ಕಾಂತಾರ ಚಿತ್ರ ವಿವಾದ: ನಟ ಚೇತನ್‌ ವಿರುದ್ಧ ಚಕ್ರವರ್ತಿ ಸೂಲಿಬೆಲೆ ಕಿಡಿ

By Kannadaprabha News  |  First Published Oct 20, 2022, 8:30 PM IST

ದುರದೃಷ್ಟವೆಂದರೆ ಚೇತನರಿಗೆ ಓದಲು ಅಥವಾ ಅರಿತುಕೊಳ್ಳಲು ಸಮಯವಿಲ್ಲ. ಅಲ್ಲಿನ ಜನರ ಸಂಸ್ಕೃತಿ ಸನಾತನ ಧರ್ಮದ ಭಾಗವಾಗಿ ಬದುಕುತ್ತಿರುವುದನ್ನು ನೋಡಲಿ: ಚಕ್ರವರ್ತಿ ಸೂಲಿಬೆಲೆ 


ರಬಕವಿ-ಬನಹಟ್ಟಿ(ಅ.20): ನಟ ಚೇತನರಿಗೆ ಸಿನೆಮಾ ಮಾಡಿ ಹಿಟ್‌ ಮಾಡಿಕೊಳ್ಳೋ ಸಾಮರ್ಥ್ಯವಿಲ್ಲ. ಬದಲಾಗಿ ಒಂದಲ್ಲ ಒಂದು ವಿಚಾರದಿಂದ ಸನಾತನ ಹಿಂದೂ ಧರ್ಮವನ್ನು ಟಾರ್ಗೆಟ್‌ ಮಾಡುತ್ತಾ ಸದಾ ಸುದ್ದಿಯಲ್ಲಿರಬೇಕೆಂಬ ಹುಚ್ಚು ಮನಸು ಅವರದಾಗಿದೆ. ಈಗ ರಿಷಬ್‌ ಶೆಟ್ಟಿಯವರ ಕಾಂತಾರ ಚಿತ್ರದಿಂದ ಮತ್ತೆ ವಿವಾದ ಎಬ್ಬಿಸಿರುವುದು ಹೊಸತನವಲ್ಲ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ನಟ ಚೇತನ್‌ ವಿರುದ್ಧ ಕಿಡಿಕಾರಿದರು.

ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬುಡಕಟ್ಟು ಜನಾಂಗ, ಭಾರತೀಯ ಮೂಲ, ಭಾರತೀಯ ಸಂಸ್ಕೃತಿ ಬೇರೆ ಎಂಬುದು ಎಡಪಂಥೀಯರ ವಾದ ಸಾಮಾನ್ಯವಾಗಿದೆ. ಇಡೀ ಜಗತ್ತು ಇದನ್ನು ತಿರಸ್ಕರಿಸಿದೆ. ಆದರೂ ಈ ವಾದದಿಂದಲೇ ನೇತಾಡುವುದು ಬಿಟ್ಟರೆ ಹೋರಾಟದ ತಳಪಾಯ ತಪ್ಪುತ್ತದೆ ಎಂಬ ಕಲ್ಪನೆಯಾಗಿದೆ. ಹಿಂದು ಧರ್ಮ ಎಲ್ಲವನ್ನೂ ಒಳಗೊಳ್ಳುವ ಧರ್ಮ, ಬುಡಕಟ್ಟು ಸೇರಿ ಯಾವುದೇ ಸಂಸ್ಕೃತಿ ಹಿಂದೂ ಧರ್ಮದ ಅಂಗವಾಗಿದೆ ಎಂದರು.

Tap to resize

Latest Videos

ರಾಮಮಂದಿರ ಸ್ಫೋಟಕ್ಕೆ PFI ಸಂಚು: ಹಿಂದೂಗಳನ್ನು ಹೆದರಿಸಿ ಕೂರಿಸುವ ಉದ್ದೇಶ: ಚಕ್ರವರ್ತಿ ಸೂಲಿಬೆಲೆ

ದೇವರಗಿಂತ ದೈವ ಹೆಚ್ಚು ಎಂಬುದು ಚಿತ್ರದಲ್ಲಿದೆ. ಆದರೆ ದೈವ ಮತ್ತು ದೇವರ ಪೂಜೆ ದಕ್ಷಿಣ ಕನ್ನಡದ ಜನ ಬೆಳೆಸಿಕೊಂಡು ಬಂದಿದ್ದಾರೆ. ದುರದೃಷ್ಟವೆಂದರೆ ಚೇತನರಿಗೆ ಓದಲು ಅಥವಾ ಅರಿತುಕೊಳ್ಳಲು ಸಮಯವಿಲ್ಲ. ಅಲ್ಲಿನ ಜನರ ಸಂಸ್ಕೃತಿ ಸನಾತನ ಧರ್ಮದ ಭಾಗವಾಗಿ ಬದುಕುತ್ತಿರುವುದನ್ನು ನೋಡಲಿ. ಮೂರ್ಖತನ ಬಿಟ್ಟು ಭಾರತೀಯರ ಸಂಸ್ಕೃತಿಯೊಂದಿಗೆ ಒಂದಾಗಿ ಚೇತನ್‌ ಮುಂದುವರೆಯಲಿ. ಇವೆಲ್ಲಾ ಮಾತುಗಳನ್ನಾಡುವ ಮೊದಲು ಎರಡು ನಾಗರಿಕತೆಯನ್ನು ಬಿಟ್ಟು ಪಕ್ಕಾ ಭಾರತೀಯರಾಗುವುದನ್ನು ಕಲಿಯಲಿ ಎಂದು ಹೇಳಿದರು.
 

click me!