ತುಂತುರುವಿನಿಂದ ಸಾಧಾರಣ ಮಳೆ ಬರುವ ಸಾಧ್ಯತೆ : ಹವಾಮಾನ ಇಲಾಖೆ

By Kannadaprabha NewsFirst Published Nov 4, 2023, 10:34 AM IST
Highlights

ಭಾರತೀಯ ಹವಾಮಾನ ಇಲಾಖೆಯ ಈ ವಾರದ ಮುನ್ಸೂಚನೆ ಮೈಸೂರು ಜಿಲ್ಲೆಯಲ್ಲಿ ನ.4 ರಿಂದ 8 ರವರೆಗೆ ಮೋಡ ಕವಿದ ವಾತಾವರಣವಿದ್ದು, ತುಂತುರುವಿನಿಂದ ಸಾಧಾರಣ ಮಳೆ ಬರುವ ಸಂಭವವಿದೆ ಎಂದು ನಾಗನಹಳ್ಳಿಯ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

 ಮೈಸೂರು :  ಭಾರತೀಯ ಹವಾಮಾನ ಇಲಾಖೆಯ ಈ ವಾರದ ಮುನ್ಸೂಚನೆ ಮೈಸೂರು ಜಿಲ್ಲೆಯಲ್ಲಿ ನ.4 ರಿಂದ 8 ರವರೆಗೆ ಮೋಡ ಕವಿದ ವಾತಾವರಣವಿದ್ದು, ತುಂತುರುವಿನಿಂದ ಸಾಧಾರಣ ಮಳೆ ಬರುವ ಸಂಭವವಿದೆ ಎಂದು ನಾಗನಹಳ್ಳಿಯ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಪಶು ಸಂಗೋಪನೆಯಲ್ಲಿ ಸಲಹೆಗಳು- ಪಶು ಆಹಾರ ಮತ್ತು ಮೇವುಗಳ ಪ್ರಮಾಣ ನಿತ್ಯ ಆಹಾರದಲ್ಲಿ ಸಮ ಪ್ರಮಾಣದಲ್ಲಿ ಇರಬೇಕು. ದಿನನಿತ್ಯ ನೀಡುವ ಆಹಾರ (ಹಿಂಡಿ- ಬೂಸ ಮಿಶ್ರಣ) ಪ್ರಮಾಣ ಹೆಚ್ಚಾಗಿ, ನಾರಿನಾಂಶ ಕಡಿಮೆಯಾದರೆ ಹಾಲಿನಲ್ಲಿ ಕೊಬ್ಬಿನಾಂಶ ಕಡಿಮೆಯಾಗುತ್ತದೆ. ಸಮತೋಲಿತ ಪಶು ಆಹಾರ ತಯಾರಿಸಿ 3- 4 ಸಮಭಾಗ ಮಾಡಿ ದಿನಕ್ಕೆ ನಾಲ್ಕು ಬಾರಿ ತಿನ್ನಿಸಬೇಕು.

ಕರುಗಳಿಗೆ ಪ್ರತಿ ಆರು ತಿಂಗಳಿಗೊಮ್ಮೆ ಜಂತು ನಾಶಕ ಔಷಧಿಯನ್ನು ನೀಡಬೇಕು. 6 ತಿಂಗಳ ನಂತರ ಹೆಣ್ಣು ಕರುಗಳಿಗೆ ಒಣ ಹುಲ್ಲು (2- 3 ಕೆ.ಜಿ), ಹಸಿರು ಹುಲ್ಲು (3- 4 ಕೆ.ಜಿ), ಪಶು ಆಹಾರ (2.5 ಕೆ.ಜಿ) ಕೊಡಬೇಕು. ಬಂಜೆತನ ಹಾಗೂ ಬರಡು ರಾಸುಗಳ ನಿರ್ವಹಣೆಗಾಗಿ ಜಾನುವಾರುಗಳ ತಪಾಸಣೆ ಮಾಡಿಸಬೇಕು. ವೈಜ್ಞಾನಿಕವಾಗಿ ಮೇವನ್ನು ನಿರ್ವಹಿಸುವುದರಿಂದ, ಮೇವಿನ ಕೊರತೆಯನ್ನು ನೀಗಿಸಬಹುದು. ಹೈನು ರಾಸುಗಳಿಗೆ ಕಡ್ಡಾಯವಾಗಿ ರೋಗ ನಿರೋಧಕ ಲಸಿಕೆಗಳನ್ನು ಹಾಕಿಸಬೇಕು ಎಂದು ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಸಿ. ರಾಮಚಂದ್ರ, ಸಹ ಸಂಶೋಧಕ ಡಾ.ಜಿ.ವಿ. ಸುಮಂತ್ ಕುಮಾರ್ ಸಲಹೆ ನೀಡಿದ್ದಾರೆ.

ದಶಕದ ಬಳಿಕ ದಾಖಲೆ ಚಳಿ

ಬೆಂಗಳೂರು (ಅ.25): ರಾಜ್ಯದ ಉದ್ಯಾನ ನಗರಿ ಬೆಂಗಳೂರಿನಲ್ಲಿ ಕಳೆದ 10 ವರ್ಷಗಳ ಬಳಿಕ ಅಕ್ಟೋಬರ್‌ 24ರಂದು ಅತ್ಯಂತ ಹೆಚ್ಚಿನ ಚಳಿಯ ವಾತಾವರಣ ನಿರ್ಮಾಣವಾಗಿದೆ. ಕಳೆದ 2013ರಲ್ಲಿ ದಾಖಲಾಗಿದ್ದ ಚಳಿಯ ವಾತಾವರಣದ ಮಾದರಿಯಲ್ಲಿಯೇ ಈ ವರ್ಷವೂ ಹೆಚ್ಚಿನ ಚಳಿಯ ವಾತಾವರಣ ಅಕ್ಟೋಬರ್‌ನಲ್ಲಿಯೇ ಶುರುವಾಗಿದೆ.

ರಾಜ್ಯದಲ್ಲಿ ಈ ವರ್ಷ ಮಳೆಯ ಕೊರತೆ ಎದುರಾಗಿದ್ದು, 216 ತಾಲೂಕುಗಳನ್ನು ಬರಪೀಡಿತವೆಂದು ರಾಜ್ಯ ಸರ್ಕಾರ ಘೋಷಣೆ ಮಾಡಲಾಗಿದೆ. ಇನ್ನು ರಾಜ್ಯದಲ್ಲಿನ ಬಹುತೇಕ ಜಲಾಶಯಗಳು ಕೂಡ ಭರ್ತಿಯಾಗಿಲ್ಲ. ಹೀಗಿರುವಾಗ ಹಿಂಗಾರು ಮಳೆಯ ಅವಧಿಯಲ್ಲಿಯೇ ಚಳಿಗಾಲ ಶುರುವಾದಂತೆ ಕಾಣುತ್ತಿವೆ. ಮಳೆಗಾಲವೇ ಮುಗಿಯದಿದ್ದರೂ ಬೆಂಗಳೂರಿನಲ್ಲಿ ಸಂಜೆಯಾಗುತ್ತಿದ್ದಂತೆ ಚಳಿಯ ಅನುಭವ ಉಂಟಾಗುತ್ತಿದೆ. ರಾತ್ರಿ ಸಂಚಾರದ ವೇಳೆ ಬೆಂಗಳೂರು: ಈಶಾನ್ಯ ಗಾಳಿ ಆರಂಭ ಆಗಿರುವುದನ್ನು ಹವಾಮಾನ ಇಲಾಖೆ ಅಧಿಕೃತಗೊಳಿಸದಿದ್ದರೂ, ನಗರದಲ್ಲಿ ಚಳಿ ವಾತಾವರಣ ಶುರುವಾಗಿದೆ.

ಹುಲಿ ಉಗುರು ಪೆಂಡೆಂಟ್‌ ಧರಿಸಿದ ನಟ ಜಗ್ಗೇಶ್, ದರ್ಶನ್‌ಗೆ ಅರಣ್ಯ ಇಲಾಖೆ ನೋಟಿಸ್‌: ನಿಖಿಲ್‌ ಕುಮಾರಸ್ವಾಮಿ ಬಚಾವ್‌!

ಹೌದು, ಬೆಂಗಳೂರಿನ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಅಕ್ಟೋಬರ್‌ 24ರ (ಮಂಗಳವಾರ) ಬೆಳಗ್ಗೆ 8.30ರ ಹೊತ್ತಿಗೆ 17.1 ಡಿಗ್ರಿ ಸೆಲ್ಸಿಯಸ್‌ನಲ್ಲಿ ಕನಿಷ್ಠ ತಾಪಮಾನ ದಾಖಲಾಗಿದೆ. ಇದು ಕಳೆದ 10 ವರ್ಷಗಳಲ್ಲಿಯೇ ದಾಖಲಾದ ಅತಿ ಕಡಿಮೆ ಉಷ್ಣಾಂಶವಾಗಿದೆ. ಅಂದರೆ, ಕಳೆದ ಹತ್ತು ವರ್ಷಗಳಲ್ಲಿ ಅಕ್ಟೋಬರ್‌ ತಿಂಗಳಲ್ಲಿ ದಾಖಲಾದ ಅತಿ ಹೆಚ್ಚಿನ ಚಳಿಯಾಗಿದೆ. ಇನ್ನು ಸಾಮಾನ್ಯ ದಿನಗಳಿಗಿಂತ 2 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ಉಳಿದಂತೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 17.2 ಡಿಗ್ರಿ ಸೆಲ್ಸಿಯಸ್‌  ಹಾಗೂ ಹೆಚ್‌ಎಲ್‌ ವಿಮಾನ ನಿಲ್ದಾಣದಲ್ಲಿ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಅಕ್ಟೋಬರ್ 18 ರಂದು ಬೆಳಗ್ಗೆ 18.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇದಾದ ನಂತರ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್‌ ವಾತಾವರಣ ಇರಬೇಕಿತ್ತು. ಆದರೆ, ನಗರದಲ್ಲಿ 17.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿರುವುದು ಆಶ್ಚರ್ಯಕರವಾಗಿದೆ. ಈ ಕುಸಿತಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಇನ್ನು ರಾಜ್ಯಾದ್ಯಂತ ಒಣಹವೆ ಮುಂದುವರಿಯಲಿದ್ದು, ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್‌ ದಾಖಲಾಗುತ್ತಿದೆ. ಮಧ್ಯಾಹ್ನ 3 ಗಂಟೆ ವೇಳೆಗೆ ಅತಿಹೆಚ್ಚಿನ ಉಷ್ಣಾಂಶ ಹಾಗೂ ಬೆಳಗ್ಗೆ 6 ರಿಂದ 8 ಗಂಟೆ ನಡುವೆ ಅತಿ ಕಡಿಮೆ ಉಷ್ಣಾಂಶ ದಾಖಲಾಗುತ್ತಿದೆ.

click me!