ನಾನೂ ಕೂಡ ಒರಿಜಿನಲ್ ಕನ್ನಡಿಗ: ಸಚಿವ ನಾರಾಯಣ ಗೌಡ

Suvarna News   | Asianet News
Published : Mar 01, 2020, 01:01 PM IST
ನಾನೂ ಕೂಡ ಒರಿಜಿನಲ್ ಕನ್ನಡಿಗ: ಸಚಿವ ನಾರಾಯಣ ಗೌಡ

ಸಾರಾಂಶ

ನಾನೂ ಕೂಡ ಒರಿಜಿನಲ್ ಕನ್ನಡಿಗ ಎಂದು ತೋಟಗಾರಿಕೆ ಸಚಿವ ಕೆ. ಸಿ. ನಾರಾಯಣ ಗೌಡ ಹೇಳಿದ್ದಾರೆ. ಮಹಾರಾಷ್ಟ್ರಕ್ಕೆ ಜೈ’ ಎಂದ ಅವರ ಹೇಳಿಕೆ ಬಗ್ಗೆ ಮಂಡ್ಯದಲ್ಲಿ ಸ್ಪಷ್ಟನೆ ನೀಡಿದ್ದಾರೆ.  

ಮಂಡ್ಯ(ಮಾ.01): ನಾನೂ ಕೂಡ ಒರಿಜಿನಲ್ ಕನ್ನಡಿಗ ಎಂದು ತೋಟಗಾರಿಕೆ ಸಚಿವ ಕೆ. ಸಿ. ನಾರಾಯಣ ಗೌಡ ಹೇಳಿದ್ದಾರೆ. ಮಹಾರಾಷ್ಟ್ರಕ್ಕೆ ಜೈ’ ಎಂದ ಅವರ ಹೇಳಿಕೆ ಬಗ್ಗೆ ಮಂಡ್ಯದಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಸಚಿವ ನಾರಾಯಣಗೌಡ ಮಹಾರಾಷ್ಟ್ರಕ್ಕೆ  ಜೈ ಅಂದ ವಿಚಾರವಾಗಿ ಮಳವಳ್ಳಿಯಲ್ಲಿ ಶನಿವಾರ ರಾತ್ರಿ ಮತ್ತೊಂದು ಸ್ಪಷ್ಟನೆ ಕೊಟ್ಟಿದ್ದಾರೆ. ಅವತ್ತಿನ ಆ ಕಾರ್ಯಕ್ರಮಕ್ಕೆ 17 ರಾಜ್ಯದ ವಿದ್ಯಾರ್ಥಿಗಳು ಬಂದಿದ್ದರು. ಅಲ್ಲಿ ಬೇರೆಬೇರೆ ರಾಜ್ಯಕ್ಕೆ ಹೊಗಳಿದ್ದನ್ನ ತೋರಿಸಿಲ್ಲ. ಅಲ್ಲಿಮಹಾರಾಷ್ಟ್ರಕ್ಕೆ ಜೈ ಅಂದಿದ್ದನ್ನು ಮಾತ್ರ ತೋರಿಸಿದ್ದಾರೆ ಎಂದಿದ್ದಾರೆ.

ಹೊಟ್ಟೆ, ಬಟ್ಟೆಗಾಗಿ ಹೋದ ನನಗೆ ಮಹಾರಾಷ್ಟ್ರ ಅನ್ನ ಕೊಟ್ಟಿದೆ: ನಾರಾಯಣಗೌಡ

ಅವತ್ತು ಶಿವಾಜಿ ಜಯಂತಿ ಇತ್ತು. ಆಗಾಗಿ ಶಿವಾಜಿ ಬಗ್ಗೆ ಗೌರವದಿಂದ ಮಹಾರಾಷ್ಟ್ರಕ್ಕೆ ಜೈ ಅಂದಿದ್ದೀನಿ. ಅವತ್ತು ಕರ್ನಾಟಕ್ಕೆ ಹಲವು ಬಾರಿ ಜೈಕಾರ ಹಾಕಿದ್ದೀನಿ ಅದನ್ನ ಯಾರು ತೋರಿಸಿಲ್ಲ. ಒಂದು ವೇಳೆ ಆ ರೀತಿ ಏನಾದ್ರು ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ ಎಂದು ಹೇಳಿದ್ದಾರೆ.

ಕೆ.ಆರ್‌. ಪೇಟೆಯಲ್ಲಿ ದೇವೇಗೌಡ್ರುರ ಪ್ರತಿಭಟನೆ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅವರು ಪ್ರತಿಭಟನೆ ಮಾಡಲಿ, ಸಂತೋಷ ಎಂದು ಹೇಳಿದ್ದಾರೆ. ನಾರಾಯಣ ಗೌಡರು ಮಹಾರಾಷ್ಟ್ರಕ್ಕೆ ಜೈ ಎಂದು ಹೇಳಿದ ಬಗ್ಗೆ ತೀವ್‌ರ ಟೀಕೆ ವ್ಯಕ್ತವಾಗಿತ್ತು.

PREV
click me!

Recommended Stories

ಪ್ರಧಾನಿಗೆ ಪತ್ರ ಬರೆಯುವುದರಲ್ಲಿ ಸಿದ್ದರಾಮಯ್ಯ, ಡಿಕೆಶಿ ನಿಸ್ಸೀಮರು: ಬಿ.ವೈ.ವಿಜಯೇಂದ್ರ
ಕುಡುಕರ ಲಿವರ್‌ ಚಿಕಿತ್ಸೆಗೆ ಹಣ ಕೇಳಿದ ಶಾಸಕರು: ಪರಿಷತ್‌ನಲ್ಲಿ ಸ್ವಾರಸ್ಯಕರ ಚರ್ಚೆ