ಚಾಮರಾಜನಗರ ಜಿಲ್ಲೆಯ ಕುಂತೂರು ಸಕ್ಕರೆ ಕಾರ್ಖಾನೆ ಸುರಿದು ಹೋದ ಬೆಂಕು ಮಿಶ್ರಿತ ಬೂದಿಯಲ್ಲಿ ಸುಟ್ಟುಕೊಂಡು ರೈತ, ನೋವು ತಾಳಲಾರದೇ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ಚಾಮರಾಜನಗರ (ಫೆ.17): ಸಕ್ಕರೆ ಕಾರ್ಖಾನೆಯು ಸರ್ಕಾರಿ ಗೋಮಾಳದ ಜಮೀನಿಲ್ಲಿ ಸುರಿದ ಬೆಂಕಿ ಇರುವ ಬೂದಿಯಲ್ಲಿ ಸಿಲುಕಿ ರೈತ ಕಾಲು ಸುಟ್ಟುಕೊಂಡಿದ್ದಾನೆ. ನಂತರ, ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆಯಲೂ ಆಗದೇ, ನೋವನ್ನು ತಾಳಲೂ ಆಗಿದೇ ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ನಡೆಸಿದೆ.
ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರು ಮಾಡುವ ಎಡವಟ್ಟು ಒಂದೊಂದಲ್ಲ. ಸಕ್ಕರೆ ಕಾರ್ಖಾನೆಗಳು ಇರುವ ಸುತ್ತ-ಮುತ್ತಲಿನ ಇರುವ ರೈತರು ಒಂದಲ್ಲಾ ಒಂದು ಕಷ್ಟವನ್ನು ಎದುರಿಸುತ್ತಿರುತ್ತಾರೆ. ಅದೇ ರೀತಿ ಚಾಮರಾಜನಗರ ಜಿಲ್ಲೆಯ ಕಂತೂರು ಸಕ್ಕರೆ ಕಾರ್ಖಾನೆಯ ಎಡವಟ್ಟಿನಿಂದ ರೈತ ವೆಂಕಟರಮಣ (52) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದರಿಂದ ರೈತನ ಇಡೀ ಕುಟುಂಬವೇ ಬೀದಿಗೆ ಬಂದಂತಾಗಿದೆ. ಈಗಲಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಕಾರ್ಖಾನೆ ಮಾಲೀಕರಿಗೆ ಬುದ್ಧಿ ಕಲಿಸಿ, ರೈತನ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಗ್ರಾಮಸ್ಥರು ಅಗ್ರಹಿಸಿದ್ದಾರೆ.
undefined
ಆನೇಕಲ್ ಬಾಲ್ಯ ವಿವಾಹಕ್ಕೆ ಸಿಕ್ತು ರೋಚಕ ಟ್ವಿಸ್ಟ್; ಅಜ್ಜಿ ಕೊನೇ ಆಸೆ ಈಡೇರಿಸಲು ಮೊಮ್ಮಗಳ ಬಲಿ ಕೊಟ್ಟರು
ಘಟನೆಯ ವಿವರವೇನು?
ಚಾಮರಾಜನಗರ ಜಿಲ್ಲೆಯ ಕುಂತೂರು ಸಕ್ಕರೆ ಕಾರ್ಖಾನೆಯಲ್ಲಿ ಉತ್ಪಾದನೆಯಾಗುವ ಬೂದಿಯಲ್ಲಿ ಅದೇ ಗ್ರಾಮದಲ್ಲಿರುವ ಸರ್ಕಾರಿ ಗೋಮಾಳ ಜಮೀನು ಹಾಗೂ ಖಾಲಿ ಜಾಗದಲ್ಲಿ ಅಕ್ರಮವಾಗಿ ಸುರಿದು ಹೋಗುವ ಅಭ್ಯಾಸ ಮಾಡಿಕೊಂಡಿದೆ. ಅದರಲ್ಲಿಯೂ ಸಕ್ಕರೆ ಕಾರ್ಖಾನೆಯ ಒಲೆಗಳಿಂದ ಬಂದ ಬಿಸಿ ಬಿಸಿ ಬೂದಿಯನ್ನು ಟಿಪ್ಪರ್ ಹಾಗೂ ಟ್ರ್ಯಾಕ್ಟರ್‌ನ ಕಬ್ಬಿಣದ ಕಂಟೇನರ್‌ಗಳಲ್ಲಿ ತುಂಬಿಕೊಂಡು ಬಂದು ಸುರಿದು ಹೋಗುತ್ತಾರೆ. ಆಗ, ಬೂದಿಯಲ್ಲಿ ಬೆಂಕಿಯ ಕೆಂಡಗಳೂ ಕೂಡ ಇರುತ್ತದೆ. ಆದರೆ, ಇದರ ಬಗ್ಗೆ ಯಾವುದೇ ಮಾಹಿತಿ ಇಲ್ಲದ ರೈತ ಜಮೀನಿಗೆ ದನಗಳನ್ನು ಹೊಡೆದುಕೊಂಡು ಹೋಗುವಾಗ ದನಗಳು ಬೂದಿಯ ನಡುವೆ ಹೋಗಿವೆ. ಅವುಗಳನ್ನು ಹೊಡೆದುಕೊಂಡು ಬರಲು ದನಗಳ ಹಿಂದೆಯೇ ಹೋದ ರೈತನ ಕಾಲುಗಳು ಸೊಂಟದ ಭಾಗದವರೆಗೂ ಸುಟ್ಟು ಹೋಗಿವೆ.
ರೈತನ ಕಾಲುಗಳ ಬಹುಭಾಗ ಸಂಪೂರ್ಣವಾಗಿ ಬೆಂದು ಹೋಗಿದ್ದು, ವಿಪರೀತ ನೋವು ಅನುಭವಿಸುವಂತಾಗಿದೆ. ಕೂಡಲೇ, ಕಾಲು ಸುಟ್ಟುಕೊಂಡು ಗಾಯದಿಂದ ಬಳಲುತ್ತಿದ್ದ ರೈತನನ್ನು ಸ್ಥಳೀಯರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಗ, ಸಕ್ಕರೆ ಕಾರ್ಖಾನೆಯವರು ನೀವು ಪೊಲೀಸ್ ಠಾಣೆಗೆ ದೂರು ನೀಡುವುದು ಬೇಡ, ಆಸ್ಪತ್ರೆ ಖರ್ಚು ನಾವು ಭರಿಸುತ್ತೇವೆ ಎಂದು ಒಪ್ಪಿಕೊಂಡಿದ್ದಾರೆ. ಆದರೆ, ಸಕ್ಕರೆ ಕಾರ್ಖಾನೆಯ ಮಾಲೀಕರು ಕಾಲು ಸುಟ್ಟುಕೊಂಡು ನರಳುತ್ತಿದ್ದ ರೈತನನ್ನು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸದೇ ಪುಡಿಗಾಸು ನೀಡಿ ಕೈ ತೊಳೆದುಕೊಂಡಿದೆ.
ಎಂಥಾ.. ಮಕ್ಕಳನ್ನ ಹೆತ್ತುಬಿಟ್ಟೆ ಪಂಕಜಾಕ್ಷೀ; ಆಸ್ತಿಗಾಗಿ ಹೆತ್ತ ತಾಯಿಯನ್ನೇ ಗೃಹ ಬಂಧನದಲ್ಲಿಟ್ಟ ಮಕ್ಕಳು
ಇತ್ತ ಕುಟುಂಬಕ್ಕೆ ಆಸರೆಯಾಗಿದ್ದ ನಾನೇ ಈಗ ಕಾಲು ಸುಟ್ಟುಕೊಂಡು ಮನೆಯವರಿಗೆ ಹೊರೆ ಆಗಿದ್ದೇನೆ. ನನ್ನ ಸುಟ್ಟ ಗಾಯಕ್ಕೆ ಚಿಕಿತ್ಸೆ ಕೊಡಿಸಲು ಕುಟುಂಬ ಸದಸ್ಯರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದುದನ್ನು ನೋಡಿ ಮನನೊಂದಿದ್ದಾನೆ. ಜೊತೆಗೆ, ಸುಟ್ಟ ಗಾಯದ ನೋವು ಕೂಡ ಹೆಚ್ಚಾಗಿದ್ದು, ಈ ನೋವನ್ನು ತಾಳಲಾರದೇ ಮನೆಯಲ್ಲಿ ಯಾರೂ ಇಲ್ಲದಿರುವಾಗ ನೇಣಿಗೆ ಶರಣಾಗಿದ್ದಾನೆ. ಇದರಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇನ್ನು ಗ್ರಾಮಸ್ಥರಿಂದ ಸಕ್ಕರೆ ಕಾರ್ಖಾನೆ ವಿರುದ್ಧ ತೀವ್ರ ಪ್ರತಿಭಟನೆ ಎದುರಾದ ಬೆನ್ನಲ್ಲಿಯೇ ಮೃತ ರೈತನ ಕುಟುಂಬಕ್ಕೆ ಕಾರ್ಖಾನೆಯಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದೆ.