ಪೊಲೀಸ್ ಪೇದೆ ನೇಮಕಾತಿ ವಯೋಮಿತಿ ಹೆಚ್ಚಿಸುವಂತೆ ಆಗ್ರಹಿಸಿ ಆಕಾಂಕ್ಷಿಗಳು ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಕಾಲಿಗೆ ಬಿದ್ದು ಕಣ್ಣೀರು ಹಾಕಿದ ಘಟನೆ ಮಂಗಳವಾರ ತುಮಕೂರಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭ ವೇಳೆ ನಡೆದಿದೆ. ಈ ಸಂದರ್ಭದಲ್ಲಿ ಸಚಿವರೆದುರು ಅಳಲು ತೋಡಿಕೊಳ್ಳಲು ಬಂದ ಆಕಾಂಕ್ಷಿಯೊಬ್ಬರಿಗೆ ಸ್ಥಳದಲ್ಲಿದ್ದ ಡಿವೈಎಸ್ಪಿ ಕಪಾಳಮೋಕ್ಷ ಮಾಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಯಿತು.
ತುಮಕೂರು (ನ.2) : ಪೊಲೀಸ್ ಪೇದೆ ನೇಮಕಾತಿ ವಯೋಮಿತಿ ಹೆಚ್ಚಿಸುವಂತೆ ಆಗ್ರಹಿಸಿ ಆಕಾಂಕ್ಷಿಗಳು ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಕಾಲಿಗೆ ಬಿದ್ದು ಕಣ್ಣೀರು ಹಾಕಿದ ಘಟನೆ ಮಂಗಳವಾರ ತುಮಕೂರಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭ ವೇಳೆ ನಡೆದಿದೆ. ಈ ಸಂದರ್ಭದಲ್ಲಿ ಸಚಿವರೆದುರು ಅಳಲು ತೋಡಿಕೊಳ್ಳಲು ಬಂದ ಆಕಾಂಕ್ಷಿಯೊಬ್ಬರಿಗೆ ಸ್ಥಳದಲ್ಲಿದ್ದ ಡಿವೈಎಸ್ಪಿ ಕಪಾಳಮೋಕ್ಷ ಮಾಡಿದ ಘಟನೆ ನಡೆದು, ತೀವ್ರ ಆಕ್ರೋಶಕ್ಕೆ ಕಾರಣವಾಯಿತು.
ಇನ್‌ಸ್ಪೆಕ್ಟರ್ ನಂದೀಶ್ ಅನಾರೋಗ್ಯದಿಂದ ಸಾವು: ಸಚಿವ ಆರಗ ಜ್ಞಾನೇಂದ್ರ
ಇಲ್ಲಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಆರಗ ಜ್ಞಾನೇಂದ್ರರನ್ನು ಭೇಟಿಯಾಗಲು ಉತ್ತರ ಕರ್ನಾಟಕದ ಒಂದಷ್ಟುಪೇದೆ ಹುದ್ದೆ ಆಕಾಂಕ್ಷಿಗಳು ಆಗಮಿಸಿದ್ದರು. ಆದರೆ ಪೊಲೀಸರು ಇದಕ್ಕೆ ಆಸ್ಪದ ಕೊಡಲಿಲ್ಲ. ಈ ವೇಳೆ ಪೊಲೀಸರು ಮತ್ತು ಆಕಾಂಕ್ಷಿಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಕೊನೆಗೆ ಸಚಿವರು ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸುತ್ತಿದ್ದ ವೇಳೆ ಆಕಾಂಕ್ಷಿಗಳು ಅವರ ಭೇಟಿಗೆ ಪಟ್ಟು ಹಿಡಿದರು. ಆಕಾಂಕ್ಷಿಗಳ ಒತ್ತಡಕ್ಕೆ ಮಣಿದು ಕೊನೆಗೆ ಐದಾರು ಮಂದಿಗೆ ಮಾತ್ರ ಪೊಲೀಸರು ಭೇಟಿಗೆ ಅವಕಾಶಕೊಟ್ಟರು. ಅದರಂತೆ ಸಚಿವರ ಬಳಿ ಹೋದ ಆಕಾಂಕ್ಷಿಗಳು ನೇರವಾಗಿ ಸಚಿವರ ಕಾಲಿಗೆ ಬಿದ್ದು ಕಣ್ಣೀರು ಹಾಕಿ ಅಳಲು ತೋಡಿಕೊಂಡರು. ಈ ವೇಳೆ ವಯೋಮಿತಿ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಸರ್ಕಾರ ಮಟ್ಟದಲ್ಲಿ ಚಿಂತನೆ ನಡೆಸುತ್ತಿರುವುದಾಗಿ ಸಚಿವರು ತಿಳಿಸಿದರು.
ಕಪಾಳ ಮೋಕ್ಷ: ಇದಕ್ಕೂ ಮೊದಲು ಗೃಹ ಸಚಿವರ ಎದುರು ತಮ್ಮ ಅಳಲು ತೊಡಿಕೊಳ್ಳಲು ಬಂದ ಅಕಾಂಕ್ಷಿಯೊಬ್ಬರಿಗೆ ಸ್ಥಳದಲ್ಲಿದ್ದ ಡಿವೈಎಸ್ಪಿ ಶ್ರೀನಿವಾಸ್ ಕಪಾಳಮೋಕ್ಷ ಮಾಡಿದ ಘಟನೆ ನಡೆಯಿತು.
ಸರ್ಕಾರಿ ಸವಲತ್ತು ವಂಚಿಸುವವರ ಬಹಿಷ್ಕರಿಸಿ: ಜ್ಞಾನೇಂದ್ರ
ಪೊಲೀಸ್ ನೇಮಕಾತಿ ವಯೋಮಿತಿ ಹೆಚ್ಚಳದ ಬಗ್ಗೆ ಚಿಂತನೆ ನಡೆದಿದೆ. ಜತೆಗೆ ನೇಮಕಾತಿಗೆ ಅರ್ಜಿ ಸಲ್ಲಿಸುವ ಅವಧಿಯನ್ನೂ ಇನ್ನೊಂದು ತಿಂಗಳ ಕಾಲ ವಿಸ್ತರಣೆ ಮಾಡಲಾಗಿದೆ. ಮಿಲಿಟರಿ ಮತ್ತು ಪೊಲೀಸ್ ನೇಮಕಾತಿಗೆ ಅಭ್ಯರ್ಥಿಗಳು ದೈಹಿಕವಾಗಿ ಸಮರ್ಥರಾಗಿರಬೇಕು. ಚಿಕ್ಕವಯಸ್ಸಿನಲ್ಲೇ ನೇಮಕಗೊಂಡರೆ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂಬುದಷ್ಟೇ ಮಾನದಂಡ. ಹಾಗಾಗಿ ವಯೋಮಿತಿ ಹೆಚ್ಚಳ ಸಂಬಂಧ ಇರುವ ಕೊಂಚ ಕಾನೂನು ತೊಡಕುಗಳ ಬಗ್ಗೆಯೂ ಗಮನ ಹರಿಸಲಾಗುತ್ತಿದೆ.
-ಆರಗ ಜ್ಞಾನೇಂದ್ರ, ಗೃಹ ಸಚಿವ