ಬಹಿರಂಗ ಹೇಳಿಕೆ ಕೊಡಲಿ : ಎಚ್‌ಡಿಕೆ - ದೇವೇಗೌಡರಿಗೆ ಕೈ ನಾಯಕ ಸವಾಲ್

Kannadaprabha News   | Asianet News
Published : Jun 29, 2021, 01:03 PM IST
ಬಹಿರಂಗ ಹೇಳಿಕೆ ಕೊಡಲಿ :  ಎಚ್‌ಡಿಕೆ - ದೇವೇಗೌಡರಿಗೆ ಕೈ ನಾಯಕ ಸವಾಲ್

ಸಾರಾಂಶ

ಮನ್‌ಮುಲ್‌ನಲ್ಲಿ ನಡೆದಿರುವ ನೀರು ಮಿಶ್ರಿತ ಹಾಲು ಹಗರಣ ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಅವರು ಈಗ  ಏಕೆ ಸುಮ್ಮನಿದ್ದಾರೆಂದು ಪ್ರಶ್ನೆ ಕುಮಾರಸ್ವಾಮಿ, ದೇವೇಗೌಡರಿಗೆ ಬಹಿರಂಗ ಸವಾಲು ಹಾಕಿದ ಚೆಲುವರಾಯಸ್ವಾಮಿ

ಮಂಡ್ಯ (ಜೂ.29):  ಮನ್‌ಮುಲ್‌ನಲ್ಲಿ ನಡೆದಿರುವ ನೀರು ಮಿಶ್ರಿತ ಹಾಲು ಹಗರಣದ ಕುರಿತು ತನಿಖೆ ನಡೆಸುವಂತೆ ಮಂಡ್ಯಕ್ಕೆ ಬಂದು ಹೇಳುವ ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಅವರು ಈಗ  ಏಕೆ ಸುಮ್ಮನಿದ್ದಾರೆ ಎಂದು ಮಾಜಿ ಸಚಿವ ಎನ್ ಚೆಲುವರಾಯಸ್ವಾಮಿ ಪ್ರಶ್ನಿಸಿದರು. 

ತಾಲೂಕಿನ ಬಸರಾಳು ಗ್ರಾಮದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರು ಮತ್ತು ಕುಮಾರಸ್ವಾಮಿ ತನಿಖೆ ನಿಲ್ಲಿಸುವಂತೆ ಸಿಎಂ ಜೊತೆ ಮಾತನಾಡಿಲ್ಲ ಎಂದರೆ ಬಹಿರಂಗವಾಗಿ ಹೇಳಿಕೆ ಕೊಡಲಿ ಎಂದು ಸವಾಲು ಹಾಕಿದರು. 

'ಗೌಡರ ಮೇಲಿನ ಆರೋಪ ಸಾಬೀತಾದರೆ ಜೆಡಿಎಸ್ ವಿಸರ್ಜನೆ' ...

ದೇವೇಗೌಡರ ಬಗ್ಗೆ ನನಗೆ ಅಪಾರವಾದ ಗೌರವವಿದೆ. ಜಿಲ್ಲೆಯಲ್ಲಿ ಆರು ಮಂದಿ ಜೆಡಿಎಸ್ ಶಾಸಕರಿದ್ದಾರೆ. ಯಾರೊಬ್ಬರೂ ಈ ಹಗರಣದ ಬಗ್ಗೆ ಮಾತನಾಡುತ್ತಿಲ್ಲವೇಕೆ ಎಂದು ಪರೋಕ್ಷವಾಗಿ ಕುಟುಕಿದರು. 

ಆಡಿಯೋದಲ್ಲಿ ನನ್ನದೆ ಧ್ವನಿ : ಆಡಿಯೋದಲ್ಲಿರುವ ಧ್ವನಿ ನನ್ನದೇ. ನಾನೇ ಮಾತನಾಡಿದ್ದೇನೆ. ಜವರೇಗೌಡರು ನನಗೆ ಕಾಲ್ ಮಾಡಿ ಎಚ್ ಡಿ ಕುಮಾರಸ್ವಾಮಿ ತನಿಖೆಗೆ ಅಡ್ಡಿಯಾಗಿದ್ದಾರೆ ಎಂದಾಗ ಈ ವಿಷಯ  ನಿಮಗೂ ಗೊತ್ತಾಯಿತಾ ಎಂದು ಕೇಳಿದ್ದೇನೆ.  

'ಜಮೀರ್ ಅಂಡ್ ಟೀಂ ಕಾಂಗ್ರೆಸ್ ಹೆಸರಿನಲ್ಲಿರುವ ನಕಲಿ ಬಿಜೆಪಿಯವರು' .

ತನಿಖೆಗೆ ದೇವೇಗೌಡರ ಕುಟುಂಬವೇ ಅಡ್ಡಿ ಎಂದು ಹಲವರು ಮಾತನಾಡುತ್ತಿದ್ದಾರೆ. ಯಾವುದೇ ಹಗರಣವಾಗಿರಲಿ ತನಿಖಾ ಸಂಸ್ಥೆಗೆ ಒಪ್ಪಿಸಿದ ತಕ್ಷಣವೇ ಸರ್ಕಾರದ ಆದೇಶವಾಗುತ್ತದೆ.  ನೀರು ಮಿಶ್ರಿತ ಹಾಲು ಹಗರಣವನ್ನು  ಸಿಐಡಿ ತನಿಖೆಗೆ ಒಪ್ಪಿಸಿರುವುದಾಗಿ ಹೇಳಿ ಹದಿನೈದು ದಿನಗಳಾದರೂ ಇನ್ನೂ ಆದೇಶ ಹೊರಬಿದ್ದಿಲ್ಲ. ಇದರ ಅರ್ಥ ಏನು..? ಯಾರೂ ಇದನ್ನ ತಡೆ ಹಿಡಿಯುತ್ತಿದ್ದಾರೆ ಎನ್ನುವುದು ಬಹಿರಂಗಪಡಿಸಲು ಎಂದು ಒತ್ತಾಯಿಸಿದರು. 

ಮನ್‌ಮುಲ್‌ನಲ್ಲಿ ನಡೆದಿರುವುದು ಸಾಮಾನ್ಯ ಹಗರಣವಲ್ಲ 100ರಿಂದ 200 ಕೋಟಿ ಹಗರಣ ಎಂದರು. 

PREV
click me!

Recommended Stories

ಜನರ ವಿಶ್ವಾಸ ಕಳೆದುಕೊಂಡ ಕಾಂಗ್ರೆಸ್, ಚುನಾವಣೆಗೇ ಬನ್ನಿ: ಸರ್ಕಾರಕ್ಕೆ ಸಿ.ಟಿ.ರವಿ ಸವಾಲು
ಸಿದ್ದರಾಮಯ್ಯ ಆಡಳಿತ ಕೇವಲ ಟೀಕೆಯಲ್ಲಿ ಮುಳುಗಿದೆ: ಕೇಂದ್ರ ಸಚಿವ ವಿ.ಸೋಮಣ್ಣ ಆರೋಪ