‘ಇನ್ನೂ ಮೂರೂವರೆ ವರ್ಷ ನಾನೇ ಮುಖ್ಯಮಂತ್ರಿ’

By Web DeskFirst Published Nov 29, 2019, 11:16 AM IST
Highlights

ಉಪಚುನಾವಣೆ ನಡೆಯುತ್ತಿರುವ ಹದಿನೈದು ಕ್ಷೇತ್ರಗಳಲ್ಲೂ ನಮ್ಮ ಪಕ್ಷದ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದಾರೆ| ಯಾರು ಏನೇ ಹೇಳಿದ್ರೂ ಮತದಾರರು ನಮ್ಮ ಪರವಾಗಿದ್ದಾರೆ| ಈಗಾಗಲೇ ನಾವು ಹದಿನೈದೂ ಕ್ಷೇತ್ರಗಳನ್ನ ಗೆದ್ದಾಗಿದೆ|  ಗೆಲುವಿನ ಅಂತರಕ್ಕಾಗಿ ನಾವು ಪೈಪೋಟಿ ಮಾಡ್ತಿದ್ದೇವೆ ಎಂದ ಸಿಎಂ|

ಹಾವೇರಿ[ನ.29]: ನಮಗೆ ಯಾರ ಸಹಕಾರವೂ ಬೇಡ‌.ನಮಗೆ ಬಹುಮತ ಬಂದೇ ಬರುತ್ತದೆ. ಬೇರೆಯವರು ಸರಕಾರ ರಚಿಸೋ ಪ್ರಮೇಯವೇ ಬರೋದಿಲ್ಲ ಎಂದು ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ.

ಶುಕ್ರವಾರ ನಗರದ ಜಿಲ್ಲಾ ಕ್ರೀಡಾಂಗಣದ ಹೆಲಿಪ್ಯಾಡ್ ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇನ್ನೂ ಮೂರೂವರೆ ವರ್ಷ ನಾನೇ ಮುಖ್ಯಮಂತ್ರಿಯಾಗಿ ಇರಲಿದ್ದೇನೆ. ಉಪಚುನಾವಣೆ ನಡೆಯುತ್ತಿರುವ ಹದಿನೈದು ಕ್ಷೇತ್ರಗಳಲ್ಲೂ ನಮ್ಮ ಪಕ್ಷದ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದಾರೆ. ಯಾರು ಏನೇ ಹೇಳಿದ್ರೂ ಮತದಾರರು ನಮ್ಮ ಪರವಾಗಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈಗಾಗಲೇ ನಾವು ಹದಿನೈದೂ ಕ್ಷೇತ್ರಗಳನ್ನ ಗೆದ್ದಾಗಿದೆ. ಗೆಲುವಿನ ಅಂತರಕ್ಕಾಗಿ ನಾವು ಪೈಪೋಟಿ ಮಾಡ್ತಿದ್ದೇವೆ ಎಂದು ಹೇಳಿದ್ದಾರೆ.ಬಿಜೆಪಿ ಅಭ್ಯರ್ಥಿ ಬಿ ಸಿ ಪಾಟೀಲ್ ಪರವಾಗಿ ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಅವರು ಇಂದು ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದಾರೆ. ಕ್ಷೇತ್ರದ ಗುಡ್ಡದ ಮಾದಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಾಧುಸ್ವಾಮಿ ಅವರು ಪ್ರಚಾರ ನಡೆಸಲಿದ್ದಾರೆ. ಬಿ. ಸಿ ಪಾಟೀಲ್ ಗೆ ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ಅವರೂ ಕೂಡ ಸಾಥ್ ನೀಡಲಿದ್ದಾರೆ. ಪ್ರಚಾರ ಮಾಡುತ್ತಿರುವ ಗ್ರಾಮಗಳಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮ ಪಟ್ಟಿದ್ದಾರೆ. 

click me!