* ಬೆಂಗಳೂರಿನಿಂದ ಪ್ರಿಯಕರನನ್ನು ಹುಡುಕಿಕೊಂಡು ಬಂದಿದ್ದ ಪ್ರೇಯಸಿ
* ಪ್ರೇಯಸಿಯಿಂದ ಗೂಸಾ ತಿಂದ ಪ್ರಿಯಕರ
* ಪೊಲೀಸ್ ಠಾಣೆ ಮುಂದೆಯೇ ಪ್ರೇಯಸಿ- ಪ್ರಿಯಕರನ ಗಲಾಟೆ
ಕಲಬುರಗಿ(ಸೆ.20): ಬೆಂಗಳೂರಿನಿಂದ ಬಂದಿರುವ ಪ್ರೇಯಸಿಯೋರ್ವಳು ತನ್ನನ್ನು ಪ್ರೀತಿಸಿ ಕೈ ಕೊಟ್ಟಿರುವ ಕಲಬರಗಿ ಜಿಲ್ಲೆಯ ಪಟ್ಟಣ ನಿವಾಸಿ ಪ್ರಿಯಕರನಿಗೆ ಪೊಲೀಸ್ ಠಾಣೆ ಮುಂದೆಯೇ ಗೂಸಾ ಕೊಟ್ಟ ಘಟನೆ ಕಲಬುರಗಿ ಗ್ರಾಮಾಂತರ ಠಾಣೆ ಮುಂದೆ ನಡೆದಿದ್ದು ಇದೀಗ ವಿಡಿಯೋ ವೈರಲ್ ಆಗಿದೆ.
ಬೆಂಗಳೂರಿನಿಂದ ಪ್ರಿಯಕರನನ್ನ ಹುಡುಕಿಕೊಂಡು ಬಂದು ಪ್ರೇಯಸಿ ರಹೀನಾ ಬಾನು ಗೂಸಾ ನೀಡಿದ್ದಾಳೆ. ಪ್ರೇಯಸಿಯಿಂದ ಇರ್ಫಾನ್ ಎಂಬ ಪ್ರಿಯಕರ ಗೂಸಾ ತಿಂದಿದ್ದಾನೆ. ಇರ್ಫಾನ್ ಹಾಗೂ ರಹೀನಾ ಬಾನು ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಪ್ರೀತಿಸುತ್ತಿದ್ದರು. 5 ವರ್ಷಗಳಿಂದ ಇವರಿಬ್ಬರ ನಡುವೆ ಪ್ರೀತಿ ಚಿಗುರೊಡೆದಿತ್ತು.
ಪಠ್ಯದ ಬದಲು ಅಶ್ಲೀಲ ವೀಡಿಯೋ ಹಂಚಿಕೊಂಡ ಶಿಕ್ಷಕನಿಗೆ ಬಿತ್ತು ಪೋಷಕರಿಂದ ಗೂಸಾ!
ಆದರೆ ಯುವತಿಗೆ ಅಕ್ರಮ ಸಂಬಂಧ ಇದೆ ಅಂತ ಇರ್ಫಾನ್ ಊರಿಗೆ ಬಂದಿದ್ದ. ಇರ್ಫಾನ್ ಕಲಬುರಗಿ ತಾಲೂಕಿನ ಪಟ್ಟಣ ಗ್ರಾಮದ ನಿವಾಸಿಯಾಗಿದ್ದಾನೆ. ಇರ್ಫಾನ್‌ಗಾಗಿ ಬೆಂಗಳೂರಿಂದ ಬಂದಿದ್ದ ರಹೀನಾ ಬಾನು, ಮದುವೆ ಮಾಡಿಕೊಳ್ಳುವಂತೆ ಪಟ್ಟುಹಿಡಿದಿದ್ದಳು. ಮದುವೆ ಮಾಡಿಕೊಳ್ಳಲು ಹಿಂದೇಟು ಹಾಕಿದ ಹಿನ್ನೆಲೆ ಪೊಲೀಸ್ ಠಾಣೆ ಮುಂದೆಯೇ ಪ್ರಿಯಕರನಿಗೆ ಹೊಡೆದಿದ್ದಾಳೆ.
ಮೂಲಗಳ ಪ್ರಕಾರ ಬೆಂಗಳೂರಿನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಇವರಿಬ್ಬರ ಮದುವೆ ನೋಂದಣಿ ಸಹ ಆಗಿತ್ತು ಎನ್ನಲಾಗುತ್ತಿದೆ. ಪ್ರಿಯಕರನಿಗೆ ಹುಡುಕಿಕೊಂಡು ಬಂದ ರಹೀನಾ ಪೊಲೀಸರು ಹಾಗೂ ಜನರ ಸಮ್ಮುಖದಲ್ಲಿ ಗೂಸಾ ನೀಡಿದ್ದಾಳೆ. ಠಾಣೆ ಮುಂದೆಯೇ ಪ್ರೇಯಸಿ- ಪ್ರಿಯಕರನ ಗಲಾಟೆ ಶುರುವಾದಾಗ ಅಲ್ಲಿಗೆ ಧಾವಿಸಿ ಬಂದ ಮಹಿಳಾ ಪೇದೆಗಳು ತಕ್ಷಣ ಅವರಿಬ್ಬರನ್ನು ಅಲ್ಲಿಂದ ತೆರಳುವಂತೆ ಸೂಚಿಸಿದ್ದಾರೆ. ಮಹಿಳಾ ಠಾಣೆಗೆ ಹೋಗಿ ದೂರು ದಾಖಲಿಸುವಂತೆಯೂ ಸೂಚಿಸಿ ಅಲ್ಲಿಂದ ಇಬ್ಬರಿಗೂ ಗದರಿಸಿ ಸಾಗಹಾಕಿದ್ದಾರೆ.