ಚಿಕ್ಕಬಳ್ಳಾಪುರ : ಜಿಲ್ಲಾ ಕೇಂದ್ರದಲ್ಲಿ ಪ್ರವಾಹ ಸೃಷ್ಟಿಸಿದ ಮಳೆ

By Kannadaprabha NewsFirst Published Oct 25, 2021, 1:15 PM IST
Highlights
  • ಭಾರಿ ಮಳೆ ಜಿಲ್ಲಾ ಕೇಂದ್ರದ ಜನತೆಯನ್ನು ಅಕ್ಷರಶಃ ಪ್ರವಾಹ ಪರಿಸ್ಥಿತಿ ಸೃಷ್ಠಿಸಿದೆ
  •  ನಗರದ ಹೊರ ವಲಯದ ರಂಗಸ್ಥಳ ಸಮೀಪ ಇರುವ ರಂಗಧಾಮ ಕೆರೆ ಮಳೆಗೆ ತುಂಬಿ ಕೋಡಿ ಹರಿದಿದೆ

 ಚಿಕ್ಕಬಳ್ಳಾಪುರ (ಅ.25):  ಭಾರಿ ಮಳೆ (Rain) ಜಿಲ್ಲಾ ಕೇಂದ್ರದ ಜನತೆಯನ್ನು ಅಕ್ಷರಶಃ ಪ್ರವಾಹ ಪರಿಸ್ಥಿತಿ ಸೃಷ್ಠಿಸಿದ್ದು ನಗರದ ಹೊರ ವಲಯದ ರಂಗಸ್ಥಳ ಸಮೀಪ ಇರುವ ರಂಗಧಾಮ ಕೆರೆ (lake) ಮಳೆಗೆ ತುಂಬಿ ಕೋಡಿ ಹರಿದ ಪರಿಣಾಮ ಮಳೆ ನೀರು ಉಕ್ಕಿ ಹರಿದು ನಾಲೆ, ರಾಜಕಾಲುವೆಗಳ ಒತ್ತುವರಿ ಕಾರಣಕ್ಕೆ ನಗರದ ಪ್ರತಿಷ್ಠಿತ ಡಿವೈಎನ್‌ ಸಿಟಿಗೆ ನುಗ್ಗಿ ಜನರ ನಿದ್ದೆಗೆಡಿಸಿದೆ.

ಇದೇ ಮೊದಲ ಬಾರಿಗೆ ಭಾರಿ ಮಳೆಗೆ ನಗರದ ಹೊರ ವಲಯದ ಗೌರಿಬಿದನೂರು (Gouribidanuru) ರಸ್ತೆಯಲ್ಲಿ ಬರೋಬ್ಬರಿ 1 ಕಿ.ಮೀನಷ್ಟುರಸ್ತೆಯೆ ಮಳೆಯಿಂದ ಜಲಾವೃತಗೊಂಡಿದ್ದು ವಾಹನ ಸವಾರರು ಹಾದಿಯಾಗಿ ಸಾರ್ವಜನಿಕರು ಸುತ್ತಮುತ್ತಲಿನ ಜನ ಗಂಟೆಗಟ್ಟಲೇ ಮಳೆಯಿಂದಾಗಿ ರಸ್ತೆಯಲ್ಲಿ (Road) ಸಂಚರಿಸಲಾಗದೇ ಗೌರಿಬಿದನೂರು ಸೇರಿದಂತೆ ಪೋಶೆಟ್ಟಿಹಳ್ಳಿ, ಮಂಚೇನಹಳ್ಳಿ ಕಡೆಗೆ ಸಂಚರಿಸಬೇಕಾಗಿದ್ದ ವಾಹನ ಸವಾರರು ಇನ್ನಿಲ್ಲದಂತೆ ಪರದಾಡಿದರು.

chikkaballapura ಭಾರೀ ಮಳೆಗೆ ಗ್ರಾಮಗಳ ಸಂಪರ್ಕವೇ ಕಡಿತ : ಜನ ಪರದಾಟ

ಬಡಾವಣೆಗೆ ನುಗ್ಗಿದ ನೀರು:  ಮಧ್ಯರಾತ್ರಿ ರಂಗಧಾಮ ಕೆರೆ ಕೋಡಿ ಹರಿದಿದ್ದು ನೀರು ರಾಜಕಾಲುವೆಗಳಲ್ಲಿ ಹರಿಯದ ರಸ್ತೆಗೆ ಏಕಾಏಕಿ ನುಗ್ಗಿ ಬಂದ ಪರಿಣಾಮ ಎಂಜಿ ರಸ್ತೆಗೆ ಹೊಂದಿಕೊಂಡಿರುವ ನಿಮ್ಮ ಕಾಲಕುಂಟೆಯಿಂದ ಕಣಜೇನಹಳ್ಳಿಯವರೆಗೂ ರಸ್ತೆ ಮುಳಗಿದೆ. ಅಲ್ಲದೇ ಡಿವೈಎನ್‌ ಸಿಟಿಗೆ (City) ನುಗ್ಗಿ ಮನೆಗಳು ಸೇರಿದಂತೆ ಮನೆ ಮುಂದೆ ಪಾರ್ಕಿಂಗ್‌ ಮಾಡಲಾಗಿದ್ದ ಕಾರುಗಳು, ದ್ವಿಚಕ್ರ ವಾಹನಗಳು (Two wheeler) ನೀರಿನಲ್ಲಿ ಮುಳಗಿ ಹೋಗಿವೆ.

ರಾಜಕಾಲುವೆಗಳ ಒತ್ತುವರಿಯಿಂದಲೇ ಜಿಲ್ಲಾ ಕೇಂದ್ರದಲ್ಲಿ ಮಳೆ ನೀರು ತಗ್ಗು ಪ್ರದೇಶದಲ್ಲಿನ ಜನವಸತಿಗಳಿಗೆ ನುಗ್ಗಿ ಜನರನ್ನು ಸಂಕಷ್ಟಕ್ಕೀಡು ಮಾಡಿದ್ದು ರಂಗಧಾಮದ ಕೆರೆಯ ಅಪಾರ ಪ್ರಮಾಣದ ನೀರು ಎಂಜಿ ರಸ್ತೆಯ ಮೂಲಕ ಕಂದವಾರ ಕೆರೆಗೆ ಹರಿದು ಹೋಗಿದ್ದು ಈ ವೇಳೆ ನಾಲೆಗಳ ದುರಸ್ತಿ ಆಗದೇ ಒತ್ತುವರಿ ಆಗಿದ್ದರಿಂದ ಅಕ್ಕಪಕ್ಕದ ಗುಲಾಬಿ, ಸೇರಿದಂತೆ ಹಲವು ವಾಣಿಜ್ಯ ಬೆಳೆಗಳು ಮಳೆ ನೀರು ನುಗ್ಗಿ ಲಕ್ಷಾಂತರ ರು, ಬಾಳುವ ಬೆಳೆಯನ್ನು ಬಲಿ ಪಡೆದಿದೆ. ರಸ್ತೆಯಲ್ಲಿ ಪ್ರವಾಹದಂತೆ ಹೋಗುತ್ತಿದ್ದ ಮಳೆ ನೀರನ್ನು ಕಣ್ಣು ತುಂಬಿಸಿಕೊಳ್ಳಲು ಜನ ಸಾಗರವೇ ಅಲ್ಲಿ ನೆರದಿತ್ತು.

ಭಾರೀ ಮಳೆ : ಕೋಡಿ ಹರಿದು ಗುಡಿಬಂಡೆ ಮಾರ್ಗ ಬಂದ್‌

ನಗರಸಭೆ ಸದಸ್ಯರು ಹಾನಗಲ್‌ಗೆ ಶಿಫ್ಟ್‌!

ಜಿಲ್ಲಾ ಕೇಂದ್ರದ ವಿವಿಧ ಬಡಾವಣೆಗಳಲ್ಲಿ ಕಳೆದ ರಾತ್ರಿ ಬಿದ್ದ ಭಾರಿ ಮಳೆ ಅಪಾರ ಪ್ರಮಾಣದಲ್ಲಿ ಸಾರ್ವಜನಿಕರ ಬದುಕನ್ನು ಕಸಿದುಕೊಂಡಿದೆ. ರಾತ್ರಿಯಡೀ ನಿದ್ದೆ ಇಲ್ಲದೇ ನೀರು ಮನೆಗಳಿಂದ ಹೊರ ಚೆಲ್ಲಿ ಜಾಗರಣೆ ಮಾಡಿದ್ದಾರೆ. ಮಳೆ ನೀರು ಮನೆಗಳ ಶೌಚಾಲಯಗಳಲ್ಲಿ ಉಕ್ಕಿ ಕೊಳಚೆ ನೀರು ಮನೆ ತುಂಬಿ ಜನ ಪರದಾಟ ನಡೆಸಿದರೂ ಜನರ ಸಮಸ್ಯೆ ಖುದ್ದು ಆಲಿಸಬೇಕಿದ್ದ ಬಹುತೇಕ ನಗರಸಭಾ ಸದಸ್ಯರು ನಗರಸಭೆ ಅಧ್ಯಕ್ಷರ ಜೊತೆಗೂಡಿ ಹಾನಗಲ್‌ (Hanagal) ಉಪ ಚುನಾವಣೆ (ByElection) ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿರುವುದು ಸ್ಥಳೀಯ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

300 ಮನೆಗಳಿಗೆ ನುಗ್ಗಿದ ನೀರು,

ಜಿಲ್ಲಾ ಕೇಂದ್ರದಲ್ಲಿ ಬಿದ್ದ ಮಳೆಯ ಹೊಡೆತಕ್ಕೆ ಹೆಚ್ಚು ಸಿಲುಕಿ ಅವ್ಯವಸ್ಥೆಗೊಂಡಿರುವುದು ನಗರದ ಜೈಭೀಮ್‌ ನಗರ, ಸುಮಾರು 300 ಕ್ಕೂ ಹೆಚ್ಚು ಮನೆಗಳು (House) ಪ್ರದೇಶದಲ್ಲಿದ್ದು ಮಳೆ ನೀರು ನುಗ್ಗಿ ಇದ್ದ ಬಟ್ಟೆ, ಬರೆ, ಧಾವಸಧಾನ್ಯಗಳು ಮಳೆ ನೀರು ಪಾಲಾಗಿವೆ. ಸ್ಥಳೀಯ ನಿವಾಸಿಗಳ ಸಂಕಷ್ಟಎಷ್ಟರ ಮಟ್ಟಿಗೆ ಅಂದರೆ ಒಳಚರಂಡಿ ನೀರು ಮಳೆ ನೀರುನೊಂದಿಗೆ ಮಿಶ್ರಣವಾಗಿ ಮನೆಗಳಿಗೆ ನುಗ್ಗಿದ್ದು ಗಬ್ಬುನಾಥಕ್ಕೆ ಹೈರಾಣಗಾಗಿದ್ದಾರೆ. ಪ್ರತಿ ಬಾರಿ ಮಳೆ ಬಿದ್ದಾಗ ಇದೇ ಸಮಸ್ಯೆ ಇದ್ದು ನಮ್ಮನ್ನು ಬೇರೆಡೆ ಸ್ಥಳಾಂತರ ಮಾಡಿ ಎಂದು ನಾಗರಿಕರು ಜಿಲ್ಲಾಡಳಿತಕ್ಕೆ ಒತ್ತಾಯಿಸಿದರು. ಇನ್ನೂ ಮಳೆಯಿಂದ ನಾಗರಿಕರು ತೀವ್ರ ಪರದಾಟ ನಡೆಸಿದರೂ ಡೀಸಿ ಬಡಾವಣೆಗೆ ಬರಲಿಲ್ಲ ಎನ್ನುವ ಆರೋಪ ಕೇಳಿ ಬಂತು. ನಗರಸಭಾ ಸದಸ್ಯ ಆರ್‌.ಮಟಮಪ್ಪ ಆಗ್ನಿಶಾಮಕ ಠಾಣೆ ಸಿಬ್ಬಂದಿಯನ್ನು ಕರೆಸಿ ಮನೆಗಳಲ್ಲಿದ್ದ ನೀರನ್ನು ಹೊರಚೆಲ್ಲಿಸಿದರು.

click me!