ವರ್ಷದ ಮೊದಲ ಮಳೆಗೆ ಕಸದಿಂದ ಗಬ್ಬು ನಾರುತ್ತಿದೆ ಗಡಿನಾಡು ಚಾಮರಾಜನಗರ!

By Govindaraj S  |  First Published May 18, 2024, 8:30 PM IST

ಬಿಸಿಲಿನ  ಬೇಗೆಗೆ  ಬಸವಳಿದ  ಗಡಿ  ಜಿಲ್ಲೆಯ  ಜನತೆಗೆ  ವರ್ಷದ  ಮೊದಲ ಮಳೆ ಮಂದಹಾಸ ಮೂಡಿಸಿದೆ. ಕಾದ ಕಾವಲಿಯಂತಿದ್ದ ಇಳೆಗೆ ಮಳೆ ತಂಪೆರೆದ ಖುಷಿಯ ನಡುವೆ ಜನರಿಗೆ ಹೊಸತೊಂದು ತಲೆ ನೋವು ತಂದೊಡ್ಡಿದೆ.


ವರದಿ: ಪುಟ್ಟರಾಜು.ಆರ್. ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ (ಮೇ.18): ಬಿಸಿಲಿನ  ಬೇಗೆಗೆ  ಬಸವಳಿದ  ಗಡಿ  ಜಿಲ್ಲೆಯ  ಜನತೆಗೆ  ವರ್ಷದ  ಮೊದಲ ಮಳೆ ಮಂದಹಾಸ ಮೂಡಿಸಿದೆ. ಕಾದ ಕಾವಲಿಯಂತಿದ್ದ ಇಳೆಗೆ ಮಳೆ ತಂಪೆರೆದ ಖುಷಿಯ ನಡುವೆ ಜನರಿಗೆ ಹೊಸತೊಂದು ತಲೆ ನೋವು ತಂದೊಡ್ಡಿದೆ. ಚಾಮರಾಜನಗರ ಗಾರ್ಬೇಜ್ ಸಿಟಿಯಾಗಿ ಬದಲಾಗಿದೆ. ಈ ಕುರಿತು ಒಂದು ಸ್ಟೋರಿ ನೋಡಿ. ಅಲ್ಲಲ್ಲಿ  ಬಿದ್ದಿರುವ  ಕಸದ ರಾಶಿ ರಸ್ತೆಯ ಅಕ್ಕ ಪಕ್ಕ ಬಿದ್ದಿರುವ ಪ್ಲಾಸ್ಟಿಕ್ ವಸ್ತುಗಳು ನಿಂತ ನೀರಿನಿಂದ  ಬರುತ್ತಿರೊ  ಗಬ್ಬು  ವಾಸನೆ.  ಚಾಮರಾಜನಗರ  ನಗರಸಭೆ  ವಿರುದ್ದ  ಹಿಡಿ ಹಿಡಿ ಶಾಪ ಹಾಕುತ್ತಿರುವ  ಸ್ಥಳೀಯ  ನಿವಾಸಿಗಳು  ಈ ಎಲ್ಲಾ ದೃಶ್ಯ ಕಣ್ಣಿಗೆ ರಾಚಿದ್ದು ಗಡಿ ಜಿಲ್ಲೆ ಚಾಮರಾಜನಗರದಲ್ಲಿ.  

Tap to resize

Latest Videos

undefined

ಹೌದು ಕಳೆದ ವರ್ಷ ಮಳೆ ಬಾರದ ಬರದ ಛಾಯೆ. ಬೆಳೆದ ಬೆಳೆಗೆ ನೀರುಣಿಸಲಾಗದೆ ಹೈರಾಣಾಗಿದ್ದ ರೈತರು ಆದ್ರೆ ಈ ಬಾರಿ ಉತ್ತಮ ಮಳೆಯ ಸುಳಿವು ಸಿಕ್ಕಿದ್ದು ವರ್ಷದ ಮೊದಲ ಮಳೆ ಅಬ್ಬರಿಸಿ ಬೊಬ್ಬೆರಿಯುತ್ತಿದೆ. ಮಳೆ ಬಂತೆಂದು ನಿಟ್ಟುಸಿರು ಬಿಡುವ ಮೊದಲೇ ಮತ್ತೊಂದು ಸಮಸ್ಯೆ ಎದುರಾಗಿದೆ. ಮಳೆಯ ರಭಸಕ್ಕೆ ಕಸದ ರಾಶಿಯೆಲ್ಲಾ ರಸ್ತೆಗೆ ಬಂದು ಬಿದ್ದಿದೆ ಅಲ್ಲಲ್ಲಿ ನೀರು ನಿಂತು ಗಬ್ಬು ವಾಸನೆಯಿಂದ ಅಕ್ಕ ಪಕ್ಕದ ಜನತೆ ಹೈರಾಣಾಗಿ ಹೋಗಿದ್ದಾರೆ. ಚಾಮರಾಜನಗರ ನಗರ ಕೇಂದ್ರವಾಗಿದ್ದರು ಕೂಡ ಅಭಿವೃದ್ಧಿ ಹೊಂದಿಲ್ಲ.ಸಮರ್ಪಕವಾದ ಚರಂಡಿ ಸೇರಿದಂತೆ ರಾಜಕಾಲುವೆಗಳಲ್ಲಿ ಹೂಳು ಎತ್ತದೆ ಇರುವುದರಿಂದ ಮನೆಗಳಿಗೆ ನೀರು ನುಗ್ಗುವ ಸ್ಥಿತಿಯಿದೆ. 

ಅಲ್ಲದೇ ಮಳೆ ಬಂದ್ರೆ ಯಾರೂ ಕೂಡ ಸಂಚಾರ ಮಾಡದ ದುಸ್ಥಿತಿ ಬರುತ್ತೆ, ರಸ್ತೆಯಲ್ಲಿ ಮಳೆಯ ನೀರಿನ ಜೊತೆಗೆ ಪ್ಲಾಸ್ಟಿಕ್ ತುಂಬಿರುತ್ತೆ, ಇದರಿಂದ ಡೆಂಗ್ಯೂ ಸೇರಿದಂತೆ ರೋಗ ರುಜಿನಿಗಳಿಗೆ ಬಲಿಯಾಗುವ ಪರಿಸ್ಥಿತಿ ಬರುತ್ತೆ ಅಂತಾ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ. ಇನ್ನೂ ಪ್ರತಿ ಬಾರಿ ಮಳೆ ಬಂದಾಗಲು ಚೆನ್ನಿಪುರದ ಮೊಳೆ ಹಾಗೂ ಕುಲುಮೆ ರಸ್ತೆಯಲ್ಲಿ ನೀರು ನಿಲ್ಲುತ್ತೆ ರಸ್ತೆಯೆಲ್ಲಾ ಕೆರೆಯಂತಾಗುತ್ತೆ. ಕಸದ ರಾಶಿ ರಸ್ತೆಯ ಮೇಲೆ ಬಂದು ನಿಲ್ಲುತ್ತದೆ. ಹಾವು ಚೇಳುಗಳೆಲ್ಲ ಮನೆ ಒಳ ನುಗ್ಗುತ್ತೆ ನಗರಸಭೆಯ ಎಡವಟ್ಟೇ ಇದಕ್ಕೆಲ್ಲಾ ಕಾರಣವೆಂದು ಸ್ಥಳಿಯರ ಆರೋಪವಾಗಿದೆ. 

Chitradurga: ಕೋಟೆನಾಡಿನ ಬೆಸ್ಕಾಂ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳಿಗೆ ಕರೆಂಟ್ ಶಾಕ್!

ಇನ್ನು ಶಾಲಾ ಕಾಲೇಜ್ ಪಕ್ಕದಲ್ಲೇ ಇರುವ ಕಾರಣ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ಮಕ್ಕಳಿಗೆ ಕಾಲರ ಹಾಗೂ ಡೆಂಗ್ಯೂ ಭಯ ಕೂಡ ಈಗ ಶುರುವಾಗಿದೆ. ಆದ್ರೆ ನಗರ ಸಭೆ ಆಯುಕ್ತ ರಾಮದಾಸ್ ಹೇಳೋದೆ ಬೇರೆ. ಈಗಾಗ್ಲೆ ಪೂರ್ವ ಮುಂಗಾರು ಸಭೆ ನಡೆಸಿದ್ದು ರಾಜ ಕಾಲುವೆ ಹಾಗೂ ಕೆರೆಗಳ ಉಳೆತ್ತಲಾಗಿದೆ. ಮಳೆಗಾಲಕ್ಕೆ ನಗರ ಸಭೆ ಸಕಲ ಸಿದ್ದತೆ ನಡೆಸಲಾಗಿದೆ ಎಂದು ತಿಳಿಸುತ್ತಿದ್ದಾರೆ. ಅದೇನೆ ಹೇಳಿ ಪೂರ್ವ ಮುಂಗಾರು ಮಳೆಯಿಂದ ಸಂತಸ ಪಡುವಷ್ಟರಲ್ಲಿ ಕಸದ ರಾಶಿಯಿಂದ ಗಡಿ ಜಿಲ್ಲೆಯ ಜನತೆ ಪಜೀತಿ ಪಡುವಂತಾಗಿದ್ದು ನಗರ ಸಭೆ ಸೂಕ್ತ ವ್ಯವಸ್ಥೆ ಮಾಡದೆ ಹೋದ್ರೆ ಮುಂಬರುವ ದಿನಗಳಲ್ಲಿ ಜನತೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

click me!