ಟಿಕೆಟ್ ಆಕಾಂಕ್ಷಿಗಳಲ್ಲಿ ತಳಮಳ : ಬಿಜೆಪಿಗೆ ಸೋಲಿನ ಭೀತಿ

By Kannadaprabha News  |  First Published Sep 20, 2021, 3:01 PM IST
  • ರಾಜ್ಯ ಸರ್ಕಾರ ಕ್ಷೇತ್ರ ಪುನರ್‌ ವಿಗಂಡಣೆಗೆ ಈಗ ಪ್ರತ್ಯೇಕ ಆಯೋಗ ರಚನೆ
  • ಜಿಲ್ಲೆಯ ಜಿಪಂ ಹಾಗೂ ತಾಪಂ ಚುನಾವಣಾ ಆಕಾಂಕ್ಷಿಗಳಲ್ಲಿ ತಳಮಳಕ್ಕೆ ಕಾರಣ

ವರದಿ :  ಕಾಗತಿ ನಾಗರಾಜಪ್ಪ

 ಚಿಕ್ಕಬಳ್ಳಾಪುರ (ಸೆ.20): ರಾಜ್ಯ ಚುನಾವಣೆ ಆಯೋಗ ನಡೆಸಿದ್ದ ಜಿಪಂ ಹಾಗೂ ತಾಪಂ ಕ್ಷೇತ್ರಗಳ ಪುನರ್‌ ವಿಗಂಡಣೆ ಬದಲಿಗೆ ರಾಜ್ಯ ಸರ್ಕಾರ ಕ್ಷೇತ್ರ ಪುನರ್‌ ವಿಗಂಡಣೆಗೆ ಈಗ ಪ್ರತ್ಯೇಕ ಆಯೋಗ ರಚನೆಗೆ ನಿರ್ಧರಿಸಿ ಆದೇಶ ಹೊರಡಿಸಿರುವುದು ಜಿಲ್ಲೆಯ ಜಿಪಂ ಹಾಗೂ ತಾಪಂ ಚುನಾವಣಾ ಆಕಾಂಕ್ಷಿಗಳಲ್ಲಿ ತಳಮಳಕ್ಕೆ ಕಾರಣವಾಗಿದೆ.

Tap to resize

Latest Videos

ಈಗಲೇ ಚುನಾವಣೆ ವಿಳಂಬ ಆಗುತ್ತಿದೆಯೆಂಬ ಅಸಮಾಧಾನದ ನಡುವೆ ರಾಜ್ಯ ಸರ್ಕಾರ ಕ್ಷೇತ್ರ ಪುನರ್‌ ವಿಗಂಡನೆ ಹೆಸರಲ್ಲಿ ಪ್ರತ್ಯೇಕ ಆಯೋಗ ರಚನೆ ಬಗ್ಗೆ ಜಿಲ್ಲೆಯ ರಾಜಕೀಯ ವಲಯದಲ್ಲಿ ಸಾಕಷ್ಟುಚರ್ಚೆಗೆ ಗ್ರಾಸವಾಗಿದ್ದು ಈ ವರ್ಷದಲ್ಲಿ ಜಿಪಂ ಹಾಗೂ ತಾಪಂ ಚುನಾವಣೆಗಳು ನಡೆಯುವುದು ಅನುಮಾನ ಎನ್ನುವ ಮಾತು ಕೇಳಿ ಬರುತ್ತಿದೆ.

ಮೇನಲ್ಲೇ ಸದಸ್ಯರ ಅವಧಿ ಪೂರ್ಣ

ಕಳೆದ ಮೇ 26ಕ್ಕೆ ತಾಪಂ ಹಾಗೂ ಜಿಪಂ ಸದಸ್ಯರ ಅಧಿಕಾರ ಅವಧಿ ಮುಗಿದಿದ್ದು ಸದಸ್ಯರ ಅಧಿಕಾರ ಅವಧಿ ಮುಗಿಯುವುದರೊಳಗೆ ಚುನಾವಣೆ ನಡೆಸಬೇಕಿತ್ತು. ಅದರಂತೆ ರಾಜ್ಯ ಚುನಾವಣಾ ಆಯೋಗ ಕೂಡ ಸದ್ದಿಲ್ಲದೇ ಕ್ಷೇತ್ರ ಪುನರ್‌ ವಿಗಂಡನೆ ಸೇರಿದಂತೆ ಕ್ಷೇತ್ರಗಳಿಗೆ ಕರಡು ಮೀಸಲಾತಿ ಸಹ ಪ್ರಕಟಿಸಿ ಸಾರ್ವಜನಿಕರಿಂದ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಿತ್ತು.

ಮುಂದಿನ ಚುನಾವಣೆಗೆ ಇಂದು ಬಿಜೆಪಿ ರಣತಂತ್ರ

ಇನ್ನೇನು ಆಂತಿಮ ಮೀಸಲಾತಿ ಪ್ರಕಟಿಸಿ ಚುನಾವಣಾ ಆಯೋಗ ಚುನಾವಣೆ ಘೋಷಿಸಬಹುದೆಂಬ ನಿರೀಕ್ಷೆಯಲ್ಲಿದ್ದ ಚುನಾವಣಾ ಅಖಾಡಕ್ಕೆ ಸ್ಪರ್ಧಿಸಲು ಸದ್ದಿಲ್ಲದೇ ಸಿದ್ದತೆ ನಡೆಸಿಕೊಳ್ಳುತ್ತಿದ್ದ ಆಕಾಂಕ್ಷಿಗಳಿಗೆ ರಾಜ್ಯ ಬಿಜೆಪಿ ಸರ್ಕಾರ ಶಾಕ್‌ ನೀಡಿದ್ದು ರಾಜ್ಯ ಚುನಾವಣಾ ಆಯೋಗದ ಬದಲಾಗಿ ಜಿಪಂ, ತಾಪಂ ಕ್ಷೇತ್ರ ಪುನರ್‌ ವಿಗಂಡನೆಗೆ ಪ್ರತ್ಯೇಕ ಆಯೋಗ ರಚನೆ ಸಂಬಂಧ ಇತ್ತೀಚೆಗೆ ವಿಪಕ್ಷಗಳ ಪ್ರಬಲ ವಿರೋಧವನ್ನು ಲೆಕ್ಕಿಸಿದೇ ರಾಜ್ಯ ಬಿಜೆಪಿ ಸರ್ಕಾರ ವಿಧಾನಸಭೆ ಹಾಗೂ ವಿಧಾನ ಪರಿಷತ್ತು ಸೇರಿ ಎರಡು ಸದನಗಳಲ್ಲಿ ಮಸೂದೆ ಮಂಡಿಸಿ ಆಂಗೀಕಾರ ಪಡೆದು ಆದೇಶ ಹೊರಡಿಸಿರುವುದು ಜಿಲ್ಲೆಯ ಚುನಾವಣಾ ಆಕಾಂಕ್ಷಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.

ಪುನರ್‌ ವಿಂಗಡನೆ ತಂದ ಸಮಸ್ಯೆ

ಅಲ್ಲದೇ ಮತ್ತೆ ಹೊಸದಾಗಿ ಸರ್ಕಾರ ರಚಿಸಿರುವ ಆಯೋಗ ಈಗಾಗಲೇ ವಿಗಂಡನೆ ಆಗಿರುವ ಜಿಪಂ ಹಾಗೂ ತಾಪಂ ಕ್ಷೇತ್ರಗಳ ಪುನರ್‌ ವಿಗಂಡನೆ ಜೊತೆಗೆ ಮೀಸಲಾತಿ ಪ್ರಕಟಿಸಿದರೆ ಈಗಾಗಲೇ ತಮಗೆ ವರವಾಗಿರುವ ಕ್ಷೇತ್ರ ಪುನರ್‌ ವಿಗಂಡನೆ ಹಾಗೂ ಮೀಸಲಾತಿ ಎಲ್ಲಿ ಕೈ ಕೊಡುತ್ತೆಯೋ ಎಂಬ ಆತಂಕ ಈಗಾಗಲೇ ಚುನಾವಣೆಗೆ ಸಜ್ಜಾಗುತ್ತಾ ಮತದಾರರ ಓಲೈಕೆಯಲ್ಲಿ ತೊಡಗಿರುವ ಆಕಾಂಕ್ಷಿಗಳಲ್ಲಿ ಢವಢವ ಶುರುವಾಗಿದೆ.

ಬಿಜೆಪಿಗೆ ಸೋಲಿನ ಭೀತಿ

ಅಗತ್ಯ ವಸ್ತುಗಳ ಬೆಲೆ ಏರಿಕೆ, ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಿಂದ ಚುನಾವಣೆ ನಡೆದರೆ ಪಕ್ಷಕ್ಕೆ ಸೋಲು ಆಗಬಹುದೆಂಬ ಭೀತಿಯಿಂದ ಬಿಜೆಪಿ ಸರ್ಕಾರ ಚುನಾವಣೆ ಮುಂದೂಡಲು ಆಯೋಗ ರಚನೆ ಮಾಡಿದೆ. ಈಗಾಗಲೇ ಚುನಾವಣಾ ಆಯೋಗವೇ ಕ್ಷೇತ್ರ ಪುನರ್‌ ವಿಗಂಡನೆ ಮಾಡಿರುವಾಗ ಮತ್ತೊಮ್ಮೆ ಪುನರ್‌ ವಿಗಂಡನೆ ಅವಶ್ಯಕತೆ ಇರಲಿಲ್ಲ ಎಂದು ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಕೆ.ಎಂ.ಮುನೇಗೌಡ ತಿಳಿಸಿದ್ದಾರೆ.

108 ರಿಂದ 88ಕ್ಕೆ ಕುಸಿದಿದ್ದ ತಾಪಂ ಕ್ಷೇತ್ರ

ಜಿಲ್ಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಈ ಹಿಂದೆ ಚುನಾವಣೆ ಹಿನ್ನಲೆಯಲ್ಲಿ ನಡೆಸಿದ ಕ್ಷೇತ್ರ ಪುನರ್‌ ವಿಗಂಡನೆ ಕಾರ್ಯದ ಬಳಿಕ ಬಳಿಕ ಜಿಲ್ಲಾದ್ಯಂತ ಒಟ್ಟು 108 ತಾಪಂ ಕ್ಷೇತ್ರಗಳ ಪೈಕಿ 20 ಕ್ಷೇತ್ರ ಕಡಿತವಾಗಿ ಕೇವಲ 88 ತಾಪಂ ಕ್ಷೇತ್ರಗಳಿಗೆ ಕುಸಿದಿತ್ತು. ಜಿಲ್ಲೆಯಲ್ಲಿ 28 ಜಿಪಂ ಕ್ಷೇತ್ರಗಳಿದ್ದು ಜಿಲ್ಲೆಯಲ್ಲಿ ಪುನರ್‌ ವಿಗಂಡನೆ ಬಳಿಕ 31ಕ್ಕೆ ಏರಿಕೆ ಆಗಿತ್ತು. ಆಯೋಗ ಜಿಪಂ ಹಾಗೂ ತಾಪಂ ಕ್ಷೇತ್ರಗಳಿಗೆ ಮೀಸಲಾತಿ ಪ್ರಕಟಿಸಿ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು.

click me!