ಕೆ.ಆರ್ ಪೇಟೆ ತಹಸೀಲ್ದಾರ್ ಅಪಹರಣ?

Published : Aug 03, 2018, 12:30 PM IST
ಕೆ.ಆರ್ ಪೇಟೆ ತಹಸೀಲ್ದಾರ್ ಅಪಹರಣ?

ಸಾರಾಂಶ

ಕೆ.ಆರ್.ಪೇಟೆಯಿಂದ ಕೆ.ಆರ್.ಪುರದೆಡೆಗೆ ಪಯಣಿಸುತ್ತಿದ್ದ ತಹಸೀಲ್ದಾರ್ ಮಹೇಶ್ ಚಂದ್ರ ಅವರ ಕಾರು ಹಾಗೂ ಚಪ್ಪಲಿ ಪತ್ತೆಯಾಗಿವೆ. ಆದರೆ, ಅವರು ಕಾಣೆಯಾಗಿದ್ದು, ಅಪಹರಣವಾಗಿರುವ ಶಂಕೆ ವ್ಯಕ್ತವಾಗಿದೆ.

ಮಂಡ್ಯ: ಕೆ ಆರ್ ಪೇಟೆ ತಹಸೀಲ್ದಾರ್ ಅಪಹರಣವಾಗಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

ಮಂಡ್ಯ ಜಿಲ್ಲೆಯ, ಕೆಆರ್ ಪೇಟೆ ತಹಸೀಲ್ದಾರ್‌‌ ಮಹೇಶ್ ಚಂದ್ರ ಅವರು ನಾಪತ್ತೆಯಾಗಿದ್ದು, ಅವರ ಕಾರು ಪತ್ತೆಯಾಗಿದೆ. ಮೈಸೂರು ಜಿಲ್ಲೆಯ ಕೆಆರ್ ನಗರ ತಾಲೂಕಿನ ಚಿಕ್ಕವಡ್ಡರಗಡು ಗ್ರಾಮದ ಬಳಿ ಮಾರುತಿ ಒಮಿನಿ ಕಾರು ಹಾಗೂ ಅವರು ಧರಿಸಿದ್ದ ಶೂಗಳು ಪತ್ತೆಯಾಗಿವೆ.

ಮಹೇಶ್ ಚಂದ್ರ ಅವರು ವಾರದ ಹಿಂದೆಯಷ್ಟೇ ಅಧಿಕಾರ ಸ್ವೀಕರಿಸಿದ್ದು, ಕುಟುಂಬ ಕೆ.ಆರ್.ನಗರದಲ್ಲಿ ವಾಸವಾಗಿದೆ. ಗುರುವಾರ ಸಂಜೆ ಕೆ.ಆರ್.ಪೇಟೆಯಿಂದ ಕೆ.ಆರ್.ನಗರಕ್ಕೆ ಪ್ರಯಾಣಿಸುತ್ತಿದ್ದರು. 

ಸಾಲಿಗ್ರಾಮ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

PREV
click me!

Recommended Stories

ರೈತರಿಗೆ ಹೆಣ್ಣು ಸಿಗ್ತಿಲ್ಲ; ಬಾಸಿಂಗ ತೊಟ್ಟು, ತಾಂಬೂಲ ಹಿಡಿದು ಡಿಸಿ ಆಫೀಸಿಗೆ ಹೆಣ್ಣು ಕೇಳಲು ಬಂದ ಯುವಕರು!
ಮೈಸೂರು, ಮಂಡ್ಯದಲ್ಲಿ ಬಾಲ್ಯ ವಿವಾಹಕ್ಕೆ ಗಣನೀಯ ಇಳಿಕೆ, ಸರ್ಕಾರದಿಂದ ಸಿಕ್ಕಿತು ನೆಮ್ಮದಿಯ ಸುದ್ದಿ