ಗುಂಡ್ಲುಪೇಟೆಯಲ್ಲಿ ದೇಶದ ಮೊದಲ ಎಐ ಮೈಕ್ರೋಡೇಟಾ ಕೇಂದ್ರ: ಹೊಸ ಶಕೆ ಆರಂಭ Chamarajanagar

Published : Sep 03, 2026, 08:57 AM IST
Chamarajanagara Gundlupet

ಸಾರಾಂಶ

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ, ಸಿನಿಫಿಯಾನ್ ಸಂಸ್ಥೆಯು ದೇಶದ ಮೊದಲ ತಾಲೂಕು ಮಟ್ಟದ ಎಐ ಮೈಕ್ರೋಡೇಟಾ ಕೇಂದ್ರವನ್ನು ಸೆಪ್ಟೆಂಬರ್ 5 ರಂದು ಉದ್ಘಾಟಿಸಲಿದೆ. ಕೇಂದ್ರ ಸರ್ಕಾರದ 'ನಮ್ಮ ಡೇಟಾ, ನಮ್ಮ ದೇಶದಲ್ಲಿ' ಕಾಯ್ದೆಯಡಿ ಸ್ಥಾಪನೆಯಾಗುತ್ತಿರುವ ಈ ಕೇಂದ್ರವು ಕೃಷಿ ಮತ್ತು ಕೈಗಾರಿಕೆಗಳಿಗೆ ಅಗತ್ಯ ಡೇಟಾ ಒದಗಿಸಲಿದೆ.

ಚಾಮರಾಜನಗರ: ದೇಶದಲ್ಲೇ ಪ್ರಪ್ರಥಮ ಬಾರಿಗೆ ತಾಲೂಕು ಮಟ್ಟದಲ್ಲಿ ಸಿನಿಫಿಯಾನ್ ಸಂಸ್ಥೆಯಿಂದ ಸೆ.5ರಂದು ಜಿಲ್ಲೆಯಲ್ಲಿ ಮೊದಲ ಎಐ ಮೈಕ್ರೋಡೇಟಾ ಕೇಂದ್ರದ ಉದ್ಘಾಟನೆಯು ಗುಂಡ್ಲುಪೇಟೆ ಪಟ್ಟಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಶ್ರೀನಿಧಿ ಹೇಳಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2022-23 ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ಜಾರಿ ಮಾಡಿರುವ (ಡಿಪಿಇಪಿ ಆಕ್ಟ್) ನಮ್ಮ ದೇಶದ ಡೇಟಾ, ನಮ್ಮ ದೇಶದಲ್ಲಿ ಇರಬೇಕು. ಕಾಯ್ದೆಯಡಿ ಎಐ ಮೈಕ್ರೋಡೇಟಾ ಕೇಂದ್ರ ಆರಂಭಿಸಲಾಗುತ್ತಿದೆ ಎಂದರು.

ಕೃಷಿ, ಕೈಗಾರಿಕೆ ಡೇಟಾ ಸೌಲಭ್ಯ

ಆಧಾರ್, ಗೂಗಲ್ ಬೇರೆದೇಶದಲ್ಲಿ ಸೇವ್‌ಆಗುತ್ತಿದ್ದವು. ಈಗ ನಮ್ಮಲ್ಲೇ ಸಾಪ್ಟ್ವೇರ್ ಕಂಪನಿ ಆರಂಭಿಸಿರುವುದರಿಂದ ಕೃಷಿ, ಕೈಗಾರಿಕೆ ಸೇರಿದಂತೆ ಇತರೇ ಕಂಪನಿಗಳಿಗೆ ಬೇಕಾದ ಡೇಟಾ ಇಲ್ಲೇ ಸಿಗುತ್ತದೆ, ಜಿಲ್ಲೆಯ ಪ್ರತಿಷ್ಠಿತ ಕಂಪನಿಗಳು ತಮಗೆ ಬೇಕಾದ ಡೇಟಾ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಮೈಸೂರು ರಸ್ತೆಯಲ್ಲಿ ಆರಂಭಿಸಿರುವ ಎಐ ಮೈಕ್ರೋಡೇಟಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ಬೆಳಗ್ಗೆ 10ಕ್ಕೆ ನಡೆಯಲಿದ್ದು, ಸಿನಿಫಿಯಾನ್ ಸಂಸ್ಥೆ ಸಂಸ್ಥಾಪಕ ಸದಸ್ಯ ಬಾಂಬೆಐಐಟಿ ಪ್ರಾದ್ಯಾಪಕಡಾ.ಮಂಜುನಾಥ್, ಕೃಷ್ಣ ಬಿಲ್ಡ್ಎಸ್ಟೇಟ್‌ ಅಡ್ವಾನ್ಸ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಬಾಯ್, ಕೃಷ್ಣ ಅಡ್ವಾನ್ಸ್‌ ಕಂಪನಿ ಸಿಇಒ ಕೋಲ್ ಶೈಶವ್, ಬಾಂಬೆಐಐಟಿ ಸಿಡಿಒ ಡಾ.ಕುಶಾಲ್ ಪೋಪ್ಲಿ ಭಾಗವಹಿಸುವರು ಎಂದರು.

ಇದನ್ನೂ ಓದಿ: ಆಪರೇಷನ್‌ ಸಿಂದೂರ ವೀರ, ಬೆಂಗಳೂರಿನ ಮಾಜಿ ವಿದ್ಯಾರ್ಥಿ ರಾಮಮಂದಿರದ CEO ಜೀತೇಂದ್ರ ಮಿಶ್ರಾ

ಗುಂಡ್ಲುಪೇಟೆ ಪಟ್ಟಣದಲ್ಲಿ ಮೊದಲ ಬಾರಿಗೆ ಎಐ ಮೈಕ್ರೋಡೇಟಾ ಕೇಂದ್ರಕ್ಕೆ ಚಾಲನೆ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಹನೂರು ಸೇರಿದಂತೆ ಉಳಿದ ತಾಲೂಕು ಕೇಂದ್ರಗಳಿಗೂ ವಿಸ್ತರಿಸುವ ಗುರಿ ಹೊಂದಲಾಗಿದೆ. ಅಂದು ನಡೆಯುವ ಕಂಪನಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲೆಯ ಉದ್ಯಮಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಎಐ ಮೈಕ್ರೋಡೇಟಾ ಕೇಂದ್ರದ ನಿರ್ದೇಶಕ ಜಿ.ಆರ್.ದೊರೆಸ್ವಾಮಿ ಇದ್ದರು.

ಇದನ್ನೂ ಓದಿ: 8 ತಿಂಗಳ ನಂತರವೂ ಕೊಳೆಯದ ಸ್ವಾಮೀಜಿ ಶವ! ದೈವವಾಣಿಯಂತೆ ಸಮಾಧಿ ಅಗೆದಾಗ ಕಾದಿತ್ತು ಮಹಾ ವಿಸ್ಮಯ

PREV
Read more Articles on
click me!

Recommended Stories

8 ತಿಂಗಳ ನಂತರವೂ ಕೊಳೆಯದ ಸ್ವಾಮೀಜಿ ಶವ! ದೈವವಾಣಿಯಂತೆ ಸಮಾಧಿ ಅಗೆದಾಗ ಕಾದಿತ್ತು ಮಹಾ ವಿಸ್ಮಯ
ಬೆಳಗಾವಿ ಕ್ಯಾಂಟೋನ್ಮೆಂಟ್ ಪ್ರದೇಶದ 756 ಎಕರೆ ಹಸ್ತಾಂತರ? ಆತಂಕ ಬೇಡ ಅಂದ್ರು ಸಿಇಒ!