ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಆ.21) : ಸರ್ಕಾರದಿಂದಾಗುತ್ತಿರುವ ಕಾಮಗಾರಿ ಕಳಪೆಯಾಗಿದೆ ಅಂತ ಸಾರ್ವಜನಿಕರು ಹೋರಾಟ ಮಾಡೋದು ಹೊಸದೇನಲ್ಲ. ಆದ್ರೆ ಇಲ್ಲೊಂದು ಊರಲ್ಲಿ ಹಳೆಯ ಚೆಕ್ ಡ್ಯಾಂ(Check dam)ಗಳಿಗೆ ಸುಣ್ಣಬಣ್ಣ ಬಳಿದು ಕೋಟ್ಯಂತರ ರೂಪಾಯಿ ಹಣ ಗುಳುಂ ಮಾಡಿದ್ದಾರೆಂಬ ಆರೋಪ ಕ್ಷೇತ್ರದ ಶಾಸಕರಿಂದಲೇ ಕೇಳಿ ಬಂದಿದೆ. ಅಷ್ಟಕ್ಕೂ ಆ ಶಾಸಕ ಯಾರು, ಈ ಅವಾಂತರ ಆಗಿರೋದಾದ್ರು ಎಲ್ಲಿ ಅಂತಾ ಗೊತ್ತಾ?
Chitradurga; ಆಶ್ರಯ ಮನೆ ಯೋಜನೆಯಲ್ಲಿ ಗೋಲ್ ಮಾಲ್, ಕವಾಡಿಗರ ಹಟ್ಟಿಯಲ್ಲಿ ಪ್ರತಿಭಟನೆ
ನೋಡಿ ಹೀಗೆ ಕಾಣ್ತಿರೊ ಹಳೆಯ ಚೆಕ್ ಡ್ಯಾಂಗೆ ಬಾಗಿಲು ಹಾಕಿರೋ ಗ್ರಾಮ ಪಂಚಾಯ್ತಿ ಕಾರ್ಯಾಲಯ. ಈ ದೃಶ್ಯಗಳು ಕಂಡು ಬಂದಿದ್ದು, ಚಿತ್ರದುರ್ಗ(Chitradurga) ತಾಲ್ಲೂಕಿನ ಇಂಗಳದಾಳ್(Ingaladala) ಗ್ರಾಮ ಪಂಚಾಯ್ತಿ ಬಳಿ. ಹೌದು, ಈ ಗ್ರಾಮದ ಪಂಚಾಯತಿ ವ್ಯಾಪ್ತಿಯಲ್ಲಿ, ಗುಡ್ಡದ ಮೇಲೆ ನಿಂದ ಅನಗತ್ಯವಾಗಿ ನೀರು ಹರಿದು ಪೋಲಾಗ್ತಿತ್ತು. ಹೀಗಾಗಿ ಆ ನೀರನ್ನು ನಿಲ್ಲಿಸಿದ್ರೆ, ರೈತರ ಕೊಳವೆ ಬಾವಿಗಳ ಅಂತರ್ಜಲ ಹೆಚ್ಚಳವಾಗುವುದೆಂಬ ನಿಟ್ಟಿನಲ್ಲಿ ಯೋಚಿಸಿದ್ದ , ಚಿತ್ರದುರ್ಗ ಕ್ಷೇತ್ರದ ಹಿರಿಯ ಬಿಜೆಪಿ ಶಾಸಕ ತಿಪ್ಪಾರೆಡ್ಡಿ(BJP Leader Tippareddy) ಅವರ ಅನುದಾನ ಹಾಗು ವಿವಿಧ ಯೋಜನೆಗಳ ಅಡಿಯಲ್ಲಿ ಸರ್ಕಾರದಿಂದ ಕೋಟ್ಯಂತರ ರೂಪಾಯಿ ಹಣ ತಂದು, ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆಯೇ ಚೆಕ್ ಡ್ಯಾಂ ನಿರ್ಮಾಣ ಮಾಡಿಸಿದ್ರು. ಹೀಗಾಗಿ ಈ ಭಾಗದಲ್ಲಿ ಅಂತರ್ಜಲ ಮಟ್ಟ ಸಹ ಹೆಚ್ಚಾಗಿದ್ದೂ, ರೈತರ ಮೊಗದಲ್ಲಿ ಸಂತಸ ಮನೆ ಮಾಡಿದೆ. ಆದ್ರೆ ಸುಮಾರು ವರ್ಷ ಹಳೆಯದಾದ ಚೆಕ್ ಡ್ಯಾಂಗಳನ್ನು ಗಮನಿಸಿದ ಇಂಗಳದಾಳ್ ಗ್ರಾಮ ಪಂಚಾಯ್ತಿ ಪಿಡಿಓ ಅಸ್ಮಾ(PDO Asmaa) ಹಾಗು ಪಂಚಾಯ್ತಿಯ ಕೆಲ ಸದಸ್ಯರು ಶಾಮೀಲಾಗಿ, ಹಳೆಯ ಚೆಕ್ ಡ್ಯಾಂಗಳನ್ನು ಸ್ವಲ್ಪ ರಿಪೇರಿ ಮಾಡಿಸಿ, ಪಂಚಾಯ್ತಿಗೆ ವಿವಿಧ ಯೋಜನೆಗಳ ಅಡಿಯಲ್ಲಿ ಸರ್ಕಾರದಿಂದ ಬಂದಿದ್ದ 7 ಕೋಟಿಗೂ ಅಧಿಕ ಹಣವನ್ನು ನುಂಗಿ ಹಾಕಿದ್ದಾರೆಂದು ಶಾಸಕ ತಿಪ್ಪಾರೆಡ್ಡಿ ಗಂಭೀರವಾಗಿ ಆರೋಪಿಸಿದ್ದಾರೆ. ಅಲ್ದೇ ಈ ಪ್ರಕರಣ ಕುರಿತು ಮೇಲಾಧಿಕಾರಿಗಳ ಸಮಿತಿಯೊಂದಿಗೆ ತನಿಖೆ ನಡೆಸಬೇಕು, ಇಲ್ಲವಾದ್ರೆ ಲೋಕಾಯುಕ್ತಗೆ ಪ್ರಕರಣವನ್ನು ತನಿಖೆ ನಡೆಸುವಂತೆ ಸೂಚಿಸುತ್ತೇವೆಂದು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಇನ್ನು ಈ ಬಗ್ಗೆ ಗ್ರಾಮ ಪಂಚಾಯ್ತಿ ಪಿಡಿಓ ಅಥವಾ ಸದಸ್ಯರನ್ನು ಕೇಳೋಣ ಅಂದ್ರೆ ಗ್ರಾಮ ಪಂಚಾಯತಿಯತ್ತ ಯಾರೊಬ್ರೂ ಸುಳಿದಿಲ್ಲ. ಜೊತೆಗೆ ಪಿಡಿಓ ಆಸ್ಮಾ ಕೂಡ ಬೇರೆಡೆ ವರ್ಗಾವಣೆಗೊಂಡಿದ್ದು ಕೈಗೆ ಸಿಗೋದೆ ಕಷ್ಟವಾಗಿದೆ. ಹೀಗಾಗಿ ಜಿಲ್ಲಾ ಪಂಚಾಯ್ತಿ ಸಿಇಓ ನಂದಿನಿದೇವಿ(Nandinidevi)ಯವರನ್ನು ಕೇಳಿದಾಗ, ಈ ಅಕ್ರಮದ ವಿಚಾರ ತಾಲ್ಲೂಕು ಪಂಚಾಯತಿ ಕೆಡಿಪಿ(KDP) ಸಭೆಯಲ್ಲಿ ಪ್ರತಿಧ್ವನಿಸಿದಾಗ ನನ್ನ ಗಮನ ಕ್ಕೆ ಬಂದಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಲು ಮೇಲಾಧಿಕಾರಿಗಳ ಸಮಿತಿ ರಚಿಸ್ತಿವಿ. ಪ್ರಕರಣದ ಬಗ್ಗೆ ತನಿಖೆ ನಡೆದ ಬಳಿಕ ತಪ್ಪಿತಸ್ತರ ವಿರುದ್ಧ ಅಗತ್ಯ ಕ್ರಮ ಕೈಗೊಳ್ತಿವೆಂದು ಭರವಸೆ ನೀಡಿದ್ದಾರೆ.
Chitradurga: ವಿದ್ಯಾರ್ಥಿಗಳ ಅಧ್ಯಯನ ಕಟ್ಟಡ ಕಾಮಗಾರಿಯಲ್ಲಿ ಗೋಲ್ ಮಾಲ್
ಒಟ್ಟಾರೆ ಇಂಗಳದಾಳ್ ಗ್ರಾಮ ಪಂಚಾಯ್ತಿಯಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ಹೀಗಾಗಿ ಶಾಸಕರ ಆರೋಪವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ತ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರ ವಿರುದ್ಧ ಕಠಿಣ ಕ್ರಮ ಕೈಗೊಂಡು ಮುಂದಾಗುವ ಅಕ್ರಮಕ್ಕೆ ಬ್ರೇಕ್ ಹಾಕಬೇಕಿದೆ.