ಪ್ರಿಯಾಂಕ್ ಖರ್ಗೆಯವರನ್ನ ನೋಡಿದರೆ ಅಯ್ಯೋ ಪಾಪ ಅನ್ನಿಸುತ್ತದೆ. ಮಂತ್ರಿಗಿರಿಯಲ್ಲಿದ್ದರೂ ಧೈರ್ಯವಾಗಿ ಎದುರಿಸಲು ತಾಕತ್ತಿಲ್ಲದೆ ಪೊಲೀಸರು, ಅಧಿಕಾರಿಗಳ ಮೇಲೆ ಒತ್ತಡ ಹಾಕಿ ನನಗೆ ಕಲಬುರಗಿ ಪ್ರವೇಶಕ್ಕೆ ನಿಷೇಧ ಹೇರಿಸಿದ್ದಾರೆ ಎಂದು ನಮೋ ಬ್ರಿಗೇಡ್ ಸಂಸ್ಥಾಪಕ ಸೂಲಿಬೆಲೆ ಚಕ್ರವರ್ತಿ ಆರೋಪಿಸಿದರು.
ಬೀದರ್ (ಮಾ.01): ಪ್ರಿಯಾಂಕ್ ಖರ್ಗೆಯವರನ್ನ ನೋಡಿದರೆ ಅಯ್ಯೋ ಪಾಪ ಅನ್ನಿಸುತ್ತದೆ. ಮಂತ್ರಿಗಿರಿಯಲ್ಲಿದ್ದರೂ ಧೈರ್ಯವಾಗಿ ಎದುರಿಸಲು ತಾಕತ್ತಿಲ್ಲದೆ ಪೊಲೀಸರು, ಅಧಿಕಾರಿಗಳ ಮೇಲೆ ಒತ್ತಡ ಹಾಕಿ ನನಗೆ ಕಲಬುರಗಿ ಪ್ರವೇಶಕ್ಕೆ ನಿಷೇಧ ಹೇರಿಸಿದ್ದಾರೆ ಎಂದು ನಮೋ ಬ್ರಿಗೇಡ್ ಸಂಸ್ಥಾಪಕ ಸೂಲಿಬೆಲೆ ಚಕ್ರವರ್ತಿ ಆರೋಪಿಸಿದರು. ರಾತ್ರಿ ಕಲಬುರಗಿ ಜಿಲ್ಲೆ ಪ್ರವೇಶ ನಿಷೇಧಿಸಿದ ಹಿನ್ನೆಲೆ ಜಿಲ್ಲೆಯ ಹಳ್ಳಿಖೇಡ್ (ಕೆ) ಗ್ರಾಮದಲ್ಲಿ ಕಾರ್ಯಕರ್ತರ ಮನೆಯಲ್ಲಿ ಉಳಿದು ಗುರುವಾರ ಬೆಳಗ್ಗೆ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಅವರು, ತೆರಿಗೆಯಿಂದ ಸಂಬಳ ಪಡೆಯುವ ಪೊಲೀಸರು ನಾಗರಿಕರ ರಕ್ಷಣೆಗಾಗಿ ಇದ್ದಾರೆ.
ಯಾರೋ ಬಂದು ಗಲಾಟೆ ಮಾಡುತ್ತಾರೆ ಅಂದ್ರೆ ರಕ್ಷಣೆ ಕೊಡಲಾಗಲ್ಲ ಅಂದ್ರೆ ಪೊಲೀಸರಿಗೆ ಸಾಮರ್ಥ್ಯ ಇಲ್ಲ ಅಂತ ಅರ್ಥ. ಕಲಬುರಗಿ ಪೊಲೀಸರ ಬಗ್ಗೆ ಅನುಕಂಪ ಹುಟ್ಟುತ್ತದೆ ಎಂದರು. ಭಾಲ್ಕಿಯಲ್ಲಿ ಕಾರ್ಯಕ್ರಮ ತಡೆಯಲಿಕ್ಕೂ ಎಲ್ಲ ಪ್ರಯತ್ನ ಮಾಡಿದರು. ಆದರೆ ಭಾಲ್ಕಿಯಲ್ಲಿ ನಮೋ ಬ್ರಿಗೇಡ್ ಕಾರ್ಯಕ್ರಮ ಯಶಸ್ವಿಯಾಗಿಸಿತು. ಚಾಮರಾಜನಗರದಿಂದ ರಾಜ್ಯದಾದ್ಯಂತ 35 ಕ್ಷೇತ್ರಗಳಲ್ಲಿ ಕಾರ್ಯಕ್ರಮ ಮಾಡಿದ್ದೇವೆ. ಇಡೀ ರಾಜ್ಯ ಪ್ರವಾಸ ಆಗಿದೆ, ಎಲ್ಲೂ ಕೂಡ ಶಾಂತಿ ಭಂಗ ಆಗಿಲ್ಲ. ಚಿತ್ತಾಪುರದಲ್ಲಿ ಮಾತ್ರ ಯಾಕೆ ಶಾಂತಿ ಭಂಗ ಆಗುತ್ತದೆ ಎಂದು ಪ್ರಶ್ನಿಸಿದರು.
undefined
Loksabha Elections 2024: ರಾಜ್ಯದಲ್ಲಿ ಎಲ್ಲ 28 ಕ್ಷೇತ್ರಗಳನ್ನೂ ಗೆಲ್ಲುತ್ತೇವೆ: ಸದಾನಂದಗೌಡ
ಪ್ರಿಯಾಂಕ್ ಹೇಡಿತನದಿಂದ ಮುಖ ಮುಚ್ಚಿಕೊಳ್ಳುವಂಥ ಪ್ರಯತ್ನ: ಪ್ರಿಯಾಂಕ್ ಖರ್ಗೆ ಸ್ವಂತ ಕ್ಷೇತ್ರದಲ್ಲಿ ಸತ್ಯ ಎದುರಿಸಲು ಆಗದೆ ಹೇಡಿತನದಿಂದ ಮುಖ ಮುಚ್ಚಿಕೊಳ್ಳುವಂಥ ಪ್ರಯತ್ನ ಮಾಡುತ್ತಿದ್ದಾರೆ. ಯಾರದೋ ಹೆಗಲ ಮೇಲೆ ಬಂದೂಕು ಇಟ್ಟು ಚಲಾಯಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಪ್ರಿಯಾಂಕ್ ಮನಸ್ಸಿನಲ್ಲಿ ಹೆದರಿಕೆ ಮನೆ ಮಾಡಿರೋದಕ್ಕೆ ನಿಷೇಧ ಸಾಕ್ಷಿ: ಪ್ರಿಯಾಂಕ್ ಖರ್ಗೆ ಅವರಿಗೆ ಹೆದರಿಕೆ ವಾತಾವರಣ ಅವರ ಮನಸ್ಸಿನಲ್ಲಿರೋದು ನಂಗೊತ್ತು. ಅವರ ಕ್ಷೇತ್ರದಲ್ಲಿ ಕಾರ್ಯಕ್ರಮ ಮಾಡಿದರೆ ಹೇಗಿರುತ್ತದೆ ಎಂದು ಯೋಜನೆ ಮಾಡಿಕೊಂಡಿದ್ದೇವು. ಆದರೆ ರಾತ್ರಿ 11ಕ್ಕೆ ಕಾರ್ಯಕ್ರಮ ನಿಷೇಧಕ್ಕೆ ಮುಂದಾಗುತ್ತಾರೆ. ಇಡೀ ಕಲಬುರಗಿ ಜಿಲ್ಲೆಯ ಪ್ರವೇಶಕ್ಕೆ ನಿಷೇಧ ಹೇರ್ತಾರೆ ಅಂದ್ರೆ ಹಾಸ್ಯಾಸ್ಪದ. ನನಗೇನು ಇದು ಹೊಸದಲ್ಲ, ಹೀಗೆ ಮಾಡುತ್ತಾರೆಂದು ನನಗೆ ಗೊತ್ತಿತ್ತು. ಇದರಿಂದ ಪ್ರಿಯಾಂಕ್ ಖರ್ಗೆಗೆ ಯಾವ ರೀತಿ ಹೆದರಿಕೆ ಮನೆ ಮಾಡಿದೆ ಅಂತ ಅರ್ಥ ಆಗುತ್ತದೆ ಎಂದರು.
ಪಾಪ ಕುಮಾರಣ್ಣ ಹೆದರಿ ಮಂಡ್ಯಕ್ಕೆ ಓಟ: ಶಾಸಕ ಬಾಲಕೃಷ್ಣ ಲೇವಡಿ
ಮೋದಿ ಸಾಧನೆ ಹೇಳಿದ್ರೆ ಖರ್ಗೆ, ಅವರ ಅಳಿಯನಿಗೆ ಸೋಲಿನ ಭೀತಿ: ಮೋದಿಯವರ 10 ವರ್ಷದ ಸಾಧನೆ ಹೇಳಿದರೆ ಕಲಬುರಗಿ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ, ಅವರ ಅಳಿಯನಿಗೆ ಸೋಲಿನ ಭೀತಿ ಇದೆ. ಮೋದಿಯವರ ಪ್ರತಿಭೆಯಿಂದ ಕಾಂಗ್ರೆಸ್ ಕಂಗಾಲಾಗಿ ಹೋಗಿದೆ ಎಂದು ಸೂಲಿಬೆಲೆ ವ್ಯಂಗ್ಯವಾಡಿದರು. ಪ್ರಿಯಾಂಕ್ ಖರ್ಗೆ ನನ್ನ ಜೊತೆ ಟ್ವಿಟರ್ ವಾರ್‌ನಲ್ಲಿದಾರೆ, ಗಲಾಟೆ ಮಾಡಿಕೊಂಡಿದ್ದಾರೆ. ಅವರು ನನ್ನ ಜೊತೆ ಹಿಟ್ ಆಂಡ್ ರನ್ ಕೇಸ್‌ನಲ್ಲಿದ್ದಾರೆ. ಟ್ವಿಟರ್‌ನಲ್ಲಿ ಸರಿಯಾಗಿ ಝಾಡಿಸಿದ್ದಕ್ಕೆ ಹಿಂದಕ್ಕೆ ಸರಿದಿದ್ದಾರೆ ಎಂದು ಚಕ್ರವರ್ತಿ ಸೂಲಿಬೆಲೆ ಪ್ರಿಯಾಂಕ್ ಖರ್ಗೆ ವಿರುದ್ಧ ವ್ಯಂಗ್ಯದ ಸುರಿಮಳೆಯನ್ನೇ ಸುರಿದರು.