ಚಾಮುಂಡೇಶ್ವರಿಗೆ ತಿಂಡಿ ಅಲಂಕಾರ...

Published : Aug 03, 2018, 04:05 PM IST
ಚಾಮುಂಡೇಶ್ವರಿಗೆ ತಿಂಡಿ ಅಲಂಕಾರ...

ಸಾರಾಂಶ

ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ದೇವಾಲಯದ ಮೂರ್ತಿಗೆ ಹೋದ ವರ್ಷ ಲಕ್ಷಾಂತರ ಮೌಲ್ಯದ ನೋಟುಗಳನ್ನು ಬಳಸಿ ಅಲಂಕರಿಸಲಾಗಿತ್ತು. ಈ ವರ್ಷ ಬಗೆ ಬಗೆ ಸಿಹಿ, ಖಾರಗಳಿಂದ ದೇವಿಯನ್ನು ಅಲಂಕರಿಸಿದ್ದು ಭಕ್ತರನ್ನು ಮನಸೂರೆಗೊಂಡಿತ್ತು.

ಶ್ರೀರಂಗಪಟ್ಟಣ: ಚಾಮುಂಡೇಶ್ವರಿ ವರ್ಧಂತಿ ಹಿನ್ನಲೆಯಲ್ಲಿ ಇಲ್ಲಿನ ಚಾಮುಂಡೇಶ್ವರಿ ದೇವಿಗೆ ತಿಂಡಿ-ತಿನಿಸುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. 

ಪಟ್ಟಣದ ಚಾಮುಂಡೇಶ್ವರಿ ರಸ್ತೆಯಲ್ಲಿರುವ ದೇವಾಲಯದಲ್ಲಿ ಚಾಮುಂಡೇಶ್ವರಿ ಮೂರ್ತಿಗೆ ತಿಂಡಿ, ತಿನಿಸುಗಳನ್ನು ಬಳಸಿ ವಿಶೇಷವಾಗಿ ಅಲಂಕರಿಸಲಾಗಿತ್ತು. ಚಕ್ಕುಲಿ, ನಿಪ್ಪಟ್ಟು, ಕೋಡುಬಳೆ, ಕಜ್ಜಾಯ, ಪುರಿ ಉಂಡೆ, ಹೋಳಿಗೆ, ಬಾದಾಮ್ ಪುರಿ ಸೇರಿದಂತೆ ವಿವಿಧ ತಿಂಡಿಗಳನ್ನು ಅಲಂಕಾರಿಸಲು ಬಳಸಲಾಗಿತ್ತು.

ಈ ವಿಶೇಷ ಅಲಂಕಾರಕ್ಕೆ ಭಕ್ತರ ಮೆಚ್ಚುಗೆಗೆ ಪಾತ್ರವಾಯಿತು. ದರ್ಶನಕ್ಕೆ ಭಕ್ತರು ಮುಗಿಬಿದ್ದಿದ್ದರು. ಪ್ರತಿವರ್ಷ ಒಂದಲ್ಲ, ಒಂದು ವಿಶೇಷ ಅಲಂಕಾರದಿಂದ ದೇವಿಯನ್ನು ಈ ಅರ್ಚಕರು ಪೂಜಿಸುತ್ತಿದ್ದಾರೆ. ಕಳೆದ ವರ್ಷ ಲಕ್ಷಾಂತರ ರೂ. ಮೌಲ್ಯದ ನೋಟು ಬಳಸಿ, ದೇವಿಯನ್ನು ಅಲಂಕರಿಸಲಾಗಿತ್ತು.

PREV
click me!

Recommended Stories

ಕುಮಾರಸ್ವಾಮಿಯನ್ನ ಹಾವಾಡಿಗರಿಗೆ, ಡಿಕೆಶಿಯನ್ನ ಪೈಲ್ವಾನ್‌ರಿಗೆ ಹೋಲಿಸಿದ ಕೃಷಿ ಸಚಿವ ನರೇಂದ್ರಸ್ವಾಮಿ! ಹೆಚ್‌ಡಿಕೆಗೆ ಹಾಕಿದ ಸವಾಲೇನು?
ಮಂಡ್ಯದಲ್ಲಿ ಹೃದಯ ವಿದ್ರಾವಕ ಘಟನೆ; ಹೃದಯಾಘಾತಕ್ಕೆ 9ನೇ ತರಗತಿ ಬಾಲಕ ಬಲಿ