ಸ್ವಚ್ಛತೆ: ರಾಜ್ಯದಲ್ಲಿ ಚಿಕ್ಕಬಳ್ಳಾಪುರ ನಗರಕ್ಕೆ ಎರಡನೇ ಸ್ಥಾನ

By Kannadaprabha News  |  First Published Jan 3, 2020, 2:11 PM IST

ಕೇಂದ್ರ ಸರ್ಕಾರದಿಂದ ನಡೆಸುವ ಸಮೀಕ್ಷೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಚಿಕ್ಕಬಳ್ಳಾಪುರ ನಗರಸಭೆ 4ನೇ ಸ್ಥಾನ ಪಡೆದಿದ್ದು, ರಾಜ್ಯದಲ್ಲಿ ದ್ವಿತೀಯ ಸ್ಥಾನ ಗಳಿಸಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರಸಭೆ ರಾಜ್ಯದಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಸ್ವಚ್ಛ ನಗರ ಖ್ಯಾತಿಗೆ ಪಾತ್ರವಾಗಿದೆ.


ಚಿಕ್ಕಬಳ್ಳಾಪುರ(ಜ.03): ನಗರ ಸ್ವಚ್ಛತೆ ಕಾಪಾಡುವ ಜೊತೆಗೆ ಕಸ ನಿರ್ವಹಣೆಯಲ್ಲಿ ಸಮರ್ಪಕ ಕಾರ್ಯನಿರ್ವಹಿಸಿದ ಕಾರಣಕ್ಕೆ ಸ್ವಚ್ಛ ಸರ್ವೇಕ್ಷಣಾ 2020ರ ಪಟ್ಟಿಯಲ್ಲಿ ಚಿಕ್ಕಬಳ್ಳಾಪುರ ನಗರಸಭೆ ದಕ್ಷಿಣ ಭಾರತದಲ್ಲಿ 4ನೇ ಸ್ಥಾನ ಮತ್ತು ಕರ್ನಾಟಕದಲ್ಲಿ ದ್ವಿತಿಯ ಸ್ಥಾನ ಪಡೆದಿದೆ.

ಕೇಂದ್ರ ಸರ್ಕಾರದಿಂದ ನಡೆಸುವ ಸಮೀಕ್ಷೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಚಿಕ್ಕಬಳ್ಳಾಪುರ ನಗರಸಭೆ 4ನೇ ಸ್ಥಾನ ಪಡೆದಿದ್ದು, ರಾಜ್ಯದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದರೆ, ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರಸಭೆ ರಾಜ್ಯದಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಸ್ವಚ್ಛ ನಗರ ಖ್ಯಾತಿಗೆ ಪಾತ್ರವಾಗಿದೆ.

Tap to resize

Latest Videos

ಏನಿದು ಸಮೀಕ್ಷೆ?

ಕೇಂದ್ರ ಸರ್ಕಾರದಿಂದ ಪ್ರತಿವರ್ಷ ದೇಶದ ಎಲ್ಲ ನಗರಗಳಲ್ಲಿಯೂ ಸ್ವಚ್ಛತೆ, ಒಣ ಕಸ, ಹಸಿ ಕಸ ನಿರ್ವಹಣೆ, ಕಸವನ್ನು ಗೊಬ್ಬರ ಮಾಡುವುದು, ಯುಜಿಡಿ ನೀರು ಸದ್ಬಳಕೆ, ನೀರಿನ ಮಿತವ್ಯಯ ಸೇರಿದಂತೆ ಇತರೆ ವಿಚಾರಗಳಲ್ಲಿ ಸಮೀಕ್ಷೆ ನಡೆಸಲಾಗುತ್ತದೆ. ಅಲ್ಲದೆ ಪ್ರತಿ ವಿಚಾರಕ್ಕೆ ಸಂಬಂಧಿಸಿ ಅಂಕಗಳನ್ನು ನೀಡಲಾಗುತ್ತದೆ.

ಇಲಾಖೆ ಬಗ್ಗೆ ಪ್ರಶ್ನಿಸಿದ್ರೆ ಗರಂ ಆದ್ರು ಅಬಕಾರಿ ಸಚಿವ ನಾಗೇಶ್

ಈ ಮಾನದಂಡದ ಅನ್ವಯ ದಕ್ಷಿಣ ಭಾರತದಲ್ಲಿ ದ್ವಿತೀಯ ಮತ್ತು ರಾಜ್ಯದಲ್ಲಿ ಮೊದಲ ಸ್ಥಾನವನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರಸಭೆ ಪಡೆದಿದ್ದರೆ, ದಕ್ಷಿಣ ಭಾರತದಲ್ಲಿ 4ನೇ ಸ್ಥಾನವನ್ನು ಮತ್ತು ರಾಜ್ಯದಲ್ಲಿ ಎರಡನೇ ಸ್ಥಾನವನ್ನು ಚಿಕ್ಕಬಳ್ಳಾಪುರ ನಗರಸಭೆ ಪಡೆದಿದೆ. ನಂತರದ ಸ್ಥಾನಗಳನ್ನು ಸತತವಾಗಿ ಮೈಸೂರು ಜಿಲ್ಲೆಯ ಹುಣಸೂರು, ರಾಮನಗರ ಜಿಲ್ಲೆಯ ಕನಕಪುರ ಪಡೆದಿವೆ.

ಕಸದ ಬುಟ್ಟಿಗಳ ಅಳವಡಿಕೆ

ನಗರದಲ್ಲಿ ನಾಗರಿಕರು ಹೆಚ್ಚಾಗಿ ಕಸ ಸುರಿಯುವ ಜಾಗಗಳನ್ನು ಗುರುತಿಸಿ, ಆಯಾ ಸ್ಥಳದಲ್ಲಿ ದೊಡ್ಡ ಗಾತ್ರದ ಕಸದ ಬುಟ್ಟಿಗಳನ್ನು ಅಳವಡಿಸುವ ಮೂಲಕ ರಸ್ತೆ ಪಕ್ಕದ ಬದಲಿಗೆ ಕಸದ ಬುಟ್ಟಿಯಲ್ಲಿಯೇ ಕಸ ಸುರಿಯವಂತೆ ನಗರಸಭೆಯಿಂದ ಸಾರ್ವಜನಿಕರಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಗರಸಭೆಯಿಂದ ಆಯೋಜಿಸಲಾಗಿತ್ತು. ಇದರಿಂದ ರಸ್ತೆ ಪಕ್ಕದಲ್ಲಿ ಮತ್ತು ಖಾಲಿ ನಿವೇಶನಗಳಲ್ಲಿ ಕಸ ಸುರಿಯುತ್ತಿದ್ದವರಿಗೆ ಕಡಿವಾಣ ಹಾಕಲಾಗಿದೆ.

ಖಾಲಿ ನಿವೇಶನ ಮಾಲೀಕರಿಗೂ ದಂಡ!

ಇನ್ನು ನಗರ ವ್ಯಾಪ್ತಿಯಲ್ಲಿ ಖಾಲಿ ನಿವೇಶನಗಳನ್ನು ಹೊಂದಿರುವ ಮಾಲೀಕರು ತಮ್ಮ ನಿವೇಶನಗಳನ್ನು ತಾವೇ ಸ್ವಚ್ಛಗೊಳಿಸಬೇಕು ಎಂಬ ನೂತನ ಆದೇಶವನ್ನು ನಗರಸಬೆಯಿಂದ ನೀಡಲಾಗಿತ್ತು. ಖಾಲಿ ನಿವೇಶನಗಳಲ್ಲಿ ಬೇಲಿ ಬೆಳೆಯುವುದರಿಂದ ಹಾವು, ಸೊಳ್ಳೆಯಂತಹ ಸಮಸ್ಯೆಗಳು ಎದುರಾಗುವ ಜೊತೆಗೆ ನಾಗರಿಕರು ಕಸ ಹಾಕಲು ಉತ್ತಮ ಜಾಗವಾಗಿತ್ತು. ಹಾಗಾಗಿ ಸಂಬಂಧಿಸಿದ ನಿವೇಶನ ಮಾಲೀಕರೇ ಇವುಗಳ ಸ್ವಚ್ಛತೆ ಮಾಡಬೇಕು, ತಪ್ಪಿದರೆ ನಗರಸಭೆಯೇ ಸ್ವಚ್ಛಗೊಳಿಸಿ, ಇದಕ್ಕೆ ತಗಲುವ ವೆಚ್ಚವನ್ನು ಮಾಲೀಕರಿಂದ ವಸೂಲಿ ಮಾಡುವ ಕ್ರಮಕ್ಕೆ ಮುಂದಾಗಿತ್ತು.

ನಗರಸಭೆ ಕೈಗೊಂಡ ಈ ಎಲ್ಲ ಕಠಿಣ ಕ್ರಮಗಳಿಂದಾಗಿ ಪ್ರಸ್ತುತ ಸಾಲಿನಲ್ಲಿ ದಕ್ಷಿಣ ಭಾರತದಲ್ಲಿ ನಾಲ್ಕನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿರುವುದು ಬೆಂಗಳೂರಿಗೆ ಪರ್ಯಾಯವಾಗಿ ಉಪನಗರ ಮಾಡಬೇಕು ಎಂಬ ಶಾಸಕ ಸುಧಾಕರ್‌ ಕನಸಿಗೆ ಮತ್ತಷ್ಟು ಪುಷ್ಟಿ ಸಿಕ್ಕಂತಾಗಿದೆ.

‘ಮುಸ್ಲಿಮರು 10 ಮಕ್ಕಳನ್ನ ಹೆತ್ತರೆ, ಹಿಂದೂಗಳು 50 ಮಕ್ಕಳಿಗೆ ಜನ್ಮ ನೀಡುತ್ತೇವೆ’

ಸ್ವಚ್ಛ ಸ್ರವೇಕ್ಷಣಾ 20202ರಲ್ಲಿ ಚಿಕ್ಕಬಳ್ಳಾಪುರ ನಗರಸಭೆ ದಕ್ಷಿಣ ಭಾರತದಲ್ಲಿಯೇ ನಾಲ್ಕನೇ ಸ್ಥಾನ ಮತ್ತು ರಾಜ್ಯದಲ್ಲಿ 2ನೇ ಸ್ಥಾನ ಪಡೆದಿರುವುದು ಸಂತಸದ ವಿಚಾರವಾಗಿದ್ದು, ಇದಕ್ಕೆ ಕಾರಣರಾದ ಶಾಸಕ ಡಾ.ಕೆ. ಸುಧಾಕರ್‌, ಜಿಲ್ಲಾಧಿಕಾರಿಗಳು, ಜಿಲ್ಲಾ ಯೋಜನಾ ನಿರ್ದೇಶಕರು ಮತ್ತು ಸಿಬ್ಬಂದಿಗೆ ಅಭಿನಂದನೆ. ಅಲ್ಲದೆ ಪ್ರಸ್ತುತ ಇರುವ ಹಲವು ಸಮಸ್ಯೆಗಳನ್ನು ಬಗೆಹರಿಸಿದಲ್ಲಿ ಮೊದಲ ಸ್ಥಾನ ಪಡೆಯಲು ಚಿಕ್ಕಬಳ್ಳಾಪುರ ಸಿದ್ಧವಿದೆ ಎಂದು ಚಿಕ್ಕಬಳ್ಳಾಪುರ ನಗರಸಭೆ ಆಯುಕ್ತ ಲೋಹಿತ್‌ ತಿಳಿಸಿದ್ದಾರೆ.

ಕಸ ನಿರ್ವಹಣೆಯಲ್ಲಿ ಉತ್ತಮ ಸಾಧನೆ

ಚಿಕ್ಕಬಳ್ಳಾಪುರ ನಗರಸಭೆ ಕಳೆದ ಒಂದು ವರ್ಷದಿಂದ ಕಸ ಬೇರ್ಪಡಿಸುವ ವಿಚಾರದಲ್ಲಿ ಉತ್ತಮ ಸಾಧನೆ ಪಡೆದಿದೆ. ಒಣ ಕಸ, ಹಸಿ ಕಸ ಬೇರ್ಪಡಿಸುವ ಜೊತೆಗೆ ಹಸಿ ಕಸವನ್ನು ಉತ್ತಮ ಎರೆಹುಳ ಗೊಬ್ಬರ ತಯಾರಿಸುವಲ್ಲಿ ನಗರಸಭೆ ಮಾಡಿರುವ ಕ್ರಮಗಳಿಗೆ ಪ್ರಸ್ತುತ ಉತ್ತಮ ಸ್ಥಾನ ಲಭಿಸಲು ಕಾರಣವಾಗಿದೆ.

ನಗರ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸ ಸುರಿಯುವ ನಾಗರಿಕರಿಗೆ ಕಡಿವಾಣ ಹಾಕಲು ನಗರಸಭೆಯಿಂದ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಸಾರ್ವಜನಿಕ ಸ್ಥಳದಲ್ಲಿ ಕಸ ಸುರಿಯುವವರನ್ನು ಸುಲಭವಾಗಿ ಗುರ್ತಿಸುವ ಮೂಲಕ ದಂಡ ವಿಧಿಸುವ ಕಾರ್ಯಕ್ಕೆ ನಗರಸಭೆ ಮುಂದಾಗಿತ್ತು. ಇದರಿಂದಾಗಿ ಸಾರ್ವಜನಿಕ ಸ್ಥಳದಲ್ಲಿ ಕಸ ಸುರಿದು ಅಂದಗೆಡಿಸುತ್ತಿದ್ದ ಕ್ರಮಕ್ಕೆ ಕಡಿವಾಣ ಹಾಕಿದ ಕೀರ್ತಿ ನಗರಸಭೆಗೆ ಸಲ್ಲುತ್ತದೆ.

-ಅಶ್ವತ್ಥನಾರಾಯಣ ಎಲ್‌.

click me!