ಸಚಿವರಾದ ಜಾರಕಿಹೊಳಿ: ಉತ್ತರ ಕರ್ನಾಟಕದ ಹುಲಿಗೆ ಜೈ ಎಂದ ಅಭಿಮಾನಿಗಳು

Suvarna News   | Asianet News
Published : Feb 06, 2020, 11:49 AM ISTUpdated : Feb 06, 2020, 11:50 AM IST
ಸಚಿವರಾದ ಜಾರಕಿಹೊಳಿ: ಉತ್ತರ ಕರ್ನಾಟಕದ ಹುಲಿಗೆ ಜೈ ಎಂದ ಅಭಿಮಾನಿಗಳು

ಸಾರಾಂಶ

ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ರಮೇಶ ಜಾರಕಿಹೊಳಿ| ಗೋಕಾಕ್‌ನಲ್ಲಿ ಮನೆ ಮಾಡಿದ ಸಂಭ್ರಮ|'ಉತ್ತರ ಕರ್ನಾಟಕ ಹುಲಿ ರಮೇಶ್ ಜಾರಕಿಹೊಳಿಗೆ ಜೈ' ಎಂಬ ಘೋಷಣೆ ಕೂಗಿದ ಅಭಿಮಾನಿಗಳು|

ಬೆಳಗಾವಿ(ಫೆ.06): ಬಿ.ಎಸ್‌.ಯಡಿಯೂರಪ್ಪ ಸಂಪುಟದಲ್ಲಿ ಇಂದು ಗೋಕಾಕ್ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ‌ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಅಭಿಮಾನಿಗಳು ಗೋಕಾಕ್ ನಗರದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. 

ಗೋಕಾಕ್ ನಗರದ ಬಸವೇಶ್ವರ ವೃತ್ತ, ಬ್ಯಾಳಿ ಕಾಟಾ, ಸಂಗೊಳ್ಳಿ ರಾಯಣ್ಣ ವೃತ್ತ, ರಮೇಶ್ ಜಾರಕಿಹೊಳಿ‌ ಕಚೇರಿ ಎದುರು ಪಟಾಕಿ ಸಿಡಿಸಿ 'ಉತ್ತರ ಕರ್ನಾಟಕ ಹುಲಿ ರಮೇಶ್ ಜಾರಕಿಹೊಳಿಗೆ ಜೈ' ಎಂದು ಘೋಷಣೆ ಕೂಗಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ವೇಳೆ ಸುವರ್ಣನ್ಯೂಸ್ ಜೊತೆ ಮಾತನಾಡಿದ ಅಭಿಮಾನಿಗಳು ರಮೇಶ್ ಜಾರಕಿಹೊಳಿ‌ ಮೂರನೇ ಬಾರಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಉತ್ತರ ಕರ್ನಾಟಕದ ಹುಲಿಯ ತಾಕತ್ ಏನು ಎಂದು ತೋರಿಸಿದ್ದಾರೆ. ರಮೇಶ್ ಜಾರಕಿಹೊಳಿ‌ ನೇತೃತ್ವದಲ್ಲಿ ಗೋಕಾಕ್ ಅಭಿವೃದ್ಧಿ ಆಗಲಿದೆ ಎಂದು ಹೇಳಿದ್ದಾರೆ. 

ಇನ್ನು ಜಲಸಂಪನ್ಮೂಲ ಸಚಿವರು ಎಂಬ ಹೆಸರಿನಲ್ಲಿ ವಾಟ್ಸಪ್ ಗ್ರೂಪ್ ಕ್ರಿಯೇಟ್ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿ ಯಾವುದೇ ಖಾತೆ ನೀಡಿದರೂ ನಿಭಾಯಿಸುವ ಸಾಮರ್ಥ್ಯ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 
 

PREV
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ