ಚಂದ್ರಗುತ್ತಿಯಲ್ಲಿ ಬೆತ್ತಲೆ ಸೇವೆ : ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ

By Kannadaprabha NewsFirst Published Mar 1, 2020, 1:16 PM IST
Highlights

ಸೊರಬ ತಾಲೂಕು ಚಂದ್ರಗುತ್ತಿ ಗ್ರಾಮದ ಶ್ರೀ ರೇಣುಕಮ್ಮ ದೇವೆ ಜಾತ್ರೆಯು ಮಾ. 1 ರಿಂದ 9 ರವರೆಗೆ ನಡೆಯಲಿದೆ. 

ಶಿವಮೊಗ್ಗ [ಮಾ.01]: ಜಿಲ್ಲೆಯ ಸೊರಬ ತಾಲೂಕು ಚಂದ್ರಗುತ್ತಿ ಗ್ರಾಮದ ಶ್ರೀ ರೇಣುಕಮ್ಮ ದೇವೆ ಜಾತ್ರೆಯು ಮಾ. 1 ರಿಂದ 9 ರವರೆಗೆ ನಡೆಯಲಿದ್ದು, ಚಂದ್ರಗುತ್ತಿ ಗ್ರಾಮ ಹಾಗೂ ಅದರ ಸುತ್ತಮುತ್ತಲಿನ 5 ಕಿ ಮೀ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌ ಅಧಿಸೂಚನೆ ಹೊರಡಿಸಿದ್ದಾರೆ.

ಹಾಗೂ ಜಾತ್ರಾ ಮಹೋತ್ಸವದಲ್ಲಿ ಸಮೀಪದ ವರದಾ ಹೊಳೆಯಲ್ಲಿ ಧಾರ್ಮಿಕ ಸ್ನಾನ ಮಾಡುವುದು, ಚೌಲ ಮಾಡಿಸುವುದು, ಕಿವಿ ಚುಚ್ಚುವುದು, ಪಡ್ಲಿಗೆ ಮತ್ತು ಬೆತ್ತಲೆ ಸೇವೆಯನ್ನು ನಿಷೇಧಿಸಿ ಆದೇಶ ಹೊರಡಿಸಿದೆ.

60 ಸಾವಿರ ತಲುಪಿದ ಅಡಕೆ ದರ : ಬೆಳೆಗಾರರು ಖುಷ್...

ಈ ನಿಷೇಧಾಜ್ಞೆಯು ಶ್ರೀ ರೇಣುಕಮ್ಮ ದೇವಿಯ ರಥೋತ್ಸವ ಹಾಗೂ ಇತರೆ ಪೂಜಾ ವಿಧಿ-ವಿಧಾನಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

click me!