ತಂದೆ ಕನಸಿನಂತೆ ಸಿಇಟಿ, ನೀಟ್ ತರಬೇತಿ ಕೇಂದ್ರ ಪ್ರಾರಂಭಿಸಿದೆ: ಶಾಸಕ ದರ್ಶನ್ ಧ್ರುವನಾರಾಯಣ್

By Kannadaprabha News  |  First Published Aug 25, 2024, 7:46 PM IST

ಕನಸನ್ನು ನನಸು ಮಾಡುವ ಸಲುವಾಗಿ ನಮ್ಮ ಕುಟುಂಬದ ವತಿಯಿಂದ ಸಿಇಟಿ, ನೀಟ್ ತರಬೇತಿ ಕೇಂದ್ರವನ್ನು ತೆರೆಯಲಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಜೀವನ ರೂಪಿಸಿಕೊಳ್ಳಿ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು.


ನಂಜನಗೂಡು (ಆ.25): ನನ್ನ ತಂದೆ ಆರ್. ಧ್ರುವನಾರಾಯಣ್ ಅವರಿಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸಿ, ತರಬೇತಿ ಕೇಂದ್ರವನ್ನು ತೆರೆದು ಶಿಕ್ಷಣ ಸೇವೆ ಒದಗಿಸಬೇಕು ಎಂಬ ಕನಸಿತ್ತು. ಆ ಕನಸನ್ನು ನನಸು ಮಾಡುವ ಸಲುವಾಗಿ ನಮ್ಮ ಕುಟುಂಬದ ವತಿಯಿಂದ ಸಿಇಟಿ, ನೀಟ್ ತರಬೇತಿ ಕೇಂದ್ರವನ್ನು ತೆರೆಯಲಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಜೀವನ ರೂಪಿಸಿಕೊಳ್ಳಿ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು.

ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆರ್. ಧ್ರುವನಾರಾಯಣ ಅವರ ಎಜುಕೇಷನಲ್ ಟ್ರಸ್ಟ್ ಸಿಇಟಿ, ನೀಟ್ ಉಚಿತ ತರಬೇತಿ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ನನ್ನ ತಂದೆ ಆರ್. ಧ್ರುವನಾರಾಯಣ್ ಅವರು ಈ ಭಾಗದಲ್ಲಿ ಎರಡು ಬಾರಿ ಸಂಸದರಾಗಿ, ಎರಡು ಬಾರಿ ಶಾಸಕರಾಗಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ನನ್ನ ತಂದೆಯವರಿಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತಹ ತರಬೇತಿ ಕೇಂದ್ರವನ್ನು ತೆರೆಯಬೇಕು, ಆ ಮೂಲಕ ಬಡವರ ಮಕ್ಕಳು ಸಹ ಉನ್ನತ ಉದ್ಯೋಗ ಗಳಿಸಬೇಕು ಎಂಬ ಮಹಾಕಾಂಕ್ಷೆ ಇತ್ತು. 

Latest Videos

undefined

ಕೊಡಗು ಕೆಸರುಗದ್ದೆ ಕ್ರೀಡಾಕೂಟ: ಕೆಸರಲ್ಲಿ ಮಿಂದೆದ್ದರು ಕೂಡ್ಲೂರು ಪ್ರೌಢಶಾಲಾ ವಿದ್ಯಾರ್ಥಿಗಳು!

ಅವರ ಕನಸನ್ನು ನನಸು ಮಾಡುವ ಸಲುವಾಗಿ ಕುಟುಂಬದ ವತಿಯಿಂದ ಆರ್. ಧ್ರುವನಾರಾಯಣ ಅವರ ಹೆಸರಿನಲ್ಲಿ ಎಜುಕೇಷನಲ್ ಟ್ರಸ್ಟ್ ಸ್ಥಾಪನೆ ಮಾಡಿ ಅದರ ಮೂಲಕ ಸಿಇಟಿ ಮತ್ತು ಎನ್.ಇಇಟಿ, ಪರೀಕ್ಷೆಗೆ ಉಚಿತ ತರಬೇತಿ ಕೇಂದ್ರವನ್ನು ಆರಂಭಿಸಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ತಾಲೂಕನ್ನು ಪ್ರಥಮ ಸ್ಥಾನಕ್ಕೆ ಕೊಂಡೊಯ್ಯಬೇಕು ಮತ್ತು ಆ ಮೂಲಕ ಉನ್ನತ ಹುದ್ದೆಯನ್ನು ಅಲಂಕರಿಸಬೇಕು ಎಂದರು.

ಮುಖ್ಯಅತಿಥಿಯಾಗಿದ್ದ ಮೈಸೂರಿನ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಡಾ.ಕೆ.ಆರ್. ದಾಕ್ಷಾಯಿಣಿ ಮಾತನಾಡಿ, ಕನ್ನಡ ಭಾಷೆಯಲ್ಲಿ ವ್ಯಾಸಂಗ ಮಾಡಿದವರು ಕೂಡ ವೈದ್ಯಕೀಯ ಶಿಕ್ಷಣಕ್ಕೆ ಬರಬಹುದು, ನಮಗೆ ಇಂಗ್ಲಿಷ್ ಭಾಷೆ ಬರುವುದಿಲ್ಲ, ಆದ್ದರಿಂದ ನಾವು ವೈದ್ಯಕೀಯ ಶಿಕ್ಷಣ ಪಡೆಯಲು ಸಾಧ್ಯವಿಲ್ಲ ಎಂದು ಎದೆಗುಂದಬೇಕಿಲ್ಲ ಎಂದು ಹೇಳಿದರು.

ಮಾಲೂರು ರಸ್ತೆಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದಿಂದ 100 ಕೋಟಿ: ಶಾಸಕ ಕೆ.ವೈ.ನಂಜೇಗೌಡ

ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುರಹಟ್ಟಿ ಮಹೇಶ್, ವಾಲ್ಮೀಕಿ ನಿಗಮ ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು, ಪ್ರಥಮ ದರ್ಜೆ ಗುತ್ತಿಗೆದಾರರಾದ ಯು.ಎನ್. ಪದ್ಮನಾಭರಾವ್, ಆರ್. ಧ್ರುವನಾರಾಯಣ್ ಎಜುಕೇಷನಲ್ ಟ್ರಸ್ಟ್ ನ ಧೀರನ್ ಧ್ರುವನಾರಾಯಣ್, ರೂಪಾ ರಾಮಚಂದ್ರ, ನಿಕಿತಾ ರಾಮಚಂದ್ರ, ಆರ್.ವಿ. ಲರ್ನಿಂಗ್ ಹಬ್ ನಿರ್ದೇಶಕ ಮಯೂರ್ ಗೋಯಲ್, ಜಿಪಂ ಮಾಜಿ ಸದಸ್ಯ ಕೆ. ಮಾರುತಿ, ತಾಪಂ ಮಾಜಿ ಸದಸ್ಯ ಬಿ.ಎಂ. ನಾಗೇಶ್ ರಾಜ್ ಇದ್ದರು.

click me!