Chamarajanagar: ಅರಣ್ಯ ಇಲಾಖೆಯ ನಿರ್ಲಕ್ಷ್ಯ! ತುಕ್ಕು ಹಿಡಿಯುತ್ತಿರುವ ಬೂದಿಪಡಗ ಆನೆ ಕ್ಯಾಂಪ್

Published : Oct 18, 2026, 10:04 AM IST
elephant camp chamarajanagar

ಸಾರಾಂಶ

ಚಾಮರಾಜನಗರ ಜಿಲ್ಲೆಯ ಬೂದಿಪಡಗ ಆನೆ ಕ್ಯಾಂಪ್ ನಿರ್ಮಾಣಗೊಂಡು ಎರಡು ವರ್ಷ ಕಳೆದರೂ ಇನ್ನೂ ಆರಂಭವಾಗಿಲ್ಲ. ಪಶು ವೈದ್ಯರ ಕೊರತೆ ಹಾಗೂ ಮೂಲಭೂತ ಸೌಕರ್ಯಗಳಿಲ್ಲದ ಕಾರಣ ಅರಣ್ಯ ಇಲಾಖೆ ಮೀನಾಮೇಷ ಎಣಿಸುತ್ತಿದೆ. ಇದರಿಂದ ಕಾಡುಪ್ರಾಣಿ-ಮಾನವ ಸಂಘರ್ಷ ತಡೆಯುವ ಪ್ರಮುಖ ಯೋಜನೆ ನನೆಗುದಿಗೆ ಬಿದ್ದಿದೆ.

ಚಾಮರಾಜನಗರ: ಕರ್ನಾಟಕದಲ್ಲಿ ಅತೀ ಹೆಚ್ಚು ಆನೆಗಳನ್ನು ಹೊಂದಿರುವ ಏಕೈಕ ಜಿಲ್ಲೆ ಅದರೆ ಅದು ಚಾಮರಾಜನಗರ. ಆ ಹಿನ್ನಲೆ ಈ ಭಾಗದಲ್ಲಿ ಕಾಡು ಮಾನವ ಸಂಘರ್ಷ ಕೂಡ ಹೆಚ್ಚೆ ಇದೆ. ಆ ಹಿನ್ನಲೆ ಜಿಲ್ಲೆಯಲ್ಲಿ ಮತ್ತೊಂದು ಆನೆ ಕ್ಯಾಂಪ್ ಆರಂಭಿಸಲು ಎರಡು ವರ್ಷದ ಹಿಂದೆಯೇ ಭರ್ಜರಿ ಸಿದ್ದತೆ ಮುಗಿದಿತ್ತು. ಆನೆ ಬಿಡಾರ ಸ್ಥಾಪನೆಯ ಪ್ರಕ್ರಿಯೆ ಮುಗಿದಿದ್ರೂ ಕೂಡ ಆನೆ ಕ್ಯಾಂಪ್ ಆರಂಭಿಸಲು ಅರಣ್ಯ ಇಲಾಖೆ ಮಾತ್ರ ಮುಂದಾಗ್ತಿಲ್ಲ. ಕ್ಯಾಂಪ್ ಪ್ರಯೋಜನವಿಲ್ಲದೇ ತುಕ್ಕು ಹಿಡಿಯುವ ಹಂತ ತಲುಪ್ತಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ಓದಿ.

ಸಿದ್ಧತೆ ಮುಗಿದು 2 ವರ್ಷವಾದ್ರು ಆರಂಭವಾಗದ ಆನೆ ಕ್ಯಾಂಪ್

ಚಾಮರಾಜನಗರ ತಾಲೂಕಿನ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯದ ಬೂದಿ ಪಡಗ ಆನೆ ಕ್ಯಾಂಪ್ ಕಳೆದ ವರ್ಷ ಜುಲೈ 30 ರಂದು ಪ್ರವಾಸಿಗರಿಗೆ ತೆರೆಯಲಿದೆ ಎಂದು ಸುದ್ದಿಯಾಗಿತ್ತು. ಆದರೆ ಆ ಸುದ್ದಿ ಸುಳ್ಳಾಗಿದ್ದು, ಆನೆ ಬಿಡಾರ ಸಂಪೂರ್ಣವಾಗಿದ್ದರು ಕೂಡ ಆನೆ ಶಿಬಿರ ತೆರೆಯಲು ಮಾತ್ರ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ. ಅತಿ ಹೆಚ್ಚು ಮಾನವ ಹಾಗೂ ಕಾಡು ಪ್ರಾಣಿ ಸಂಘರ್ಷದಿಂದ ಅಪಖ್ಯಾತಿ ಕೂಡ ಚಾಮರಾಜನಗರಕ್ಕೆ ಇದೆ. ಈ ಆನೆ ಕ್ಯಾಂಪ್ ಮಾಡುವುದರಿಂದ ಕಾಡಾನೆ, ಹುಲಿ ನಾಡಿಗೆ ನುಗ್ಗಿದಾಗ ಕ್ಯಾಂಪ್ನಲ್ಲಿರುವ ಆನೆಗಳ ಮೂಲಕ ನಾಡಿಗೆ ಬಂದ ಆನೆಗಳನ್ನು ವಾಪಸ್ ಕಾಡಿಗೆ ಓಡಿಸುವಲ್ಲಿ ಹಾಗೂ ಹುಲಿ ಸೆರೆ ಕಾರ್ಯಾಚರಣೆ ವೇಳೆ ಅನುಕೂಲವಾಗಲಿದೆ. ಇದರ ಜೊತೆಗೆ ಬರುವಂತಹ ಪ್ರವಾಸಿಗರಿಗೆ ಕಾಡು ಪ್ರಾಣಿ ಹಾಗೂ ಆನೆಗಳ ಕುರಿತ ಮಾಹಿತಿ ಸಹ ಲಭ್ಯವಾಗಲಿದೆ.

ಶಿಬಿರಕ್ಕೆ ಪಶು ವೈದ್ಯರ ಕೊರತೆ

ಇನ್ನೂ ಆನೆ ಶಿಬಿರ ತುಕ್ಕು ಹಿಡಿಯುವ ಬಗ್ಗೆ ಪ್ರಶ್ನೆ ಮಾಡಿದರೆ ಕ್ಯಾಂಪ್ ಆರಂಭಿಸಲು ನಮಗೆ ಅನುಮತಿ ಸಿಕ್ಕಿದೆ. ಈಗಾಗಲೇ ಬೇರೆ ಬೇರೆ ಆನೆ ಶಿಬಿರಗಳಿಂದ ನಾಲ್ಕು ಸಾಕಾನೆ ತರುವ ಬಗ್ಗೆ ಪತ್ರ ಕೂಡ ಬರೆಯಲಾಗಿದೆ. ಶಿಬಿರಕ್ಕೆ ಪಶು ವೈದ್ಯರ ಕೊರತೆಯಿದೆ. ಆ ಹಿನ್ನಲೆ ಪಶು ವೈದ್ಯರನ್ನು ನೇಮಿಸಿಕೊಳ್ಳುವ ಬಗ್ಗೆ ಸರ್ಕಾರದ ಗಮನಕ್ಕೆ ಕೂಡ ತರಲಾಗಿದೆ. ಅಲ್ಲದೇ ಒಂದಷ್ಟು ಮೂಲಭೂತ ಸೌಕರ್ಯದ ಕೊರತೆಯಿದೆ. ಆದ್ದರಿಂದ ಶೀಘ್ರ ಆರಂಭಿಸಲು ಕೂಡ ಚಿಂತನೆ ನಡೆಸಲಾಗಿದೆ ಅನ್ನೋ ಹಾರಿಕೆ ಉತ್ತರ ಕೊಡ್ತಿದ್ದಾರೆ ಅರಣ್ಯಾಧಿಕಾರಿಗಳು.

ಒಟ್ಟಾರೆ ಜಿಲ್ಲೆಯಲ್ಲಿ ಪ್ರಸ್ತುತ ಬಂಡೀಪುರದ ರಾಂಪುರದಲ್ಲಷ್ಟೇ ಆನೆ ಶಿಬಿರವಿದೆ. ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ಈ ಬೂದಿಪಡಗ ಆನೆ ಶಿಬಿರ ಹೊಸದಾಗಿ ಘೋಷಿಸಿದ್ದರು. ಸುಮಾರು ನಾಲ್ಕೈದು ವರ್ಷ ಕಳೆದು ಶಿಬಿರ ಕಾಮಗಾರಿ ಪೂರ್ಣಗೊಂಡಿದ್ದರು ಕೂಡ ಇನ್ನು ಪ್ರಾರಂಭವಾಗಿಲ್ಲ, ಇನ್ನಾದರು ಅರಣ್ಯಾಧಿಕಾರಿಗಳು ಆನೆ ಶಿಬಿರ ಆರಂಭಿಸುವ ನಿಟ್ಟಿನಲ್ಲಿ ಶೀಘ್ರ ಕ್ರಮ ವಹಿಸ್ತಾರ ಕಾದು ನೋಡಬೇಕಾಗಿದೆ. (ವರದಿ: ಪುಟ್ಟರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ) 

PREV
Read more Articles on
click me!

Recommended Stories

Bengaluru: ಪ್ರಿಯಕರನಿಗೆ ಕಳಿಸಿದ್ದ ಟೆಕ್ಕಿ ಖಾಸಗಿ ಫೋಟೋ ಅಶ್ಲೀಲ ಸೈಟ್‌ನಲ್ಲಿ ಪ್ರಸಾರ
ಫೋನ್ ಕದ್ದಾಲಿಕೆ, ಸ್ಟಿಂಗ್ ಆಪರೇಷನ್ ಕೈಗೆ ಮಾಮೂಲಿ: ಕಾಂಗ್ರೆಸ್ ವಿರುದ್ಧ BJP ಶಾಸಕ ಚನ್ನಬಸಪ್ಪ ವಾಗ್ದಾಳಿ