ಕಾರವಾರ (ಸೆ.4) : ತಾಲೂಕಿನ ಮಾಜಾಳಿ ಕಡಲ ತೀರವನ್ನು .250 ಕೋಟಿ ವೆಚ್ಚದಲ್ಲಿ ಮೀನುಗಾರಿಕಾ ಬಂದರನ್ನಾಗಿ ಅಭಿವೃದ್ಧಿ ಪಡಿಸುವ ಯೋಜನೆಗೆ ಕೇಂದ್ರ ಸರ್ಕಾರವು ಅನುಮೋದನೆ ನೀಡಿದೆ.ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಾಗರಮಾಲಾ ಯೋಜನೆಯಡಿ ಮಾಜಾಳಿ ಬಂದರು(Majali fishing port) ನಿರ್ಮಾಣವಾಗಲಿದೆ. ಕರ್ನಾಟಕ ಮೆರಿಟೈಮ್ ಬೋರ್ಡ್(Karnataka Maritime Board) ಮತ್ತು ಮೀನುಗಾರಿಕಾ ಇಲಾಖೆ(Department of Fisheries)ಗೆ ಯೋಜನೆಯನ್ನು ಜಾರಿಗೆ ಮಾಡುವ ಜವಾಬ್ದಾರಿ ನೀಡಲಾಗಿದೆ.
ಕಾರವಾರ ಕಡಲಲ್ಲಿ ಬಣ್ಣದ ಅಲೆ! ಮಾಜಾಳಿ ತೀರದಲ್ಲಿ ವಿಸ್ಮಯ
undefined
ಇದು ನಿರ್ಮಾಣವಾದಲ್ಲಿ ಕಾರವಾರ(Karwar) ತಾಲೂಕಿನಲ್ಲಿ ನಿರ್ಮಾವಾದ 2ನೇ ಮೀನುಗಾರಿಕಾ ಬಂದರು ಆಗಲಿದೆ. ಇದರ ಹೊರತಾಗಿ ನಗರದ ಅಲಿಗದ್ದಾ ಕಡಲತೀರದಲ್ಲಿ ವಾಣಿಜ್ಯ ಬಂದರು ಈಗಾಗಲೇ ಕಾರ್ಯ ನಿರ್ವಹಿಸುತ್ತಿದ್ದು, ಇದರ ವಿಸ್ತರಣೆ ಕೂಡ ಈಗಾಗಲೇ ಕೈಗೆತ್ತಿಕೊಳ್ಳಲಾಗಿದೆ. 250 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮೀನುಗಾರಿಕಾ ಬಂದರಿನಲ್ಲಿ 80 ದೋಣಿಗಳು ನಿಲ್ಲಬಹುದು. ಬಂದರಿನ ಉತ್ತರ ಭಾಗದಲ್ಲಿ 1,140 ಮೀ. ಹಾಗೂ ದಕ್ಷಿಣದಲ್ಲಿ 595 ಮೀ. ಉದ್ದದ ಅಲೆ ತಡೆಗೋಡೆ ನಿರ್ಮಾಣವಾಗಲಿದೆ. ವರ್ಷಕ್ಕೆ ಸುಮಾರು 15.50 ಟನ್ ಮತ್ಸ್ಯ ವಹಿವಾಟು ಆಗುವ ನಿರೀಕ್ಷೆಯಿದೆ ಎಂದು ಯೋಜನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮಂಗಳೂರಿನಲ್ಲಿ ಶುಕ್ರವಾರ ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ಕಾರ್ಯಕ್ರಮದ ವೇಳೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಕೇಂದ್ರದ ಅನುಮೋದನೆ ಸಿಕ್ಕಿದ ಕುರಿತು ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ತಾಲೂಕಿನಲ್ಲಿ ಒಂದೇ ಮೀನುಗಾರಿಕಾ ಬಂದರು ಇರುವುದರಿಂದ ತೂಫಾನ್ ವೇಳೆ, ಮಳೆಗಾಲದಲ್ಲಿ ಮೀನುಗಾರಿಕೆ ಬಂದ್ ಇರುವ ವೇಳೆ ಬೋಟ್‌ಗಳನ್ನು ಲಂಗರು ಹಾಕಲು ಸಮಸ್ಯೆ ಉಂಟಾಗುತ್ತಿತ್ತು. ಬಿರುಗಾಳಿ, ಅಲೆಗಳ ಅಬ್ಬರ ಜೋರಾಗಿದ್ದಾಗ ಒಂದಕ್ಕೊಂದು ಬೋಟ್‌ಗಳು ಹೊಡೆದುಕೊಂಡು ಹಾನಿಗೊಳಗಾಗುತ್ತಿದ್ದವು. ಈ ಬಂದರು ನಿರ್ಮಾಣವಾದಲ್ಲಿ ಬೋಟ್‌ಗಳನ್ನು ಲಂಗರು ಹಾಕಲು ಅನುಕೂಲವಾಗಲಿದೆ. ಮತ್ಸ್ಯ ಸಂಗ್ರಹ, ಮಾರಾಟ, ಸಾಗಾಟಕ್ಕೂ ಸ್ಥಳಾವಕಾಶ ಹೆಚ್ಚಿನ ಪ್ರಮಾಣದಲ್ಲಿ ಆಗಲಿದೆ.