ಡಿಸೆಂಬರ್ 9ರಂದು ಸಂಚಾರಿ ವಾಹನಗಳ ಮಾರ್ಗಬದಲಾವಣೆ ಮಾಡಿ ಡಿ.ಸಿ ವೆಂಕಟೇಶ್ ಆದೇಶ ನೀಡಿದ್ದಾರೆ. ಕೆ. ಆರ್. ಪೇಟೆ ಉಪಚುನಾವಣೆ ಫಲಿ ಡಿ.9ರಂದು ಹೊರಬೀಳಲಿದ್ದು, ಏಣಿಕೆ ದಿನದಂದು ಕ್ಷೇತ್ರದಾದ್ಯಂತ 144ಸೆಕ್ಷನ್ ಜಾರಿ ಮಾಡಲಾಗಿದೆ.
ಮಂಡ್ಯ(ಡಿ.08): ಉಪಚುನಾವಣೆ ಫಲಿತಾಂಶ ಡಿಸೆಂಬರ್ 9ರಂದು ಹೊರಬೀಳಲಿದ್ದು, ಮತಎಣಿಕೆಗೆ ಕ್ಷಣ ಗಣನೆ ಆರಂಭವಾಗಿದೆ. ಕೆ. ಆರ್. ಪೇಟೆ ಉಪಚುನಾವಣೆ ಫಲಿ ಡಿ.9ರಂದು ಹೊರಬೀಳಲಿದ್ದು, ಏಣಿಕೆ ದಿನದಂದು ಕ್ಷೇತ್ರದಾದ್ಯಂತ 144ಸೆಕ್ಷನ್ ಜಾರಿ ಮಾಡಲಾಗಿದೆ.
ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ವೆಂಕಟೇಶ್ ಆದೇಶ ನೀಡಿದ್ದಾರೆ. ಡಿ.9ರ ಬೆಳಿಗ್ಗೆ 6ಗಂಟೆಯಿಂದ 10ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಫಲಿತಾಂಶದ ಬಳಿಕ ವಿಜಯೋತ್ಸವ,ಮೆರವಣಿಗೆ, ಸಂಭ್ರಮಾಚರಣೆಯನ್ನು ನಿಷೇಧಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಜಿಲ್ಲಾಧಿಕಾರಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ಅತ್ತಿಗೆಯನ್ನೇ ಭೀಕರವಾಗಿ ಕೊಂದಾಕಿದ ಬಾವ, ಮೈದುನ: ಕಾರಣ..?
ಡಿಸೆಂಬರ್ 9ರಂದು ಸಂಚಾರಿ ವಾಹನಗಳ ಮಾರ್ಗಬದಲಾವಣೆ ಮಾಡಿ ಡಿ.ಸಿ ವೆಂಕಟೇಶ್ ಆದೇಶ ನೀಡಿದ್ದಾರೆ. ಡಿ.9ರಂದು ಕೆ. ಆರ್. ಪೇಟೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯುವ ಮತ ಏಣಿಕೆ ನಡೆಯಲಿದೆ.
ಈ ವೇಳೆ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರುಗಳು ಸಹಸ್ರಾರು ಸಂಖ್ಯೆಯಲ್ಲಿ ಜಮಾವಣೆಗೊಳ್ಳುವ ಸಾಧ್ಯತೆ ಇದೆ. ಇದರಿಂದ ಸಾರ್ವಜನಿಕರ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುವುದರಿಂದ ಡಿ.9ರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕೆ.ಆರ್.ಪೇಟೆ ಪಟ್ಟಣ ವ್ಯಾಪ್ತಿಯ ಮೈಸೂರು ಚನ್ನರಾಯಪಟ್ಟಣ ರಸ್ತೆ ಮಾರ್ಗವಾಗಿ ಸಂಚರಿಸುವ ಎಲ್ಲಾ ತರಹದ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ಗೆಲುವಿನ ಲೆಕ್ಕಾಚಾರದಲ್ಲಿ ಅಭ್ಯರ್ಥಿಗಳು : KR ಪೇಟೆ ಕಿಂಗ್ ಯಾರು?
ಕೆ.ಆರ್.ಪೇಟೆ ಪಟ್ಟಣದಲ್ಲಿ ಮೈಸೂರು ಕಡೆಯಿಂದ ಚನ್ನರಾಯಪಟ್ಟಣ ಕಡೆಗೆ ಸಂಚರಿಸುವ ವಾಹನಗಳನ್ನು ಹೊಸ ಕಿಕ್ಕೇರಿ ರಸ್ತೆಯಲ್ಲಿ ಚಲಿಸುವಂತೆ, ಚನ್ನರಾಯಪಟ್ಟಣ ಕಡೆಯಿಂದ ಮೈಸೂರು ಕಡೆಗೆ ಸಂಚರಿಸುವ ವಾಹನಗಳನ್ನು ಹಳೆ ಕಿಕ್ಕೇರಿ ರಸ್ತೆಯಲ್ಲಿ ಸಂಚರಿಸಿಸುವಂತೆ, ಟಿ.ಬಿ ಸರ್ಕಲ್‍ನಿಂದ ಹೊಸ ಕಿಕ್ಕೇರಿ ರಸ್ತೆಯವರೆಗೆ ಮೈಸೂರು ಚನ್ನರಾಯಪಟ್ಟಣ ವಾಹನಗಳಿಗೆ ಪ್ರವೇಶವನ್ನು ನಿರ್ಬಂಧಿಸಿ ಮಂಡ್ಯ ಜಿಲ್ಲಾಧಿಕಾರಿ ಎಂ.ವಿ ವೆಂಕಟೇಶ್ ಆದೇಶ ಹೊರಡಿಸಿದ್ದಾರೆ.
ಬೈ ಎಲೆಕ್ಷನ್: ಕಾರು, ಬೈಕ್, ಕುರಿ, ಕೋಳಿ ಸೇರಿ ಲಕ್ಷ ಲಕ್ಷ ಬೆಟ್ಟಿಂಗ್..!