ಲಂಬಾಣಿ ಸಮಾಜದ ಜನರಿಗೆ ಮೂಲ ಸೌಲಭ್ಯ: ಶಾಸಕ ಚಂದ್ರು ಲಮಾಣಿ

By Kannadaprabha NewsFirst Published Mar 1, 2024, 10:23 PM IST
Highlights

ಸಂತ ಸೇವಾಲಾಲರು ಸರ್ವ ಧರ್ಮಗಳ ಬಗ್ಗೆ ಪ್ರೀತಿ ಹೊಂದಿದ್ದರು. ಸಮಾಜದ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಸಮಾಜದ ಏಳಿಗೆಗೆ ಕೊಡುಗೆ ನೀಡಬೇಕು ಎಂದು ಶಾಸಕ ಚಂದ್ರು ಲಮಾಣಿ ಹೇಳಿದರು. 

ಲಕ್ಷ್ಮೇಶ್ವರ (ಮಾ.01): ಸಂತ ಸೇವಾಲಾಲರು ಸರ್ವ ಧರ್ಮಗಳ ಬಗ್ಗೆ ಪ್ರೀತಿ ಹೊಂದಿದ್ದರು. ಸಮಾಜದ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಸಮಾಜದ ಏಳಿಗೆಗೆ ಕೊಡುಗೆ ನೀಡಬೇಕು ಎಂದು ಶಾಸಕ ಚಂದ್ರು ಲಮಾಣಿ ಹೇಳಿದರು. ಪಟ್ಟಣದ ಸೋಮೇಶ್ವರ ತೇರಿನ ಮನೆಯ ಆವರಣದಲ್ಲಿ ನಡೆದ ಸಂತ ಸೇವಾಲಾಲ್ ೨೮೫ನೇ ಜಯಂತಿ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಾಂಡಾಗಳ ಅಭಿವೃದ್ಧಿ ನನ್ನ ಮೊದಲ ಕನಸಾಗಿದೆ. ಮಕ್ಕಳಿಗೆ ಶಿಕ್ಷಣ ನೀಡಬೇಕು. ಸಮಾಜದ ಅಭಿವೃದ್ಧಿಗೆ ನಾನು ನಿರಂತರವಾಗಿ ಶ್ರಮಿಸುತ್ತೇನೆ. ಲಂಬಾಣಿ ಸಮಾಜದ ಜನರಿಗೆ ಎಲ್ಲಾ ಮೂಲ ಸೌಲಭ್ಯ ಕೊಡಿಸುವ ಕಾರ‍್ಯ ಮಾಡುತ್ತೇನೆ. ಸಂತ ಸೇವಾಲಾಲರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ಶ್ರಮಿಸಿದ ತಮಗೆಲ್ಲರಿಗೂ ನಾನು ಅಭಿನಂದಿಸುತ್ತೇನೆ ಎಂದರು.

ಸಂತ ಸೇವಾಲಾಲರು ಲಂಬಾಣಿ ಜನಾಂಗದ ಏಳಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ. ಲಂಬಾಣಿ ಸಮಾಜದ ಉದ್ಧಾರಕ್ಕಾಗಿ ಸಂತ ಸೇವಾಲಾಲರು ಹಗಲಿರುಳು ಶ್ರಮಿಸಿದರು. ಬಂಜಾರ ಸಮಾಜದ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಸಮಾಜದ ಬೆಳವಣಿಗೆಗೆ ಸಮುದಾಯದ ಮಹಿಳೆಯರು ಮಾಡಬೇಕು. ಸೇವಾಲಾಲರು ಸತ್ಯ. ತ್ಯಾಗ. ಪ್ರೀತಿ. ಸರ್ವ ಧರ್ಮಗಳ ಜೊತೆಯಲ್ಲಿ ಉತ್ತಮ ಬಾಂಧವ್ಯ ಹೊಂದಬೇಕು. ಲಂಬಾಣಿ ಸಮಾಜದ ಯುವಕರು ಎಲ್ಲರೊಂದಿಗೆ ಪ್ರೀತಿ ಪ್ರೇಮದಿಂದ ಬಾಳಬೇಕು ಎಂದು ಹೇಳಿದರು. ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಮಾತನಾಡಿ, ಬಂಜಾರ ಸಮಾಜದ ಜನರು ಎಲ್ಲಾ ಸಮಾಜದವರೊಂದಿಗೆ ಪರಸ್ಪರ ಪ್ರೀತಿ ವಿಶ್ವಾಸದಿಂದ ಬೆಳವಣಿಗೆ ಹೊಂದುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಗ್ಯಾರಂಟಿಗಳನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ ಮಾತನಾಡಿ, ಲಂಬಾಣಿ ಸಮಾಜದ ಜನರು ಧರ್ಮ ನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ಹೊಂದಬೇಕು ಎಂದು ಹೇಳಿದರು. ಮಾಜಿ ಶಾಸಕ ರಾಮಣ್ಣ ಲಮಾಣಿ ಮಾತನಾಡಿ, ಸಂತ ಸೇವಾಲಾಲರು ಲಂಬಾಣಿ ಸಮಾಜದ ಉದ್ಧಾರಕ್ಕಾಗಿ ಶ್ರಮಿಸಿದರು. ಮಾಜಿ ಶಾಸಕ ಜಿ.ಎಸ್. ಗಡ್ಡದ್ದೇವರಮಠ, ಜಿ.ಎಂ. ಮಹಾಂತಶೆಟ್ಟರ, ರಾಮಣ್ಣ ಲಮಾಣಿ, ದೇವಣ್ಣ ಲಮಾಣಿ, ಶಿವಣ್ಣ ಲಮಾಣಿ, ಜಾನು ಲಮಾಣಿ, ಟೋಪಣ್ಣ ಲಮಾಣಿ, ದೀಪಕ್ ಲಮಾಣಿ, ಗುರುಪ್ಪ ಲಮಾಣಿ, ಪರಮೇಶ್ವರ ಲಮಾಣಿ, ಸುರೇಶ್ ಕುಂಬಾರ, ಈಶ್ವರಪ್ಪ ಲಮಾಣಿ, ರಾಮಣ್ಣ ಲಮಾಣಿ, ಥಾವರೆಪ್ಪ ಲಮಾಣಿ, ಮಲ್ಲೇಶಪ್ಪ ಲಮಾಣಿ, ಕುಬೇರಪ್ಪ ಲಮಾಣಿ ಇದ್ದರು.

ಅರ್ಹ ವ್ಯಕ್ತಿಗಳಿಗೆ ಸರ್ಕಾರದ ಯೋಜನೆಗಳು ದೊರಕಬೇಕು: ಶಾಸಕ ವಿ.ಸುನಿಲ್ ಕುಮಾರ್

ಪಟ್ಟಣದ ಮಹಾ ಕವಿ ಪಂಪ ವೃತ್ತದಿಂದ ಮೆರವಣಿಗೆಗೆ ಆನಂದ ಗಡ್ಡದ್ದೇವರಮಠ ಹಾಗೂ ಸುನೀಲ್ ಮಹಾಂತಶೆಟ್ಟರ ಚಾಲನೆ ನೀಡಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆದ ಮೆರವಣಿಗೆಯಲ್ಲಿ ಡಿಜೆ ಸೌಂಡ್ ಗೆ ಯುವಕರು ಹಾಗೂ ಮಹಿಳೆಯರು ನೃತ್ಯ ಮಾಡುವ ಮೂಲಕ ವಿಜೃಂಭಣೆಯಿಂದ ನೆರವೇರಿದ್ದು ಕಂಡು ಬಂದಿತು. ಎಂ.ಕೆ.ಲಮಾಣಿ ಹಾಗೂ ‌ಸಂತೋಷ ರಾಠೋಡ ಕರ‍್ಯಕ್ರಮ ನಿರೂಪಿಸಿದರು. ಶಿವಣ್ಣ ಲಮಾಣಿ ಸ್ವಾಗತಿಸಿದರು. ಪುಂಡಲೀಕ ಲಮಾಣಿ ವಂದಿಸಿದರು.

click me!