ಕೊಟ್ಟೂರು: ರೈಲಿಗೆ ಸಿಲುಕಿ ಕುರಿಗಾಯಿ, 18 ಕುರಿಗಳ ದಾರುಣ ಸಾವು

Kannadaprabha News   | Asianet News
Published : Oct 25, 2021, 01:09 PM IST
ಕೊಟ್ಟೂರು: ರೈಲಿಗೆ ಸಿಲುಕಿ ಕುರಿಗಾಯಿ, 18 ಕುರಿಗಳ ದಾರುಣ ಸಾವು

ಸಾರಾಂಶ

*  ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಮತ್ತಿಹಳ್ಳಿ ಬಳಿ ನಡೆದ ಘಟನೆ *  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು *  ಈ ಸಂಬಂಧ ಕೊಟ್ಟೂರು ಠಾಣೆಯಲ್ಲಿ ದೂರು ದಾಖಲು  

ಕೊಟ್ಟೂರು(ಅ.25): ಗೂಡ್ಸ್‌ ರೈಲಿಗೆ(Railway) ಸಿಲುಕಿ ಓರ್ವ ಕುರಿಗಾಯಿ ಮತ್ತು 18 ಕುರಿಗಳು(Sheeps) ಸ್ಥಳದಲ್ಲೇ ಮೃತಪಟ್ಟ ಘಟನೆ ವಿಜಯನಗರ(Vijayanagara) ಜಿಲ್ಲೆಯ ಕೊಟ್ಟೂರು(Kotturu) ತಾಲೂಕಿನ ಮತ್ತಿಹಳ್ಳಿ ರೈಲ್ವೆ ಗೇಟ್‌ ಬಳಿ ಭಾನುವಾರ ನಡೆದಿದೆ.

ತಾಲೂಕಿನ ಹರಾಳು ಗ್ರಾಮದಿಂದ 18ಕ್ಕೂ ಹೆಚ್ಚು ಕುರಿಗಳನ್ನು ಮತ್ತಿಹಳ್ಳಿ ಕ್ರಾಸ್‌ ಬಳಿಯ ರೈಲು ಹಳಿಗಳನ್ನು ದಾಟಿ ಮೇಯಿಸಲೆಂದು ಕುರಿಗಾಯಿ ಚೌಟಗಿ ಕೊಟ್ರೇಶ್‌ ತೆರಳುತ್ತಿದ್ದಾಗ ರೈಲು ಡಿಕ್ಕಿ ಹೊಡೆದಿದೆ. ರೈಲು ಡಿಕ್ಕಿ ಹೊಡೆದಿದ್ದರಿಂದ ಕುರಿಗಾಯಿ ಚೌಟಿಗಿ ಕೊಟ್ರೇಶ್‌ (24) ಸಾವಿಗೀಡಾಗಿದ್ದಾರೆ. ಅಲ್ಲದೇ 18 ಕುರಿಗಳು ಸ್ಥಳದಲ್ಲಿಯೇ ಮೃತಪಟ್ಟಿವೆ(Death). 

ವಿಜಯನಗರ;  ಆಡು ಮೇಯಿಸಲು ಹೋದವರಿಗೆ ಸಿಡಿಲಾಘಾತ, ತಂದೆ-ಮಗ ಸೇರಿ ಮೂವರ ದುರ್ಮರಣ

ಕುರಿಗಳು ಮತ್ತು ಕುರಿಗಾಯಿ ಕೊಟ್ರೇಶ್‌ ಅಂಗಾಂಗಗಳು ರೈಲ್ವೆ ಹಳಿಯುದ್ದಕ್ಕೂ(Railway Track) ಛಿದ್ರ ಛಿದ್ರವಾಗಿ ಬಿದ್ದಿದ್ದವು. ಸ್ಥಳಕ್ಕೆ ಕೊಟ್ಟೂರು ಪೊಲೀಸ್‌(Police) ಸಬ್‌ ಇನ್‌ಸ್ಪೆಕ್ಟರ್‌ ನಾಗಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಕೊಟ್ಟೂರು ಠಾಣೆಯಲ್ಲಿ ದೂರು ದಾಖಲಾಗಿದೆ. 
 

PREV
click me!

Recommended Stories

ಹಿಂದೂಗಳಿಗಿಂತ ಮುಸ್ಲಿಮರ ಮೇಲೆ ಹೆಚ್ಚ ಬಾಂಡ್: ಎಸ್‌ಡಿಪಿಐ ಆರೋಪಕ್ಕೆ ಅಂಕಿ-ಅಂಶ ಸಮೇತ ಕಮಿಷನರ್ ತಿರುಗೇಟು!
ಕರೆಂಟ್‌ ಅಕೌಂಟಲ್ಲಿ ₹150 ಕೋಟಿ ಅಲ್ಲ, ₹1 ಸಾವಿರ ಕೋಟಿ ವಹಿವಾಟು