ಚಿಕ್ಕಮಗಳೂರಿನಲ್ಲೊಂದು ಜೋಡಿ ಭಾರತ ಮಾತೆ ಫೋಟೊವನ್ನು ಪರಸ್ಪರ ಬದಲಾಯಿಸಿಕೊಳ್ಳುವ ಮೂಲಕ ವಿಶೇಷವಾಗಿ ಎಂಗೇಜ್ ಆಗಿದ್ದಾರೆ.
ಚಿಕ್ಕಮಗಳೂರು (ಫೆ.15): ನವಜೋಡಿಗಳಿಬ್ಬರು ಪ್ರೇಮಿಗಳ ದಿನವಾದ ಫೆ.14ರಂದು ಉಂಗುರದ ಬದಲು ಭಾರತಾಂಬೆಯ ಫೋಟೋವನ್ನು ಪರಸ್ಪರ ಬದಲಿಸಿಕೊಂಡು ನಿಶ್ಚಿತಾರ್ಥ ಮಾಡಿಕೊಂಡ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.
ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಉದ್ಯೋಗಿಗಳಾಗಿರುವ ರವೀಶ್ ಹಾಗೂ ವಿದ್ಯಾಶ್ರೀ ವಿಶಿಷ್ಟವಾಗಿ ನಿಶ್ಚಿತಾರ್ಥ ಮಾಡಿಕೊಂಡಿರುವ ನವಜೋಡಿ. ಇಬ್ಬರೂ ಚಿಕ್ಕಮಗಳೂರು ನಗರದವರಾಗಿದ್ದಾರೆ.
ಪ್ರೇಮಿಗಳ ದಿನದಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಕೃಷ್ಣ-ಮಿಲನಾ; ಮದುವೆ ಹೇಗಿತ್ತು! ...
ಭಾನುವಾರ ಪ್ರೇಮಿಗಳ ದಿನವಾದ ಹಿನ್ನೆಲೆಯಲ್ಲಿ ಉಂಗುರದ ಬದಲು ಭಾರತಾಂಬೆಯ ಪೋಟೋವನ್ನು ಪರಸ್ಪರ ಬದಲಿಸಿಕೊಂಡಿದ್ದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ವೇಳೆ, ರವೀಶ್ ಹಾಗೂ ವಿದ್ಯಾಶ್ರೀ ಕುಟುಂಬದವರು ಜೊತೆಗಿದ್ದು, ಮಕ್ಕಳ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.