ಚೆಕ್ಕಿಂಗ್ ಇನ್ಸ್‌ಪೆಕ್ಟರ್ ಬರ್ತಿದ್ದಂತೆ ಕಂಡಕ್ಟರ್‌ಗೆ ಹೃದಯಾಘಾತ; ಸಾವು

Published : Nov 02, 2022, 03:40 AM IST
ಚೆಕ್ಕಿಂಗ್ ಇನ್ಸ್‌ಪೆಕ್ಟರ್ ಬರ್ತಿದ್ದಂತೆ ಕಂಡಕ್ಟರ್‌ಗೆ ಹೃದಯಾಘಾತ; ಸಾವು

ಸಾರಾಂಶ

ಬಸ್‌ನಲ್ಲೇ ಹೃದಯಾಘಾತ: ಕಂಡಕ್ಟರ್‌ ಸಾವು ಚೆಕ್ಕಿಂಗ್ ಅಧಿಕಾರಿಗಳು ಬಸ್‌ ಹತ್ತಿದ ವೇಳೆಯೇ ಕುಸಿದು ಬಿದ್ದ ಕಂಡಕ್ಟರ್‌

ಹುಬ್ಬಳ್ಳಿ (ನ.2) : ಕರ್ತವ್ಯ ನಿರತ ಬಸ್‌ ನಿರ್ವಾಹಕರೊಬ್ಬರು ಬಸ್‌ನಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಇಲ್ಲಿನ ವಿದ್ಯಾನಗರದಲ್ಲಿ ಮಂಗಳವಾರ ನಡೆದಿದೆ. ನಗರ ಸಾರಿಗೆ ವಿಭಾಗದ ಸಿಟಿ-1 ಡಿಪೋದಲ್ಲಿ ಕೆಲಸ ಮಾಡುತ್ತಿದ್ದ ಮಹೇಶ ಹೂಗಾರ (40) ಮೃತರು.

ಇಸ್ಪಿಟ್ ಆಡುವಾಗ ಹೃದಯಾಘಾತ: ಬದುಕಿನ ಆಟ ಮುಗಿಸಿದ ಜೆಡಿಎಸ್ ಮುಖಂಡ

ಇವರು ಸಿಬಿಟಿಯಿಂದ ಗಾಮನಗಟ್ಟಿಕಡೆಗೆ ಹೋಗುವ ಬಸ್‌ನಲ್ಲಿ ನಿರ್ವಾಹಕರಾಗಿದ್ದರು. ಬಿವಿಬಿ ಬಸ್‌ ಸ್ಟಾಫ್‌ನಲ್ಲಿ ಚೆಕ್ಕಿಂಗ್‌ ಇನ್‌ಸ್ಪೆಕ್ಟರ್‌ ಮಂಗಲಾ ಹೊಸಮನಿ ಹಾಗೂ ಆಯೇಟಿ ಎಂಬುವವರು ಬಸ್‌ ಹತ್ತಿದ್ದಾರೆ. ಇವರು ಬಸ್‌ ಹತ್ತಿದ ಕೆಲ ಸಮಯದಲ್ಲೇ ಮಹೇಶ ಹೂಗಾರ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಚಾಲಕನ ಜತೆಗೂಡಿಸಿ ಕಿಮ್ಸ್‌ಗೆ ಕಳುಹಿಸಲಾಗಿದೆ. ಆದರೆ ಕಿಮ್ಸ್‌ಗೆ ತಲುಪುವಷ್ಟರಲ್ಲೇ ಮೃತಪಟ್ಟಿದ್ದಾರೆ. ಬಸ್‌ನಲ್ಲಿದ್ದ ಪ್ರಯಾಣಿಕರನ್ನೆಲ್ಲ ಬೇರೆ ಬಸ್‌ನಲ್ಲಿ ತಪಾಸಣಾ ಅಧಿಕಾರಿಗಳೇ ಕಳುಹಿಸಿದ್ದಾರೆ. ಮೃತರು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನವರಾಗಿದ್ದಾರೆ. ಕಳೆದ ಕೆಲ ವರ್ಷದಿಂದ ಇವರು ಹುಬ್ಬಳ್ಳಿ ಸಾರಿಗೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ನಗರ ಸಾರಿಗೆ ವಿಭಾಗದ ನಿಯಂತ್ರಣಾಧಿಕಾರಿ ವಿವೇಕಾನಂದ ವಿಶ್ವಜ್ಞ ತಿಳಿಸಿದ್ದಾರೆ.

ಸಾವಿನಲ್ಲೂ ಒಂದಾದ ವೃದ್ಧ ದಂಪತಿ 

ಪತಿ ಶಿವಪುತ್ರಪ್ಪ ನೆಲಗುಡ್ಡ (91) ತೀವ್ರ ಅನಾರೋಗ್ಯ ಕಾರಣದಿಂದ ಮಂಗಳವಾರ ನಿಧನರಾಗಿದ್ದಾರೆ. ಪತ್ನಿ ಬಸಮ್ಮ (85) ಪತಿಯ ಸಾವಿನ ಸುದ್ದಿ ತಿಳಿದು ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಈ ಜೋಡಿ 70 ವರ್ಷಗಳ ಕಾಲ ಒಟ್ಟಿಗೆ ಜೀವನ ಕಳೆದಿದ್ದು, ಈ ದಂಪತಿ ಸಾವಿನ ಸುದ್ದಿಯನ್ನು ನೋಡಿದ ಊರಿನ ಗ್ರಾಮಸ್ಥರು ಮಮ್ಮಲ ಮರುಗಿದರು. ಈ ದಂಪತಿಗೆ ಇಬ್ಬರು ಪುತ್ರರು, ಓರ್ವ ಪುತ್ರಿ, ಐವರು ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವಿದೆ. ಅಂತ್ಯಕ್ರಿಯೆಯಲ್ಲಿ ಗ್ರಾಮಸ್ಥರು, ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡು ಕಂಬನಿ ಮಿಡಿದರು.

 ವಿದ್ಯುತ್‌ ತಂತಿ ಸ್ಪರ್ಶಿಸಿ ವ್ಯಕ್ತಿ ಸಾವು

ಕಾರ್ಕಳ : ವಿದ್ಯುತ್‌ ತಂತಿ ಸ್ಪರ್ಶಿಸಿ ವ್ಯಕ್ತಿಯೋರ್ವರು ಮೃತಪಟ್ಟಘಟನೆ ಅ.31 ರಂದು ಕಾರ್ಕಳ ಜೋಡುರಸ್ತೆ ಎಂಬಲ್ಲಿ ಸಂಭವಿಸಿದೆ/ ರಾಮಕೃಷ್ಣ ನಾಯ್ಕ (54) ಮೃತಪಟ್ಟವರು. ಅವರು ಆಕಸ್ಮಿಕವಾಗಿ ತುಂಡಾಗಿ ನೇತಾಡುತ್ತಿದ್ದ ವಿದ್ಯುತ್‌ ತಂತಿ ಸ್ಪರ್ಶಿಸಿ ಬಿದ್ದಿದ್ದರು. ಕೂಡಲೇ ಅವರನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ತಪಾಸಣೆ ಮಾಡಿದಾಗ ಮೃತಪಟ್ಟಿರುವುದು ದೃಢಪಟ್ಟಿದೆ. ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಕುರಿತು ಪ್ರಕರಣ ದಾಖಲಾಗಿದೆ.

ಚಳಿಗಾಲದಲ್ಲಿ ಹಾರ್ಟ್‌ ಅಟ್ಯಾಕ್‌ ಛಾನ್ಸ್ ಹೆಚ್ಚಿರುತ್ತಾ ? ತಪ್ಪಿಸೋಕೆ ಏನ್ ಮಾಡ್ಬೇಕು

ಇಂಟರ್ನ್‌ ಶಿಪ್‌ ಗಾಗಿ ತೆರಳಿದ್ದ ವಿದ್ಯಾರ್ಥಿ ನಾಪತ್ತೆ

ಇಂಟರ್ನ್‌ಶಿಪ್‌ ಮಾಡಲೆಂದು ಕಾರ್ಕಳದಿಂದ ಮಂಗಳೂರಿಗೆ ತೆರಳಿದ್ದ ವಿದ್ಯಾರ್ಥಿ ನಾಪತ್ತೆಯಾದ ಘಟನೆ ಕಾರ್ಕಳದಲ್ಲಿ ನಡೆದಿದೆ. ಶ್ರೇಯಸ್‌ (23) ನಾಪತ್ತೆಯಾದ ಯುವಕ. ಮೂಡಬಿದ್ರೆ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂ.ಬಿ.ಎ ವ್ಯಾಸಂಗ ಮಾಡುತ್ತಿದ್ದ ಶ್ರೇಯಸ್‌ ಅ. 31ರಂದು ಇಂಟರ್ನ್‌ಶಿಪ್‌ ಮಾಡಲು ಕಾರ್ಕಳದಿಂದ ಮಂಗಳೂರಿಗೆ ತೆರಳಿದ್ದು ಸಂಜೆಯಾದರು ಮನೆಗೆ ಬಾರದೇ ಪೋನ್‌ ಕರೆ ಮಾಡದೆ ಕಾಣೆಯಾಗಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Read more Articles on
click me!

Recommended Stories

ದಾವಣಗೆರೆ ಮಹಿಳೆಯನ್ನ ಕಚ್ಚಿಕೊಂದ 2 ರಾಟ್‌ವೀಲರ್ ನಾಯಿಗಳು ಜನರ ಹಲ್ಲೆಯಿಂದ ಸಾವು; ಶ್ವಾನಗಳ ಮಾಲೀಕ ಬಂಧನ
ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ