ಚಲೋ ಚಾಮುಂಡಿ ಬೆಟ್ಟ ಜಾಥಾಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರಬೇಕು : ಪ್ರತಾಪ್ ಸಿಂಹ

By Kannadaprabha News  |  First Published Oct 11, 2023, 8:56 AM IST

ಮಹಿಷಾ ದಸರಾ ವಿರೋಧಿಸಿ ಅ.13 ರಂದು ನಡೆಯಲಿರುವ ಚಲೋ ಚಾಮುಂಡಿಬೆಟ್ಟ ಜಾಥಾಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರಬೇಕು ಎಂದು ಸಂಸದ ಪ್ರತಾಪ್ ಸಿಂಹ ಕರೆ ನೀಡಿದರು.


 ಮೈಸೂರು :  ಮಹಿಷಾ ದಸರಾ ವಿರೋಧಿಸಿ ಅ.13 ರಂದು ನಡೆಯಲಿರುವ ಚಲೋ ಚಾಮುಂಡಿ ಬೆಟ್ಟ ಜಾಥಾಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರಬೇಕು ಎಂದು ಸಂಸದ ಪ್ರತಾಪ್ ಸಿಂಹ ಕರೆ ನೀಡಿದರು.

ಚಲೋ ಚಾಮುಂಡಿ ಬೆಟ್ಟ ಜಾಥಾ ಹಿನ್ನೆಲೆಯಲ್ಲಿ ತಿಲಕ್ ನಗರದ ಶ್ರೀರಾಮ ಮಂದಿರದಲ್ಲಿ ಮಂಗಳವಾರ ನಡೆದ ವಾರ್ಡ್ ಸಭೆಯಲ್ಲಿ ಮಾತನಾಡಿದ ಅವರು, ಮಹಿಷಾ ದಸರಾ ವಿರೋಧಿಸಿ ಬಿಜೆಪಿಯಿಂದ ಚಲೋ ಚಾಮುಂಡಿಬೆಟ್ಟ ಜಾಥಾ ಹಿನ್ನೆಲೆಯಲ್ಲಿ ವಾರ್ಡ್ ವಾರು ಪೂರ್ವಭಾವಿ ಸಭೆ ನಡೆಸಲು ಮುಂದಾಗಿದ್ದೇವೆ. ಮೈಸೂರಿನ ತಿಲಕ್ ನಗರದ ವಾರ್ಡ್ ನಂ.25 ರಲ್ಲಿ ಮೊದಲ ಸಭೆ ನಡೆಸಿದ್ದೇವೆ ಎಂದರು.

Latest Videos

undefined

ಮಹಿಷಾ ದಸರಾ ಎಂಬ ಅನಾಚಾಚಾರವನ್ನು ಎಲ್ಲರೂ ಸೇರಿ ತಡೆಯಬೇಕು. ಯಾರೋ ಮೂರು ಮತ್ತೊಂದು ಜನ ಕಿಡಿಗೇಡಿಗಳು ಮಾಡಬೇಕು ಎಂದು ಹೊರಟಿರುವ ಈ ಮಹಿಷ ದಸರಾವನ್ನು ತಡೆಯಲೇಬೇಕು. ಅ.13ರ ಬೆಳಗ್ಗೆ 8ಕ್ಕೆ ತಾವರೆಕಟ್ಟೆ ಬಳಿಗೆ ಎಲ್ಲರೂ ಬನ್ನಿ, ಎಲ್ಲರೂ ಸೇರಿ ಒಟ್ಟಾಗಿ ಬೆಟ್ಟಕ್ಕೆ ಹೋಗೋಣ ಎಂದು ಅವರು ಹೇಳಿದರು.

ಮೈಸೂರು ನಗರದ ಹಲವು ಭಾಗಗಳಿಂದ ಸಾವಿರಾರು ಜನರು ನಮ್ಮ ಪರವಾಗಿ ಬರುತ್ತಾರೆ. ಮಹಿಷ ಪ್ರತಿಮೆಯ ಬಳಿ ಎಲ್ಲರೂ ಕೂರೋಣ. ಚಾಮುಂಡಿ ತಾಯಿಯ ಸನ್ನಿಧಿಯಲ್ಲಿ ನಡೆಸುವ ಅನಾಚಾರವನ್ನು ಮಟ್ಟ ಹಾಕೋಣ. ಚಾಮುಂಡಿ ತಾಯಿ ಸನ್ನಿಧಿಯಲ್ಲಿ ಅಪವಿತ್ರ ಮಾಡುವವರನ್ನು ವಿರುದ್ಧ ಸಂಘರ್ಷವಾದರೂ ಸರಿ ತಡೆಯೋಣ ಎಂದು ಅವರು ಕರೆ ನೀಡಿದರು.

ಅ.13 ರಂದು ನಿಷೇಧಾಜ್ಞೆ ಜಾರಿ ಮಾಡಿ ಮಹಿಷ ದಸರಾ ಬಂದ್ ಮಾಡಿಸಿದರೆ ಅದಕ್ಕೆ ನಮ್ಮ ಸ್ವಾಗತವಿದೆ. ನಾವಂತೂ ಚಲೋ ಚಾಮುಂಡಿಬೆಟ್ಟ ಜಾಥಾ ವಿಚಾರವಾಗಿ ಎಲ್ಲಾ ವಾರ್ಡ್ ಗಳಲ್ಲೂ ಸಭೆ ನಡೆಸುತ್ತಿದ್ದೇವೆ‌. 5 ಸಾವಿರಕ್ಕೂ ಹೆಚ್ಚು ಜನರು ಜಾಥಾದಲ್ಲಿ ಭಾಗವಹಿಸುತ್ತಾರೆ. ಜಾಥಾಕ್ಕೆ ಪೊಲೀಸರ ಅನುಮತಿ ಕೇಳಿದ್ದೇವೆ. ಪೊಲೀಸರು ಇನ್ನೂ ನಮಗೆ ಅನುಮತಿ ಕೊಟ್ಟಿಲ್ಲ. ಮಹಿಷ ದಸರಾಗೂ ಅನುಮತಿ‌ಕೊಟ್ಟಿಲ್ಲ. ಅನುಮತಿ ವಿಚಾರದಲ್ಲಿ ಮತ್ತೆ ಪೊಲೀಸರ ಜೊತೆ ಮಾತನಾಡುತ್ತೇನೆ ಎಂದು ಅವರು ತಿಳಿಸಿದರು. ನಗರ ಪಾಲಿಕೆ ಸದಸ್ಯ ರಂಗಸ್ವಾಮಿ, ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಇದ್ದರು.

ದೇವರನ್ನ ದೆವ್ವ ಅಂತ ಹೇಳುವ ಕೆಲಸ

ಮೈಸೂರು (ಅ.04): ಮೈಸೂರು ಜನರಿಗೆ ದಸರಾ ಅಂದ್ರೆ ಏನು, ನವರಾತ್ರಿ ಅಂದ್ರೆ ಏನು ಅಂತ ಗೊತ್ತು. 2015-16 ರಲ್ಲಿ ಮಹಿಷ ದಸರಾ ಎನ್ನುವ ಅಸಹ್ಯ ಹುಟ್ಟು ಹಾಕಿದ್ದಾರೆ. ಚಾಮುಂಡಿ ಬೆಟ್ಟಕ್ಕೆ ಹೋಗಿ ದೆವ್ವವನ್ನ ದೇವರು ಅಂತ, ದೇವರನ್ನ ದೆವ್ವ ಅಂತ ಹೇಳುವ ಕೆಲಸವಾಗಿದೆ. ಆದರೆ, ಈ ಬಾರಿಯೂ ಮಹೊಷ ದಸರಾ ಮಾಡಲು ಮುಂದಾಗಿದ್ದು, ಇದನ್ನು ತಡೆಯಲು ಅ.13ರಂದು ಚಾಮುಂಡಿ ಚಲೋ ಮಾಡಲಾಗುತ್ತಿದೆ ಎಂದು ಸಂಸದ ಪ್ರತಾಪ್‌ ಸಿಂಹ ತಿಳಿಸಿದ್ದಾರೆ.

ಮೈಸೂರಿನಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಟಿಪ್ಪು, ಹೈದರಾಲಿ ಕಾಲ ಬಿಟ್ಟರೆ 414 ವರ್ಷದಿಂದ ನಿರಂತರವಾಗಿ ಮೈಸೂರು ದಸರಾ ನಡೆದುಕೊಂಡಿ ಬರುತ್ತಿದೆ. ಮೈಸೂರು ಜನರಿಗೆ ದಸರಾ ಅಂದ್ರೆ ಏನು, ನವರಾತ್ರಿ ಅಂದ್ರೆ ಏನು ಅಂತ ಗೊತ್ತು. 2015-16 ರಲ್ಲಿ ಮಹಿಷ ದಸರಾ ಎನ್ನುವ ಅಸಹ್ಯ ಹುಟ್ಟುಹಾಕಿದ್ದಾರೆ. ಆಗ ಇದ್ದವರು ಉದಾಸೀನ ತೋರಿದ್ದರು. ಚಾಮುಂಡಿ ಬೆಟ್ಟಕ್ಕೆ ಹೋಗಿ ದೆವ್ವವನ್ನ ದೇವರು ಅಂತ, ದೇವರನ್ನ ದೆವ್ವ ಅಂತ ಹೇಳುವ ಕೆಲಸ ಆಯ್ತು. ನಂತರ ಮೆರವಣಿಗೆ ಮಾಡಲಾಯಿತು. ಆಗಿನ ಸಿಎಂ ಸಿದ್ದರಾಮಯ್ಯ ಸರ್ಕಾರ ಅದನ್ನ ನಿಲ್ಲಿಸಲಿಲ್ಲ ಎಂದು ಕಿಡಿಕಾರಿದರು.

ಕರ್ನಾಟಕದಲ್ಲಿ ರಾಕ್ಷಸರ ರಾಜ್ಯಭಾರ ನಡೆಯುತ್ತಿದೆ: ಸರ್ಕಾರ ಕೆಣಕಿದ ಸಂಸದ ಪ್ರತಾಪ್‌ ಸಿಂಹ

ಮೈಸೂರಿನ ಭಕ್ತರ ಭಾವನೆಗೆ ನೋವಾಗುವ ಅಸಹ್ಯವನ್ನು ನಿಲ್ಲಿಸುವ ಮನವಿಗೆ ಸಚಿವ ಸೋಮಣ್ಣ ಸ್ಪಂದಿಸಿ ನಿಲ್ಲಿಸಲು ನಾಂದಿ ಹಾಡಿದರು. ಈ ಹಿಂದಿನ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರದಲ್ಲಿ ಇಂತಹ ಅಸಹ್ಯವನ್ನು ಮಟ್ಟ ಹಾಕುವ ಕೆಲಸ ಮಾಡಿದ್ದರು. ಈಗ ಸಿದ್ದರಾಮಯ್ಯ ಸರ್ಕಾರ ಬಂದಾಗ ಅವರು ಮತ್ತೆ ಹೆಚ್ಚಿಕೊಂಡಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ಮಹಿಷ ಆಚರಣೆ ಮಾಡುವ ಮಾತು ಆಡುತ್ತಿದ್ದಾರೆ. ಇದನ್ನ ತಡೆಯುವ ನಿಟ್ಟಿನಲ್ಲಿ ಅಕ್ಟೋಬರ್ 13 ರಂದು ಚಾಮುಂಡಿ ಬೆಟ್ಟ ಚಲೋ ಜಾಥ ನಡೆಸುತ್ತೇವೆ ಎಂದು ಹೇಳಿದರು.

click me!