ಎಳೆ ಕಬ್ಬು ನುರಿಸಲು ಮುಂದಾಯ್ತು ಕಾರ್ಖಾನೆ: ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ವಿರುದ್ಧ ರೈತರ ಆರೋಪ!

By Govindaraj S  |  First Published Feb 19, 2024, 11:30 PM IST

ಮುಂದಿನ ಬಾರಿ ಟನ್ ಕಬ್ಬಿಗೆ ಬೆಲೆ ಕಡಿತಗೊಳ್ಳಲಿದೆ. ಚಾಮರಾಜನಗರ - ರೈತರಿಗೆ ನಷ್ಟವುಂಟು ಮಾಡುವ ಕೆಲಸಕ್ಕೆ ಸಕ್ಕರೆ ಕಾರ್ಖಾನೆ ಕೈ ಹಾಕಿದೆ. ಬೇರೆ ಜಿಲ್ಲೆಯಿಂದ ಎಳೆ ಕಬ್ಬು ತಂದು ನುರಿಸಲಾಗ್ತಿದೆ. 


ವರದಿ: ಪುಟ್ಟರಾಜು.ಆರ್.ಸಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ (ಫೆ.19): ಮುಂದಿನ ಬಾರಿ ಟನ್ ಕಬ್ಬಿಗೆ ಬೆಲೆ ಕಡಿತಗೊಳ್ಳಲಿದೆ. ಚಾಮರಾಜನಗರ - ರೈತರಿಗೆ ನಷ್ಟವುಂಟು ಮಾಡುವ ಕೆಲಸಕ್ಕೆ ಸಕ್ಕರೆ ಕಾರ್ಖಾನೆ ಕೈ ಹಾಕಿದೆ. ಬೇರೆ ಜಿಲ್ಲೆಯಿಂದ ಎಳೆ ಕಬ್ಬು ತಂದು ನುರಿಸಲಾಗ್ತಿದೆ. ನಾನ್ ಮೆಚ್ಯೂರಿಟಿ ಕಬ್ಬು ನುರಿಸುವುದರಿಂದ ಎಫ್ಆರ್ ಪಿ ದರ ಕಡಿಮೆಯಾಗುತ್ತೆ, ಮುಂದಿನ ಸಾಲಿನಲ್ಲಿ ರೈತರಿಂದ ಪಡೆದು ಅರೆಯುವ ಕಬ್ಬಿನ ಬೆಲೆ ಕಡಿಮೆಯಾಗುವ ಆತಂಕ ವ್ಯಕ್ತಪಡಿಸ್ತಿದ್ದು, ಕೂಡಲೇ ಎಳೆ ಕಬ್ಬು ನುರಿಸುವುದನ್ನು ಸ್ಥಗಿತಗೊಳಿಸಲು ಆಗ್ರಹಿಸಿದ್ದಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ. 

Tap to resize

Latest Videos

undefined

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕುಂತೂರು ಗ್ರಾಮದಲ್ಲಿರುವ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ವಿರುದ್ಧ ರೈತರು ಎಳೆ ಕಬ್ಬು ತಂದು ನುರಿಸುತ್ತಿರುವ ಬಗ್ಗೆ ಗಂಭೀರ ಆರೋಪ ಮಾಡ್ತಿದ್ದಾರೆ. ಸಕ್ಕರೆ ಕಾರ್ಖಾನೆಯವರು ಲಾಭಕೋಸ್ಕರ 6 ರಿಂದ 7 ತಿಂಗಳು ಬೆಳೆದ ಕಬ್ಬನ್ನು ತಂದು ನುರಿಸುವ ಕೆಲಸಕ್ಕೆ ಮುಂದಾಗಿದ್ದಾರೆ.ಕಬ್ಬು ಕಟಾವು ಮಾಡಬೇಕಾದ್ರೆ ವೈಜ್ಞಾನಿಕವಾಗಿ12 ರಿಂದ 14 ತಿಂಗಳಾಗಿರಬೇಕು. ಇದರಿಂದ ಸಕ್ಕರೆ ಉತ್ಪಾದನೆ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತೆ. ಆದ್ರೆ ಕಾರ್ಖಾನೆಯವರು ಏಕಾಏಕಿ ಎಳೆ ಕಬ್ಬು ತಂದು ನುರಿಸುತ್ತಿದ್ದಾರೆ. ಇದರಿಂದ ಕಬ್ಬಿನ ನ್ಯಾಯ ಮತ್ತು ಲಾಭದಾಯಕ ಬೆಲೆ (ಎಫ್ಆರ್ ಪಿ) ಕಡಿಮೆಯಾಗುತ್ತದೆ. ಈ ಎಫ್ಆರ್ ಪಿ ದರವನ್ನು ಕೇಂದ್ರ ಸರ್ಕಾರ ನಿಗದಿಪಡಿಸಲಿದ್ದು, ಸಕ್ಕರೆ ಇಳುವರಿ ಕಡಿಮೆ ಇದ್ದರೆ ರೈತರು ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆ ಎಂಬುವುದು ರೈತರ ಆತಂಕವಾಗಿದೆ.

ಬಿಜೆಪಿ ಕೊಟ್ಟ ಭರವಸೆಗಳ ಕಾನೂನು ಚೌಕಟ್ಟಿನಲ್ಲೇ ಈಡೇರಿಸಿದೆ: ಎಂ.ಪಿ.ರೇಣುಕಾಚಾರ್ಯ

ಇನ್ನೂ ರೈತರು ಬೆಳೆದ ಕಟಾವಿಗೆ ಬಂದ ಕಬ್ಬಿನಲ್ಲಿ ಸುಮಾರು  20 ಕ್ಕೂ ಹೆಚ್ಚು ಗಿಣ್ಣುಗಳಿರುತ್ತೆ. ಆದ್ರೆ ಇವರು ನುರಿಸುತ್ತಿರುವ ಕಬ್ಬಿನಲ್ಲಿ 14 ಗಿಣ್ಣುಗಳಿದೆ.ಕೇಂದ್ರ ಸರ್ಕಾರ ಟನ್ ಕಬ್ಬಿಗೆ ಬೆಲೆ ನಿರ್ಧರಿಸುವ ವೇಳೆ ಸಕ್ಕರೆ ಇಳುವರಿ ಆಧಾರದ ಮೇಲೆ ಬೆಲೆ ನಿರ್ಧರಿಸುತ್ತೆ. ಸದ್ಯ 3200 ರೂಪಾಯಿ ಹೆಚ್ಚು ನಿಗದಿ ಮಾಡಲಾಗಿದ್ದು, ಮುಂದೆ ಇಳುವರಿ ಇಳಿಕೆಯಿಂದ ಟನ್ ಕಬ್ಬಿಗೆ 200 ರೂಪಾಯಿಗೂ ಅಧಿಕ ನಷ್ಟ ಸಂಭವಿಸುತ್ತೆ. ಕಾರ್ಖಾನೆ ತಮ್ಮ ಹೊರೆ ತಪ್ಪಿಸಿಕೊಳ್ಳಲೂ ಈ ರೀತಿಯ ತಂತ್ರಕ್ಕೆ ಮೊರೆ ಹೋಗಿದೆ ಅಂತಾರೆ. ಇನ್ನೂ ರೈತರ ಆರೋಪ ಕುರಿತು ಪ್ರತಿಕ್ರಿಯಿಸಲು ಸಕ್ಕರೆ ಕಾರ್ಖಾನೆಯವರು ನಿರಾಕರಿಸ್ತಿದ್ದಾರೆ. ಆದ್ರೆ ಎಳೆ ಕಬ್ಬು ನುರಿಸುತ್ತಿರುವ ಪರಿಣಾಮ ನೇರವಾಗಿ ರೈತರ ಮೇಲೆ ಬೀಳಲಿದ್ದು, ಸ್ಥಳೀಯ ಕಬ್ಬು ಬೆಳೆಗಾರರ ಮೇಲೆ ಗಂಭೀರ ಪರಿಣಾಮ ಬೀರಲಿದೆ.

click me!