಣಿ ಲಾರೆನ್ಸ್ (ಉಪವಲಯ ಅರಣ್ಯಸಂರಕ್ಷಣಾಧಿಕಾರಿ-ತರಬೇತಿ) ಕೆ.ರಾಮಚಂದ್ರ(ಅರಣ್ಯ ರಕ್ಷಕ-ಸಂಶೋಧನೆ), ಜಿ.ಬಾಲಕೃಷ್ಣ (ಉಪವಲಯ ಅರಣ್ಯ ಸಂರಕ್ಷಣಾಧಿಕಾರಿ-ಮಾನವ ಪ್ರಾಣಿ ಸಂಘರ್ಷ), ಮೋಹನ್ ಎಸ್. ನಾಯ್ಕ (ಉಪವಲಯ ಅರಣ್ಯ ಸಂರಕ್ಷಣಾಧಿಕಾರಿ-ಮಾನವ ಪ್ರಾಣಿ ಸಂಘರ್ಷ), ಕೆ.ಜಿ.ಮೋಹನ್ ಕುಮಾರ್ (ಅರಣ್ಯ ವೀಕ್ಷಕ-ಮಾನವ ಪ್ರಾಣಿ ಸಂಘರ್ಷ), ಶ್ರೀನಿವಾಸ್ ನಾಯಕ್ (ವಲಯ ಅರಣ್ಯಾಧಿಕಾರಿ-ನವೀನತೆ), ಎಚ್.ವೆಂಕಟೇಶ್ ನಾಯ್ಕ (ಉಪವಲಯ ಅರಣ್ಯಾಧಿಕಾರಿ-ನವೀನತೆ), ಅಮೃತ್ ದೇಸಾಯಿ(ಉಪವಲಯ ಅರಣ್ಯಾಧಿಕಾರಿ-ನವೀನತೆ), ಎಂ.ಡಿ.ಅಯ್ಯಪ್ಪ (ಅರಣ್ಯ ರಕ್ಷಕ-ನವೀನತೆ).