ಮಧ್ಯಮ ವರ್ಗದವರಿಗೆ ಸೂರು ಕಲ್ಪಿಸುವ ಕೇಂದ್ರ ಸರ್ಕಾರದ ‘ಸ್ವಾಮಿ ನಿಧಿ’ ಯೋಜನೆಯಡಿ ಆರ್ಥಿಕ ನೆರವು ಪಡೆದುಕೊಳ್ಳುವ ಮೂಲಕ ಸಾವಿರಾರು ಕುಟುಂಬಗಳು ನೆಲೆಕಂಡುಕೊಂಡಿವೆ.
ಬೆಂಗಳೂರು : ಮಧ್ಯಮ ವರ್ಗದವರಿಗೆ ಸೂರು ಕಲ್ಪಿಸುವ ಕೇಂದ್ರ ಸರ್ಕಾರದ ‘ಸ್ವಾಮಿ ನಿಧಿ’ ಯೋಜನೆಯಡಿ ಆರ್ಥಿಕ ನೆರವು ಪಡೆದುಕೊಳ್ಳುವ ಮೂಲಕ ಸಾವಿರಾರು ಕುಟುಂಬಗಳು ನೆಲೆಕಂಡುಕೊಂಡಿವೆ.
ಇದೇ ಯೋಜನೆಯಡಿ ಸೂರು ಪಡೆದಿರುವ ಪ್ರದೀಪ್ ಮತ್ತು ದೀಪಾಲಿ ಪೈ ಅವರ ಮನೆಯ ವಿಶೇಷ ಗೃಹ ಪ್ರವೇಶದಲ್ಲಿ ಸಂಸದ ತೇಜಸ್ವಿ ಸೂರ್ಯ ಪಾಲ್ಗೊಂಡು ಶುಭಾಶಯ ಕೋರಿದರು. ಈ ವೇಳೆ ಯೋಜನೆ ಜಾರಿಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಟ್ವಿಟರ್ ಮೂಲಕ ಧನ್ಯವಾದ ಅರ್ಪಿಸಿದರು.
undefined
ಬೆಂಗಳೂರಿನ ಮಂತ್ರಿ ಸೆರಿನಿಟಿ ರೆಸಿಡೆನ್ಸಿಯಲ್ ಕಾಂಪ್ಲೆಕ್ಸ್‌ನಲ್ಲಿ ದಂಪತಿ ಮನೆ ಪಡೆದುಕೊಂಡಿದ್ದಾರೆ. ಈ ಯೋಜನೆಯು ಸ್ವಾಮಿ ನಿಧಿಯಡಿಯಲ್ಲಿ ಬೆಂಗಳೂರಿನ ಮೊದಲ ಯೋಜನೆಯಾಗಿದೆ ಮತ್ತು ಮೂರು ಸಾವಿರಕ್ಕೂ ಹೆಚ್ಚು ಕುಟುಂಬಗಳು ತಮ್ಮ ಜೀವಿತಾವಧಿಯ ಗಳಿಕೆಯನ್ನು ಉಳಿಸಲು ಸಹಾಯ ಮಾಡಿದೆ ಎಂದು ತೇಜಸ್ವಿ ಸೂರ್ಯ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಕನಕಪುರ ರಸ್ತೆಯಲ್ಲಿ ಈ ಯೋಜನೆಗೆ ಬುಕಿಂಗ್‌ಗಳನ್ನು 2016ರಲ್ಲಿ ಆರಂಭವಾಯಿತು. ಮಧ್ಯಮ ವರ್ಗದ ತೆರಿಗೆದಾರರು, ಒಂದು ಕಡೆ ತಮ್ಮ ಮನೆ ಬಾಡಿಗೆಯನ್ನು ಪಾವತಿಸುತ್ತಿದ್ದರೆ, ಮತ್ತೊಂದಡೆ ಗೃಹ ಸಾಲದ ಹೊಣೆಯನ್ನು ಹೊತ್ತಿದ್ದರು. ಈ ನಡುವೆ, 2018ರಲ್ಲಿ ನಿರ್ಮಾಣವು ಸಂಪೂರ್ಣವಾಗಿ ಸ್ಥಗಿತಗೊಂಡು ಜನರು ಅನಿಶ್ಚಿತ ಪರಿಸ್ಥಿತಿಯಲ್ಲಿದ್ದರು.
ನನ್ನ ಕೋರಿಕೆಯ ಮೇರೆಗೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಕ್ಷಣವೇ ಸ್ವಾಮಿ ನಿಧಿ ಯೋಜನೆಯಡಿ ನೆರವು ನೀಡುವಂತೆ ಎಸ್‌ಬಿಐ ಅಧಿಕಾರಿಗಳಿಗೆ ಸೂಚಿಸಿದರು. ಈ ಮೂಲಕ .1 ಸಾವಿರ ಕೋಟಿ ಧನಸಹಾಯ ಲಭ್ಯವಾಯಿತು. 2020ರ ಅಕ್ಟೋಬರ್ ತಿಂಗಳಲ್ಲಿ ನಿರ್ಮಾಣ ಕಾರ್ಯ ಪುನರಾರಂಭಿಸಲಾಗಿದೆ. ಎರಡು ವರ್ಷದಲ್ಲಿ ಸ್ಥಗಿತಗೊಂಡ ಯೋಜನೆಯನ್ನು ಪೂರ್ಣಗೊಳಿಸಲಾಗಿದೆ. ದೇಶಾದ್ಯಂತ ಈ ಯೋಜನೆಯಡಿ 20,557ಕ್ಕೂ ಹೆಚ್ಚು ಮನೆಗಳು ಪೂರ್ಣಗೊಂಡಿವೆ ಎಂದಿದ್ದಾರೆ.
ಆಹಾರ ಧಾನ್ಯ ಬೆಲೆ ನಿಯಂತ್ರಣ ಕೇಂದ್ರ ಸರ್ಕಾರದ ಕೆಲಸ
ಬೆಂಗಳೂರು (ಜೂ.27) ಬೇಳೆಕಾಳು, ತರಕಾರಿ ಸೇರಿ ಅಗತ್ಯ ವಸ್ತುಗಳ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿರುವಾಗಲೇ, ‘ಆಹಾರ ಧಾನ್ಯಗಳ ಬೆಲೆ ಏರಿಕೆ ತಡೆಯುವ ಕೆಲಸ ಕೇಂದ್ರ ಸರ್ಕಾರದ್ದಾಗಿದೆ. ಆ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತದೆ ಎಂದು ನಾವು ಎದುರು ನೋಡುತ್ತಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಹೇಳಿದ್ದಾರೆ.
ಆಹಾರ ಧಾನ್ಯಗಳ ಬೆಲೆ ಹೆಚ್ಚಳವಾಗುತ್ತಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಬೆಲೆ ಏರಿಕೆ ತಡೆಯಬೇಕಾಗಿರುವುದು ಯಾರು, ಕೇಂದ್ರ ಸರ್ಕಾರ ಅಲ್ಲವೇ? ಎಂದು ಮರು ಪ್ರಶ್ನಿಸಿದರು.
ಟೊಮೆಟೋ ಸೇರಿದಂತೆ ಹಲವು ತರಕಾರಿ ಬೆಲೆಗಳು ಶತಕ ದಾಟಿವೆ. ಅಲ್ಲದೆ ಬೇಳೆಕಾಳು ದರ ಕೂಡ ದ್ವಿಶತಕ ದಾಟಿದ್ದು, ಯದ್ವಾತದ್ವಾ ಏರತೊಡಗಿವೆ. ಕೋಳಿ ಮಾಂಸ, ಮೊಟ್ಟೆಕೂಡ ದುಬಾರಿಯಾಗಿದೆ. ಈ ಬಗ್ಗೆ ಜನರು ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಬೆಲೆ ಏರಿಕೆ ತಡೆಯುವಂತೆ ಆಗ್ರಹ ಕೂಡ ಮಾಡುತ್ತಿದ್ದಾರೆ.
ಬಾರದ ಮುಂಗಾರು ಮಳೆ: ಶತಕ ಬಾರಿಸಿದ ತರಕಾರಿ ಬೆಲೆ, ಗ್ರಾಹಕರ ಜೇಬಿಗೆ ಕತ್ತರಿ..!
ದೇಶದ ಬಹುತೇಕ ರಾಜ್ಯಗಳಲ್ಲಿ ಟೊಮೆಟೋ .100ಕ್ಕೆ ಜಂಪ್
ನವದೆಹಲಿ: ಕೆಲವೇ ವಾರಗಳ ಹಿಂದೆ 20ರಿಂದ 30 ರು.ನಷ್ಟಿದ್ದ ಟೊಮೆಟೋ ಬೆಲೆ ದೇಶದ ಬಹುತೇಕ ರಾಜ್ಯಗಳಲ್ಲಿ ಇದೀಗ 100 ರು.ಗೆ ತಲುಪಿದೆ. ಮಧ್ಯಪ್ರದೇಶದ ಇಂದೋರ್‌ನಲ್ಲಿ 110 ರು. ಗಡಿ ದಾಟುವ ಮೂಲಕ ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ. ಬೆಂಗಳೂರಿನಲ್ಲಿ ಕೇಜಿಗೆ 125 ರು.ವರೆಗೂ ಏರಿಕೆಯಾಗಿದ್ದು, ಅಗತ್ಯ ಪ್ರಮಾಣದಲ್ಲಿ ಟೊಮೆಟೋ ಮಾರುಕಟ್ಟೆಗೆ ಬಾರದೇ ಹೋದರೆ ಇದು 150 ರು.ಗೆ ತಲುಪಬಹುದು ಎಂದು ಮಾರುಕಟ್ಟೆತಜ್ಞರು ತಿಳಿಸಿದ್ದಾರೆ. ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ತಪ್ಪು ನಿರ್ಧಾರಗಳೇ ಕಾರಣ ಎಂದು ಕಾಂಗ್ರೆಸ್ ಟೀಕಿಸಿದೆ.
Good News: ಬೇಳೆ ಕಾಳುಗಳ ಬೆಲೆ ತಗ್ಗಿಸಲು ಮುಂದಾದ ಕೇಂದ್ರ ಸರ್ಕಾರ
ತೊಗರಿ ಬೆಲೆ ಏರಿಕೆ ತಡೆಯಲು ಹೆಚ್ಚುವರಿ ಬೇಳೆ ಮಾರುಕಟ್ಟೆಗೆ
ನವದೆಹಲಿ: ತೊಗರಿ ಬೇಳೆ ಬೆಲೆ ದೇಶದ ವಿವಿಧೆಡೆ ಕೇಜಿಗೆ 200 ರು. ಗಡಿಯತ್ತ ಜಿಗಿಯುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ತನ್ನ ಬಳಿ ಇರುವ ಹೆಚ್ಚುವರಿ ಸರಕನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ದರ ಏರಿಕೆ ತಡೆಯಲು ಹೊರಟಿದೆ. ಕೇಂದ್ರೀಯ ದಾಸ್ತಾನಿನಲ್ಲಿರುವ ಹೆಚ್ಚುವರಿ ಬೇಳೆಯನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸೂಚಿಸಿದೆ. ಜತೆಗೆ ತೊಗರಿಯನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಿದೆ.