ಜಿಲ್ಲೆಯಲ್ಲಿ ಪುರುಷ ಮತದಾರರಗಿಂತ ಮಹಿಳಾ ಮತದಾರರೇ ಹೆಚ್ಚಿನ ಪ್ರಮಾಣದಲ್ಲಿರುವುದು ಜಿಲ್ಲಾ ಮತದಾರರ ನೊಂದಣಿ ಅಧಿಕಾರಿಗಳು ಪ್ರಕಟಿಸಿರುವ ಅಂತಿಮ ಮತದಾರರ ಪಟ್ಟಿಯಲ್ಲಿ ಕಂಡು ಬಂದಿದೆ.
ಚಿಕ್ಕಬಳ್ಳಾಪುರ (ಜ.17) : ಜಿಲ್ಲೆಯಲ್ಲಿ ಪುರುಷ ಮತದಾರರಗಿಂತ ಮಹಿಳಾ ಮತದಾರರೇ ಹೆಚ್ಚಿನ ಪ್ರಮಾಣದಲ್ಲಿರುವುದು ಜಿಲ್ಲಾ ಮತದಾರರ ನೊಂದಣಿ ಅಧಿಕಾರಿಗಳು ಪ್ರಕಟಿಸಿರುವ ಅಂತಿಮ ಮತದಾರರ ಪಟ್ಟಿಯಲ್ಲಿ ಕಂಡು ಬಂದಿದೆ. ಜಿಲ್ಲೆಯಲ್ಲಿ ಒಟ್ಟು 10,25,648 ಮತದಾರರು ಇದ್ದು ಆ ಪೈಕಿ ಪುರುಷ ಮತದಾರರು 5,08,550 ಮಂದಿ ಇದ್ದರೆ ಮಹಿಳಾ ಮತದಾರರು ಜಿಲ್ಲೆಯ ಐದು ವಿಧಾನ ಕ್ಷೇತ್ರಗಳಲ್ಲಿ ಒಟ್ಟು 5,17,098 ಮಂದಿ ಇದ್ದಾರೆ. ಒಟ್ಟಾರೆ ಪುರುಷರಗಿಂತ 8,548 ಮಂದಿ ಮಹಿಳಾ ಮತದಾರರು ಜಿಲ್ಲೆಯಲ್ಲಿ ಹೆಚ್ಚಿರುವ ಮೂಲಕ ಮತದಾರರ ಪಟ್ಟಿಯಲ್ಲಿ ಮಹಿಳೆಯರು ಮೇಲುಗೈ ಸಾಧಿಸಿದ್ದಾರೆ.
ಇತ್ತೀಚೆಗೆ ಚುನಾವಣಾ ಆಯೋಗದ ನಿರ್ದೇಶನದಂತೆ ವಿಶೇಷವಾಗಿ ಮತದಾರರ ಪಟ್ಟಿಪರಿಷ್ಕರಣೆ ನಡೆಸಿರುವ ಜಿಲ್ಲಾಡಳಿತ ಜ.5 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು ಪಟ್ಟಿಯಲ್ಲಿ ಪುರುಷರಗಿಂತ ಮಹಿಳಾ ಮತದಾರರು ಹೆಚ್ಚಿರುವುದು ಬೆಳಕಿಗೆ ಬಂದಿದೆ.
ಚಿಕ್ಕಬಳ್ಳಾಪುರ ಉತ್ಸವದಲ್ಲಿ ರಮ್ಯಾ ಭಾಗಿ, ಸಚಿವ ಸುಧಾಕರ್ ಕೆಲಸಕ್ಕೆ ಶ್ಲಾಘನೆ!
ಜಿಲ್ಲೆಯ ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಪುರುಷ ಮತದಾರಗಿಂತ ಮಹಿಳಾ ಮತದಾರರು ಒಟ್ಟು 2,180 ಇದ್ದಾರೆ. ಅದೇ ರೀತಿಯಲ್ಲಿ ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1,96,885 ಮಂದಿ ಮತದಾರರು ಇದ್ದು ಆ ಪೈಕಿ ಪುರುಷರು 97,751, ಮಹಿಳೆಯರು 99,134 ಮಂದಿ ಇದ್ದಾರೆ. ಬಾಗೇಪಲ್ಲಿ ಕ್ಷೇತ್ರದಲ್ಲಿ ಪುರಷರÜಗಿಂತ ಮಹಿಳಾ ಮತದಾರರು ಒಟ್ಟು 1,383 ಮಂದಿ ಅಧಿಕವಾಗಿ ಇದ್ದಾರೆ.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪುರಷರಗಿಂತ 2,419 ಮಂದಿ ಮಹಿಳಾ ಮತದಾರರು ಹೆಚ್ಚಾಗಿದ್ದಾರೆ. ಶಿಡ್ಲಘಟ್ಟವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಮಹಿಳಾ ಮತದಾರರಗಿಂತ ಪುರುಷ ಮತದಾರರು ಒಟ್ಟು 175 ಮಂದಿ ಮಾತ್ರ ಹೆಚ್ಚಾಗಿದ್ದಾರೆ. ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಪುರುಷ ಮತದಾರರಗಿಂತ ಮಹಿಳಾ ಮತದಾರರು ಒಟ್ಟು 2,741 ಮಂದಿ ಹೆಚ್ಚಾಗಿದ್ದಾರೆ. ಇನ್ನೂ ಮಹಿಳಾ ಮತದಾರರು ಜಿಲ್ಲೆಯ ಚಿಂತಾಮಣಿ, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಿರುವುದು ಎದ್ದು ಕಾಣುತ್ತಿದೆ.
ಮತದಾರರಿಗೆ ಗುರುತಿನ ಚೀಟಿ
ಇನ್ನು ಮುಂದೆ ಜಿಲ್ಲಾದ್ಯಂತ ಮತದಾರರ ಗುರುತಿನ ಚೀಟಿಯನ್ನು ಸಂಬಂಧಪಟ್ಟಮತದಾರರಿಗೆ ನೇರವಾಗಿ ಅಂಚೆ ಮೂಲಕ ಕಳುಹಿಸಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಈ ಜಿಲ್ಲೆಯಲ್ಲಿ 2022 ರ ಸೆಪ್ಪಂಬರ್ 1ರಿಂದ ಅಕ್ಟೋಬರ್ 15ರ ರವರೆಗಿನ ಅವಧಿಯಲ್ಲಿ ಸ್ವೀಕೃತವಾಗಿರುವ ನಮೂನೆ-6 ಮತ್ತು 8ರ ಅರ್ಜಿಗಳಿಗೆ ಅನುಗುಣವಾಗಿ ಒಟ್ಟು 10660 ಮತದಾರರ ಗುರುತಿನ ಚೀಟಿಗಳನ್ನು ಮತದಾರ ನೋಂದಣಾಧಿಕಾರಿಗಳು ಶೀಘ್ರ ಅಂಚೆ ಮೂಲಕ ಕಳುಹಿಸಲು ಕ್ರಮ ವಹಿಸಲಾಗಿದೆ.
ಚಿಕ್ಕಬಳ್ಳಾಪುರದಲ್ಲಿಂದು ಆದಿಯೋಗಿ ಪ್ರತಿಮೆ ಉದ್ಘಾಟನೆ
ವಿಧಾನಸಭಾ ಕ್ಷೇತ್ರ ಮಹಿಳಾ ಮತದಾರರು