Kolar : ಜಿಲ್ಲೆಗೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ

By Kannadaprabha News  |  First Published Oct 5, 2023, 9:19 AM IST

2023-24 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ 6 ತಾಲೂಕುಗಳಿಗೆ ಶೇ.50 ಕ್ಕೂ ಹೆಚ್ಚು ಬೆಳೆ ನಷ್ಟವಾಗಿದ್ದು, ಈ ಹಿನ್ನೆಲೆಯಲ್ಲಿ 6 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಸರ್ಕಾರ ಘೋಷಿಸಿದೆ


ಚಿಕ್ಕಬಳ್ಳಾಪುರ:  2023-24 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ 6 ತಾಲೂಕುಗಳಿಗೆ ಶೇ.50 ಕ್ಕೂ ಹೆಚ್ಚು ಬೆಳೆ ನಷ್ಟವಾಗಿದ್ದು, ಈ ಹಿನ್ನೆಲೆಯಲ್ಲಿ 6 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಸರ್ಕಾರ ಘೋಷಿಸಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯು ಬರ ಪೀಡಿತ ಜಿಲ್ಲೆಯೆಂದು ಘೋಷಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಬರಪೀಡಿತ ತಾಲ್ಲೂಕುಗಳ ಪರಿಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ಬರ ಅಧ್ಯಯನ ತಂಡವಾದ ಕೇಂದ್ರೀಯ ಜಲ ಆಯುಕ್ತಾಲಯದ ನಿರ್ದೇಶಕ ವಿ.ಅಶೋಕ್ ಕುಮಾರ್ ನೇತೃತ್ವದಲ್ಲಿ ಕೇಂದ್ರ ಬರ ಅಧ್ಯಯನ ತಂಡವು ಜಿಲ್ಲೆಗೆ ಅ.6 ರಂದು ಭೇಟಿ ನೀಡಲಿದೆ. ಅಂದು ತಂಡವು ಚಿಕ್ಕಬಳ್ಳಾಪುರ ತಾಲ್ಲೂಕಿನ ಚೊಕ್ಕಹಳ್ಳಿ ಗ್ರಾಮ, ಬಂಡಮನಹಳ್ಳಿ, ದೊಡ್ಡೇಗಾನಹಳ್ಳಿಯ ಜಮೀನುಗಳಿಗೆ ಭೇಟಿ ನೀಡಲಿದೆ. ನಂತರ ಗೌರಿಬಿದನೂರು ತಾಲ್ಲೂಕಿನ ಜಕ್ಕೇನಹಳ್ಳಿ ಗ್ರಾಮ ಮತ್ತು ಮಧ್ಯಾಹ್ನ ಗಂಗಸಂದ್ರ ಹಾಗೂ ಕಡಬೂರು ಗ್ರಾಮದ ರೈತರ ಜಮೀನುಗಳಿಗೆ ಭೇಟಿ ನೀಡಲಿದೆ.

Tap to resize

Latest Videos

ರಾಜ್ಯದಲ್ಲಿ 50 ರಷ್ಟು ಹಿಂಗಾರು ಮಳೆ ಸಂಭವ

ಬೆಂಗಳೂರು (ಅ.4): ಅಕ್ಟೋಬರ್‌, ನವೆಂಬರ್‌ ಹಾಗೂ ಡಿಸೆಂಬರ್ ಅವಧಿಯಲ್ಲಿ ರಾಜ್ಯದಲ್ಲಿ ವಾಡಿಕೆ ಪ್ರಮಾಣಕ್ಕಿಂತ ಶೇ.40 ರಿಂದ 50 ರಷ್ಟು ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಜ್ಞ ಪ್ರಸಾದ್‌ ಮಾಹಿತಿ ನೀಡಿದ್ದಾರೆ. ಈ ಮೂಲಕ ಬರದಿಂದ ತತ್ತರಿಸಿದ್ದ ರಾಜ್ಯದ ಜನರಿಗೆ ನೆಮ್ಮದಿ ಲಭಿಸುವ ಸಾಧ್ಯತೆ ಇದೆ.

ಮುಂಗಾರು ಮಳೆ ಹಿಂಬರುವಿಕೆಗೆ ಆರಂಭಗೊಂಡಿದೆ. ಅಕ್ಟೋಬರ್‌ 15ರ ವೇಳೆ ರಾಜ್ಯದಿಂದ ಹಿಂಮುಖವಾಗಲಿದೆ. ಬಳಿಕ ಹಿಂಗಾರು ಆರಂಭಗೊಳ್ಳಲಿದೆ. ಸದ್ಯದ ಮಾಹಿತಿ ಪ್ರಕಾರ ಹಿಂಗಾರು ಅವಧಿಯ ಒಟ್ಟಾರೆ ಮಳೆ ಪ್ರಮಾಣಕ್ಕಿಂತ ಶೇ.40 ರಿಂದ 50 ರಷ್ಟು ಹೆಚ್ಚಿನ ಮಳೆ ಆಗಲಿದೆ. ಅದರಲ್ಲೂ ತೀವ್ರ ಮಳೆ ಕೊರತೆ ಎದುರಿಸುತ್ತಿರುವ ದಕ್ಷಿಣ ಒಳನಾಡು ಜಿಲ್ಲೆಗಳಾದ ಕೊಡಗು, ಮಂಡ್ಯ, ಹಾಸನ ಸೇರಿದಂತೆ ಮೊದಲಾದ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಲಿದೆ ಎಂದು ತಿಳಿಸಿದ್ದಾರೆ.

Tumakur : ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ಪ್ರಾರಂಭ: ಹನುಮಂತರಾಯಪ್ಪ

ಮುಂದಿನ ಐದು ದಿನ ಮಳೆ ಕಡಿಮೆ:

ರಾಜ್ಯದಲ್ಲಿ ಮುಂದಿನ ಐದು ದಿನ ಮಳೆ ಪ್ರಮಾಣ ಕಡಿಮೆ ಆಗಲಿದೆ. ಕೆಲವು ಕಡೆ ಹಗುರ ಮಳೆ ಆಗಲಿದೆ. ಅ.10 ರಿಂದ ಮಳೆ ಚುರುಕುಗೊಳ್ಳಲಿದೆ. ಸುಮಾರು 4 ದಿನ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಪ್ರಸಾದ್‌ ತಿಳಿಸಿದ್ದಾರೆ. ಎಲ್‌ ನೀ ನೋ ವರ್ಷ ಆಗಿರುವುದರಿಂದ ಅಕ್ಟೋಬರ್‌ ನಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ರಾಜಕಾಲುವೆ ಒತ್ತವರಿ ಪತ್ತೆಗೆ BBMP ಹೊಸ ಪ್ಲಾನ್: BBMP ಮನವಿಗೆ ಸಾರ್ವಜನಿಕರ ಸಕತ್ ರೆಸ್ಪಾನ್ಸ್..!

click me!