'ರೇಷನ್ ಶಾಪ್‌ನಲ್ಲಿ ಈರುಳ್ಳಿ, ಬೆಳ್ಳುಳ್ಳಿಯನ್ನೂ ಕೊಡಿ'..!

By Kannadaprabha News  |  First Published Dec 16, 2019, 11:52 AM IST

ದಿನನಿತ್ಯ ಬಳಕೆಗೆ ಅಗತ್ಯವಾದ ಈರುಳ್ಳಿ, ಬೆಳ್ಳುಳ್ಳಿಯನ್ನು ನ್ಯಾಯಬೆಲೆ ಅಂಗಡಿಯಲ್ಲಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ. ಪ್ರತಿದಿನ ಬಳಸುವ ದಿನಸಿ ಸಾಮಾಮಗ್ರಿಗಳ ಬೆಲೆ ಏರಿಕೆಯಾಗಿರುವುದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದ್ದು, ಸರ್ಕಾರ ರಿಯಾಯಿತಿ ಬೆಲೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿ ನೀಡಬೇಕೆಂದು ಕರ್ನಾಟಕ ನಿಜಧ್ವನಿ ಸೇನಾ ಸಮಿತಿ ಒತ್ತಾಯಿಸಿದೆ.


ಚಾಮರಾಜನಗರ(ಡಿ.16): ಈರುಳ್ಳಿ ಬೆಲೆ ಇಳಿಸುವಂತೆ ಒತ್ತಾಯಿಸಿ ಕರ್ನಾಟಕ ನಿಜಧ್ವನಿ ಸೇನಾ ಸಮಿತಿ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರ ಕೂಡಲೇ ಪಡಿತರ ವಿತರಣೆ ಮಾದರಿಯಲ್ಲಿ ನ್ಯಾಯಬೆಲೆ ಅಂಗಡಿಗಳ ಮೂಲಕ ರಿಯಾಯಿತಿ ದರದಲ್ಲಿ ತೊಗರಿಬೇಳೆ, ಈರುಳ್ಳಿ, ಬೆಳ್ಳುಳ್ಳಿ ವಿತರಿಸಬೇಕು ಎಂದು ಆಗ್ರಹಿಸಿದ್ದಾರೆ.

ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು ಇಳಿಸಿ ಇಳಿಸಿ ಈರುಳ್ಳಿ ಬೆಲೆ ಇಳಿಸಿ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Latest Videos

undefined

ಪಕ್ಷ ಕೇಳಿದ್ರೆ ಸಚಿವ ಸ್ಥಾನದಿಂದ ಇಳಿತೀನಿ ಎಂದ ಸಿಟಿ ರವಿ.

ಈ ಸಂದರ್ಭದಲ್ಲಿ ಪ್ರತಿಭಟನೆ ನೇತೃತ್ವ ವಹಿಸಿದ್ದ ನಿಜಧ್ವನಿ ಸೇನಾ ಸಮಿತಿ ಜಿಲ್ಲಾಧ್ಯಕ್ಷ ಸಿ.ಎನ್‌.ಗೋವಿಂದರಾಜು ಮಾತನಾಡಿ, ಈರುಳ್ಳಿ ಬೆಲೆ ಒಂದು ಕೆ.ಜಿ.ಗೆ 150 ರು., ಬೆಳ್ಳುಳ್ಳಿ ಒಂದು ಕೆಜಿ 200 ರು. ಹುಣಸೆ ಹಣ್ಣು 200 ರು. ಬೆಲೆ ಇದ್ದು ಎಲ್ಲ ದಿನಸಿ ವಸ್ತುಗಳ ಬೆಲೆ ಏರಿಕೆಯಾಗಿದೆ. ಬಡವರ ಜೀವನ ಸಾಗಿಸುವುದೇ ತುಂಬಾ ಕಷ್ಟಕರವಾಗಿದೆ. ಬೆಲೆ ಏರಿಕೆ ನಿಯಂತ್ರಣ ಮಾಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಡವರ ಮೇಲೆ ಕಾಳಜಿ ವಹಿಸುತ್ತಿಲ್ಲ. ಸರ್ಕಾರ ಕೂಡಲೇ ಪಡಿತರ ವಿತರಣೆ ಮಾದರಿಯಲ್ಲಿ ನ್ಯಾಯಬೆಲೆ ಅಂಗಡಿಗಳ ಮೂಲಕ ರಿಯಾಯಿತಿ ದರದಲ್ಲಿ ತೊಗರಿಬೇಳೆ, ಈರುಳ್ಳಿ, ಬೆಳ್ಳುಳ್ಳಿ ವಿತರಿಸಬೇಕು ಎಂದು ಕೇಳಿದ್ದಾರೆ.

'ಝೀರೋ ಟ್ರಾಫಿಕ್‌ನಲ್ಲಿ ಓಡಾಡಿದವ್ನಿಗೆ ಈಗ ನೊಣ ಹೊಡೆಯೋರು ಇಲ್ಲ'..!

ನಮ್ಮ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸದಿದ್ದಲ್ಲಿ ಪ್ರಗತಿಪರ ಸಂಘ-ಸಂಸ್ಥೆಗಳ ಸಹಕಾರದಲ್ಲಿ ರಾಜ್ಯಾದಂತ ಉಗ್ರ ಹೋರಾಟ ರೂಪಿಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆಯಲ್ಲಿ ಕರ್ನಾಟಕ ನಿಜಧ್ವನಿ ಸೇನಾ ಸಮಿತಿ ಗೌರವ ಅಧ್ಯಕ್ಷ ಜಿ.ಎಂ.ಮಹದೇವು, ತಾಲೂಕು ಅಧ್ಯಕ್ಷ ಮರೆಯಾಲದ ಹುಂಡಿ ಕುಮಾರ್‌, ಗೌರವ ಕಾರ್ಯದರ್ಶಿ ಬಂಗಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ವೈ.ಮಹದೇವಸ್ವಾಮಿ, ಖಜಾಂಚಿ ಸಣ್ಣಮಾದಯ್ಯ, ಉಪಾಧ್ಯಕ್ಷ ಎಂ.ಬಿ. ಪ್ರಕಾಶ್‌, ಎನ್‌.ಮಹಾಲಿಂಗೇಶ್‌, ಸಿ.ಮಹೇಶ್‌, ಚಂದ್ರು, ಚಂದ್ರಕುಮಾರ್‌, ಸೋಮ, ಮೂರ್ತಿ, ರಾಜು, ನಾಗೇಂದ್ರಗೌಡ, ಶ್ರೀನಿವಾಸಆಚಾರಿ, ಪುಟ್ಟರಾಜು, ಆರ್‌.ಶಂಕರ್‌, ಶ್ರೀನಿವಾಸಜೆಟ್ಟಪ್ಪ, ಸಿದ್ದಪ್ಪ, ಕಾಳಪ್ಪ, ಸಿದ್ದರಾಜು ಇತರರು ಭಾಗವಹಿಸಿದ್ದರು.

click me!