ಮೈಸೂರು: ಕೊನೆಗೂ ಬೋನಿಗೆ ಬಿತ್ತು ಗ್ರಾಮಸ್ಥರನ್ನು ಹೆದರಿಸಿದ್ದ ಚಿರತೆ

By Kannadaprabha NewsFirst Published Feb 6, 2020, 12:02 PM IST
Highlights

ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆಯೊಂದು ಸೆರೆ ಸಿಕ್ಕಿರುವ ಘಟನೆ ನಂಜನಗೂಡು ತಾಲೂಕಿನ ಚಿಕ್ಕಯ್ಯನಛಿತ್ರ ಬಳಿಯ ರಾಂಪುರ ಗ್ರಾಮದಲ್ಲಿ ಸೆರೆ ಸಿಕ್ಕಿದೆ.

ಮೈಸೂರು(ಫೆ.06): ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆಯೊಂದು ಸೆರೆ ಸಿಕ್ಕಿರುವ ಘಟನೆ ನಂಜನಗೂಡು ತಾಲೂಕಿನ ಚಿಕ್ಕಯ್ಯನಛಿತ್ರ ಬಳಿಯ ರಾಂಪುರ ಗ್ರಾಮದಲ್ಲಿ ಸೆರೆ ಸಿಕ್ಕಿದೆ.

ಕಳೆದ ಒಂದು ತಿಂಗಳಿಂದ ಗ್ರಾಮದ ವ್ಯಾಪ್ತಿಯಲ್ಲಿ ಚಿರತೆಯು ಆಗಾಗ್ಗೆ ಕಾಣಿಸಿಕೊಳ್ಳುತ್ತಿರುವುದಾಗಿ ಗ್ರಾಮಸ್ಥರಾದ ಗಣೇಶ್‌ ನಾಯಕ್‌ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು.

ಚಲಿಸುತ್ತಿದ್ದ ರೈಲಿನಲ್ಲಿ ಎಚ್‌ಎಸ್ವಿ ಕುರಿತ ಪುಸ್ತಕ ಬಿಡುಗಡೆ!

ವಲಯ ಅರಣ್ಯಾಧಿಕಾರಿ ಲೋಕೇಶ್‌ ಮೂರ್ತಿ ನೇತೃತ್ವದಲ್ಲಿ ಚಿರತೆಯನ್ನು ಸೆರೆಹಿಡಿಯಲು ಗಣೇಶ್‌ ನಾಯಕ್‌ ಎಂಬವರ ಜಮೀನಿನಲ್ಲಿ ಕಳೆದ 20 ದಿನಗಳ ಹಿಂದೆ ಬೋನು ಇರಿಸಲಾಗಿತ್ತು. ಬುಧವಾರ ಮುಂಜಾನೆ ವೇಳೆ 3 ವರ್ಷದ ಗಂಡು ಚಿರತೆಯು ಬೋನಿಗೆ ಸೆರೆ ಸಿಕ್ಕಿದ್ದು, ಸ್ಥಳಕ್ಕೆ ಉಪ ಅರಣ್ಯಾಧಿಕಾರಿ ಮದನ್‌ ಕುಮಾರ್‌, ಅರಣ್ಯ ರಕ್ಷಕ ಶರತ್‌ ಬಂದು ಪರಿಶೀಲಿಸಿದ್ದಾರೆ.

ಸೆರೆ ಸಿಕ್ಕಿರುವ ಚಿರತೆಯನ್ನು ನಂಜನಗೂಡಿನ ಅರಣ್ಯ ಇಲಾಖೆ ಕಚೇರಿಯಲ್ಲಿ ಇರಿಸಲಾಗಿದ್ದು ಮುಂದಿನ ಕ್ರಮ ಕೈಗೊಂಡಿರುವುದಾಗಿ ಎಂದು ಉಪ ಅರಣ್ಯಾಧಿಕಾರಿ ಮದನ್‌ ಕುಮಾರ್‌ ತಿಳಿಸಿದ್ದಾರೆ.

click me!