ಶಾಸಕ ಕುಮಾರಸ್ವಾಮಿ ಪ್ರತಿರೋಧದ ನಡುವೆಯೂ ಮಲ್ಲಂದೂರು ಠಾಣೆಯ ಪಿಎಸ್ಐ ಆಗಿ ರವೀಶ್ ನಿಯೋಜನೆಗೊಂಡರು. ರವೀಶ್‌ಗೆ ಸ್ವಂತಂತ್ರವಾಗಿ ಸಿಕ್ಕ ಫಸ್ಟ್ ಸ್ಟೇಷನ್. ಇದು ಒಂದೆಡೆಯಾದ್ರೆ ಮತ್ತೊಂದೆಡೆ ಎಲ್ಲಾ ಪೊಲೀಸ್ ಠಾಣೆಯಂತೆ ಇದು ಕೂಡ ಹಳೇ ಸ್ಟೇಷನ್, ಸುಣ್ಣ ಬಣ್ಣ ಕಾಣದೆ ಅದೆಷ್ಟೋ ವರ್ಷಗಳೇ ಕಳೆದಿತ್ತು.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಜ.15): ಕಳೆದ ಆರು ತಿಂಗಳ ಹಿಂದೆ ಶಾಸಕ ವರ್ಸಸ್ ಪಿಎಸ್‌ಐ ನಡುವೆ ನಡೆದ ಆಡಿಯೋ ವೈರಲ್ ಆಗಿತ್ತು. ಆ ಆಡಿಯೋದಲ್ಲಿ ಶಾಸಕ , ಪಿಎಸ್ಐಗೆ ನಿಂದನೆ ಮಾಡಿದ್ದಾರೆಂಬ ಆರೋಪವೂ ಕೇಳಿಬಂದಿತ್ತು. ಈ ಪ್ರಕರಣಕ್ಕೆ ಸಾಕ್ಷಿಯಾಗಿದ್ದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರ. ಈ ಕ್ಷೇತ್ರದ ಶಾಸಕ ಎಂ.ಪಿ ಕುಮಾರಸ್ವಾಮಿ ಮತ್ತು ಮಲ್ಲಂದೂರು ಪಿಎಸ್ಐ ನಡುವೆ ನಡೆದ ಆಡಿಯೋ ಸಂಭಾಷಣೆ ಸಾಕಷ್ಟು ಸದ್ದು ಮಾಡಿತ್ತು.
undefined
ಶಾಸಕ ಕುಮಾರಸ್ವಾಮಿ ಪ್ರತಿರೋಧದ ನಡುವೆಯೂ ಮಲ್ಲಂದೂರು ಠಾಣೆಯ ಪಿಎಸ್ಐ ಆಗಿ ರವೀಶ್ ನಿಯೋಜನೆಗೊಂಡರು. ರವೀಶ್‌ಗೆ ಸ್ವಂತಂತ್ರವಾಗಿ ಸಿಕ್ಕ ಫಸ್ಟ್ ಸ್ಟೇಷನ್. ಇದು ಒಂದೆಡೆಯಾದ್ರೆ ಮತ್ತೊಂದೆಡೆ ಎಲ್ಲಾ ಪೊಲೀಸ್ ಠಾಣೆಯಂತೆ ಇದು ಕೂಡ ಹಳೇ ಸ್ಟೇಷನ್, ಸುಣ್ಣ ಬಣ್ಣ ಕಾಣದೆ ಅದೆಷ್ಟೋ ವರ್ಷಗಳೇ ಕಳೆದಿತ್ತು. ಆದ್ರೆ ಪಿಎಸ್ಐ ಆಗಿ ಅಧಿಕಾರಿ ವಹಿಸಿಕೊಂಡ ಕೆಲವೇ ದಿನಗಳೇ ಠಾಣೆಯ ಸ್ವರೂಪವೇ ಬದಲಾವಣೆ ಆಗಿದೆ. ಬಣ್ಣ-ಬಣ್ಣದ ಚಿತ್ರ, ಗೋಡೆಬರಹಗಳಿಂದ ಜಿಗಿ-ಜಿಗಿ-ಜಗಮಗಿಸುತ್ತಾ ಯಾವ್ದೋ ಇತರೆ ಸರ್ಕಾರಿ ಕಛೇರಿ ತರ ಕಾಣ್ತಿದೆ.
ಚಿತ್ರದುರ್ಗ ಜಿಲ್ಲೆಯ 6 ಕ್ಷೇತ್ರಗಳನ್ನು ಗೆಲ್ಲೋಣ: ಶಾಸಕ ತಿಪ್ಪಾರೆಡ್ಡಿ
ಠಾಣೆಗೆ ಹೈಟೆಕ್ ಸ್ಪರ್ಶ: ರವೀಶ್ ಇಲ್ಲಿಗೆ ಬಂದ ಮೇಲೆ ಕೆಲಸ ಮಾಡುವ ಜಾಗದ ವಾತಾವರಣ ಶುದ್ಧವಾಗಿದ್ದರೆ ಮನಸ್ಸು ಶುದ್ಧವಾಗಿರುತ್ತೆ ಎಂದು ಗ್ರಾಮ ಪಂಚಾಯಿತಿ ಹಾಗೂ ಸ್ಥಳಿಯ ದಾನಿಗಳ ಸಹಕಾರದಿಂದ ಇಡೀ ಠಾಣೆಗೆ ಹೈಟೆಕ್ ಸ್ಪರ್ಶ ನೀಡಿದ್ದಾರೆ. ಯಾರ ಬಳಿಯೂ ಒಂದು ರೂಪಾಯಿ ಪಡೆದುಕೊಂಡಿಲ್ಲ. ನೀವೇ ಬಂದು ನೋಡಿ. ಕೆಲಸ ಮಾಡಿಸಿಕೊಡಿ ಎಂದು ಅವರಿಂದಲೇ ಎಲ್ಲಾ ಕೆಲಸ ಮಾಡಿಸಿದ್ದಾರೆ. ಇಂದು ಠಾಣೆಯ ಒಳಗೆ ಹೋದರೆ ಇದು ಪೊಲೀಸ್ ಸ್ಟೇಷನ್ ಎಂಬ ಭಾವವೇ ಬರೋದಲ್ಲಿ ಅಷ್ಟರ ಮಟ್ಟಿಗೆ ಬದಲಿಸಿದ್ದಾರೆ. ಇವರ ಕೆಲಸಕ್ಕೆ ಸ್ಥಳಿಯರು ಕೈಜೋಡಿಸಿ ಸಾಥ್ ನೀಡಿದ್ದಾರೆ.
ಗೋಡೆ ಬರಹದ ಮೂಲಕ ಜಾಗೃತಿ ಮೂಡಿಸುವ ಕೆಲಸ: ಇನ್ನು ಪೊಲೀಸ್ ಠಾಣೆಯ ಕಾಂಪೌಂಡ್ ಹೊರಭಾಗದಲ್ಲಿ ಪೋಕ್ಸೋ, ಟ್ರಾಫಿಕ್ ರೂಲ್ಸ್, ಅಪ್ರಾಪ್ತರಿಗೆ ವಾಹನ ಕೊಡಬೇಡಿ, ಜೂಜಾಟ, ಕಳ್ಳತನ, ಮಕ್ಕಳನ್ನ ಕೆಲಸಕ್ಕೆ ಬಳಸುವುದು, ಬಾಲಾಪಾರಾದ ಸೇರಿದಂತೆ ಬಹುತೇಕ ಚಿತ್ರಗಳ ಬಿಡಿಸುವ ಮೂಲಕ ಜಾಗೃತಿ ಮೂಡಿಸಿದ್ದಾರೆ. ಕಾಂಪೌಂಡ ಒಳಭಾಗದಲ್ಲಿ ಕಾಡುಪ್ರಾಣಿಗಳ ಬೇಟೆ, ಮರ ಕಡಿಯುವುದು, ಕಾಡುಪ್ರಾಣಿಗಳ ರಕ್ಷಣೆ ಮಾಡುವಂತಹಾ ಚಿತ್ರಗಳನ್ನ ಬಿಡಿಸಿ ಅಪರಾಧಿ ಮನಸ್ಸುಗಳಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಚಿತ್ರಗಳ ಮೂಲಕ ತಪ್ಪು ಮಾಡಿದವರಿಗೆ ಮನವರಿಕೆಯಾಗುವಂತೆ ಮಾಡಿದ್ದಾರೆ.
ಜೊತೆಗೆ, ಠಾಣೆಯ ಆವರಣದಲ್ಲಿ ಪಾರ್ಕ್ ಕೂಡ ಮಾಡಿದ್ದಾರೆ. ಈ ಪೊಲೀಸ್ ಸ್ಟೇಷನ್ ಆವರಣದ ಒಳಗೆ ಹೋದರೆ ಇದು ಪೊಲೀಸ್ ಸ್ಟೇಷನ್ ಎಂದೇ ಅನ್ನಿಸದಂತೆ ಠಾಣೆ ಅಂದ್ರೆ ಇರುವ ಕಲ್ಪನೆಯನ್ನ ಸಂಪೂರ್ಣ ಬದಲಿಸಿದ್ದಾರೆ. ಪಿಎಸ್ಐ ತಾನು ಕೆಲಸ ಮಾಡುವ ಜಾಗ ಹೇಗೆ ಇರಬೇಕೆಂದು ಅವರ ಭಾವನೆ ಇದೆಯೋ ಸ್ಥಳಿಯರು ಹಾಗೂ ಗ್ರಾಮ ಪಂಚಾಯಿತಿಯ ಸಹಕಾರದಲ್ಲಿ ಅದೇ ರೀತಿ ಬದಲಿಸಿದ್ದಾರೆ. ಇನ್ನು ಠಾಣೆಯಲ್ಲಿ ಲೈಬ್ರರಿ ಮಾಡಬೇಕೆಂದು ಇವರ ಬಯಕೆ. ಸ್ಥಳಿಯರು ಅದಕ್ಕೂ ಸಹಕಾರ ನೀಡೋದಾಗಿ ಹೇಳಿದ್ದಾರೆ. ಪಿಎಸ್ಐ ರವೀಶ್ ಅವರ ಕೆಲಸವನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಕೂಡ ಮೆಚ್ಚಿದ್ದಾರೆ.
ಆಕಾಶದಿಂದ ರಸ್ತೆಗೆ ಅಪ್ಪಳಿಸಿದ ಪ್ಯಾರಾಗ್ಲೈಡರ್: ಪೈಲೆಟ್ ಸೇರಿ ಇಬ್ಬರಿಗೆ ಗಂಭೀರ ಗಾಯ
ಒಟ್ಟಾರೆ, ಸ್ಟೆಷನ್ ಏನೋ ನೋಡೋದಕ್ಕೆ ಸಖತ್ತಾಗಿದೆ. ಆದ್ರೆ, ಪೊಲೀಸ್ ಠಾಣೆಯ ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಬಹಳ ಮುಖ್ಯ. ಆ ಆಂತರಿಕ ಸೌಂದರ್ಯ ಸರಿ ಇಲ್ಲ ಎಂದೇ ಜನಸಮಾನ್ಯರು ಪೊಲೀಸರ ಮೇಲೆ ಕಿಡಿಕಾರುತ್ತಾರೆ. ಕಾನೂನು ಬಡವರಿಗೆ ದೂರದ ಬೆಟ್ಟ ಕಣ್ಣಿಗೆ ನುಣ್ಣು ಎಂಬಂತಾಗಿದೆ ಎಂದೇಲ್ಲಾ ಬಣ್ಣಿಸುತ್ತಾರೆ. ಆದ್ರೆ, ಈ ಠಾಣೆಯ ವಾತಾವರಣ ನೋಡಿದರೆ ಆ ರೀತಿ ಇಲ್ಲ ಎಂದು ಮೇಲ್ನೋಟಕ್ಕೆ ಕಾಣ್ಣುತ್ತಿದೆ. ಮುಂದಿನ ದಿನಗಳಲ್ಲೂ ಈ ಪೊಲೀಸ್ ಠಾಣೆ ಇನ್ನಷ್ಟು ಜನಸ್ನೇಹಿ ಬದಲಾವಣೆಯಾಗಲಿ ಎನ್ನುವುದು ನಾಗರೀಕರ ಆಶಯ.