'ಚಂದ್ರು ಎಲ್ಲಿದ್ದಿ ಬಾರೋ' ನಾಪತ್ತೆಯಾಗಿರೋ ಅಣ್ಣನ ಮಗನ ನೆನೆದು ಎಂ.ಪಿ.ರೇಣುಕಾಚಾರ್ಯ ಕಣ್ಣೀರು

By Ravi Janekal  |  First Published Nov 1, 2022, 11:26 PM IST

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನಲ್ಲಿ ರೇಣುಕಾಚಾರ್ಯ ಸಹೋದರನ ಪುತ್ರನದ್ದೇ ಚರ್ಚೆ.ಕಳೆದ 48 ಗಂಟೆಯಿಂದ ರೇಣುಕಾಚಾರ್ಯ ಸಹೋದರ ರಮೇಶ್ ರವರ ಪುತ್ರ ಚಂದ್ರಶೇಖರ್ ನಾಪತ್ತೆಯಾಗಿದ್ದಾನೆ. ಈ ವಿಚಾರ ಹೊನ್ನಾಳಿ ಕ್ಷೇತ್ರದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದ್ದು ಸ್ವತಃ ಶಾಸಕ ರೇಣುಚಾರ್ಯರೇ ಕಂಗಲಾಗಿ ಮನೆಯಲ್ಲಿ ಕೂತಿದ್ದಾರೆ.


ದಾವಣಗೆರೆ (ನ. 1): ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನಲ್ಲಿ ರೇಣುಕಾಚಾರ್ಯ ಸಹೋದರನ ಪುತ್ರನದ್ದೇ ಚರ್ಚೆ.ಕಳೆದ 48 ಗಂಟೆಯಿಂದ ರೇಣುಕಾಚಾರ್ಯ ಸಹೋದರ ರಮೇಶ್ ರವರ ಪುತ್ರ ಚಂದ್ರಶೇಖರ್ ನಾಪತ್ತೆಯಾಗಿದ್ದಾನೆ. ಈ ವಿಚಾರ ಹೊನ್ನಾಳಿ ಕ್ಷೇತ್ರದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದ್ದು ಸ್ವತಃ ಶಾಸಕ ರೇಣುಚಾರ್ಯರೇ ಕಂಗಲಾಗಿ ಮನೆಯಲ್ಲಿ ಕೂತಿದ್ದಾರೆ.

ಮಾಜಿ ಸಚಿವ ರೇಣುಕಾಚಾರ್ಯ ಅಣ್ಣನ ಮಗ ನಾಪತ್ತೆ: ಹುಡುಕಾಟಕ್ಕೆ ವಿಶೇಷ ತಂಡ ರಚನೆ

Tap to resize

Latest Videos

 ಇದರಿಂದ ಶಾಸಕ ಎಂಪಿ ರೇಣುಕಾಚಾರ್ಯ(M.P.Renukacharya) ತಮ್ಮ ಸಹೋದರನ ಮಗನನ್ನು ನೆನೆದು, 'ಚಂದ್ರು ಎಲ್ಲಿದ್ದಿಯೋ ಬಾರೋ' ಎಂದು ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಬಹಳ ಅಧ್ಯಾತ್ಮಿಕತೆಗೆ ಹೆಚ್ಚು ಒತ್ತು ನೀಡ್ತಿದ್ದಾ ಚಂದ್ರಶೇಖರ್ ಭಾನುವಾರ ಸಂಜೆ 6 ಗಂಟೆಗೆ ಶಿವಮೊಗ್ಗ ಜಿಲ್ಲೆಯ ಗೌರಿಗದ್ದೆಗೆ ಆಗಮಿಸಿದ್ದ ವಿನಯ್ ಗುರುಜೀಯವರನ್ನು ಸ್ನೇಹಿತ್ ಕಿರಣ್ ರೊಂದಿಗೆ ಭೇಟಿ ಮಾಡಿ ಕೆಲವರಿಗೆ ಊಟ ಬಡಿಸಿದ್ದಾನೆ. ಅದಾದ ಬಳಿಕ ಶಿವಮೊಗ್ಗದಿಂದ ಹಿಂದಿರುಗಿದ ಚಂದ್ರು, ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿಗೆ ಎಂಟ್ರಿ ಆಗಿದ್ದೇ ಕೊನೆ ಇಲ್ಲಿತನಕ ಚಂದ್ರಶೇಖರ್ ಕಾರು ಸಮೇತ ನಾಪತ್ತೆಯಾಗಿದ್ದಾನೆ. 

ಇನ್ನು ಪೋಲಿಸರು, ಕುಟುಂಬಸ್ಥರು ಕೂಡ ಸಾಕಷ್ಟು ಹುಡುಕಾಟ ನಡೆಸುತ್ತಿದ್ದು, ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಶಾಸಕ ರೇಣುಕಾಚಾರ್ಯ ಬಿಕ್ಕಿ ಬಿಕ್ಕಿ ಅತ್ತರು. ತನ್ನ ಕ್ಷೇತ್ರದ ಪ್ರತಿಯೊಂದು ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದ ಚಂದ್ರು ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವುದು ಕುಟುಂಬಸ್ಥರಿಗೆ ಆತಂಕಕ್ಕೆ ದೂಡಿದೆ.  ಚಂದ್ರಶೇಖರ್ ತಂದೆ ರಮೇಶ್ ತಲೆ ಮೇಲೆ ಕೈ ಹೊತ್ತು ಕೂತಿರುವ ದೃಶ್ಯಗಳು ಮನಕಲುಕುವಂತಿದೆ. 

ನಾಪತ್ತೆಯಾದ ಚಂದ್ರು ಭೇಟಿ ನೀಡಿದ್ದು ಎಲ್ಲಿ?

ಭಾನುವಾರ ರಾತ್ರಿ ಶಿವಮೊಗ್ಗದಲ್ಲಿ ಚಂದ್ರಶೇಖರ್ ಕಾರು ಪಾಸ್ ಆಗಿರುವುದು ಸಿಸಿಟಿವಿ ಸೆರೆಯಾಗಿದೆ. ಭಾನುವಾರ ರಾತ್ರಿ 11.56ಕ್ಕೆ ಶಿವಮೊಗ್ಗದಿಂದ ವಾಹನ ಪಾಸ್ ಆಗಿದ್ದು, ಸೋಮವಾರ ಬೆಳಗ್ಗೆ 6.48 ಮೊಬೈಲ್ ಪೋನ್ ಲಾಸ್ಟ್ ಲೊಕೆಶನ್ ತೋರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ದಾವಣಗೆರೆ ಪೊಲೀಸರಿಂದ ತೀವ್ರ ತಪಾಸಣೆ ಕಾರ್ಯ ಮುಂದುವರಿದಿದ್ದು, ಚಂದ್ರಶೇಖರ್ ಚಲಾಯಿಸುತ್ತಿದ್ದ ಕ್ರೇಟಾ ಕಾರು ಸಹ ಇದುವರೆಗು ಪತ್ತೆಯಾಗದೆ ಇರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. 

ಐದು ವರ್ಷದ ಕಂದನನ್ನು ಕೊಂದು ನೇಣಿಗೆ ಶರಣಾದ ತಂದೆ

ಶಿವಮೊಗ್ಗ ದಾವಣಗೆರೆ ಚಿತ್ರದುರ್ಗ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಇನ್ನು ತಮ್ಮ ನಾಯಕನಿಗೆ ಸಮಾಧಾನ ಮಾಡಲು ಎಂಪಿ ರೇಣುಕಾಚಾರ್ಯ ರ ನಿವಾಸಕ್ಕೆ ಆಪಾರ ಸಂಖ್ಯೆಯ ಕಾರ್ಯಕರ್ತರು ಅಭಿಮಾನಿಗಳು ಆಗಮಿಸುತ್ತಿದ್ದು, KA 17 MA 2534 craeta ಕಾರು ಚಂದ್ರಶೇಖರ್ ಮೊಬೈಲ್ ಸಂಖ್ಯೆ  8792667691 ಇದಾಗಿದ್ದು ಇದುವರೆಗು ಸ್ವಿಚ್ ಆಪ್ ಆಗಿದೆ ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.

click me!