ಮತ್ತೆ ಹಾಲಿನ ದರದಲ್ಲಿ 2 ರು. ಏರಿಕೆ?

By Kannadaprabha News  |  First Published Oct 5, 2023, 9:07 AM IST

ರಾಜ್ಯದ ಎಲ್ಲ ಸಹಕಾರ ಸಂಘಗಳ ಮೇಲೆ ಸರ್ಕಾರವು ಹಿಡಿತ ಸಾಧಿಸಿ ನಿಗಾ ವಹಿಸಲಿದೆ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಸಚಿವ ಕೆ. ವೆಂಕಟೇಶ್ ಹೇಳಿದರು.


  ಕಿತ್ತೂರು :  ರಾಜ್ಯದ ಎಲ್ಲ ಸಹಕಾರ ಸಂಘಗಳ ಮೇಲೆ ಸರ್ಕಾರವು ಹಿಡಿತ ಸಾಧಿಸಿ ನಿಗಾ ವಹಿಸಲಿದೆ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಸಚಿವ ಕೆ. ವೆಂಕಟೇಶ್ ಹೇಳಿದರು.

ಪಿರಿಯಾಪಟ್ಟಣ ತಾಲೂಕು ದೊಡ್ಡಬೆಲಾಳು ಗ್ರಾಮದ ಉತ್ಪಾದಕರ ಸಹಕಾರ ಸಂಘದ ವಾಣಿಜ್ಯ ಮಳಿಗೆ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

Latest Videos

undefined

ರಾಜ್ಯದ ಸಹಕಾರ ಸಂಘಗಳಲ್ಲಿ ನಡೆಯುವ ಅವ್ಯವಹಾರಗಳಿಗೆ ಕಡಿವಾಣ ಹಾಕ ಬೇಕಾಗಿರುವುದರಿಂದ ಸಂಘಗಳಲ್ಲಿ ಯಾವುದೇ ಕಾರ್ಯಕ್ರಮಗಳು ಜಾರಿಗೆ ಆಗಬೇಕಾದರೆ ಸರ್ಕಾರದ ಅನುಮತಿ ಕಡ್ಡಾಯ ಎಂದು ತಿದ್ದುಪಡಿ ಮಾಡುವ ಕುರಿತಾಗಿ ಯೋಚಿಸುತ್ತಿದ್ದೇವೆ, ಸಹಕಾರಿ ಸಂಘಗಳಲ್ಲಿ ಅವರು ನಡೆದದ್ದೇ ಹಾದಿ, ಅಗತ್ಯಕ್ಕಿಂತ ಹೆಚ್ಚಾಗಿ ಸಿಬ್ಬಂದಿ ವರ್ಗದವರು ಮೈಸೂರು ಯಲ್ಲಿ ತೆಗೆದುಕೊಳ್ಳಲಾಗಿದೆ, ಅದು ಅಲ್ಲದೆ ಮನಸೋ ಇಚ್ಛೆ ಅವರಿಗೆ ಬೇಕಾದಂತೆ ಹಾಲಿನ ಬೆಲೆಯನ್ನು ಏರಿಸುವುದು, ಇಳಿಸುವುದು ಮಾಡುತ್ತಿರುವುದು ರೈತರಿಗೆ ಹೊಡೆತ ಬೀಳುತ್ತದೆ, ಸಹಕಾರ ಸಂಘಗಳು ಇರುವುದು ಲಾಭ ಮಾಡಲು ಅಲ್ಲ ಎಂದರು.

ರೈತರಿಗೆ ಸವಲತ್ತು ನೀಡುವ ವಸ್ತುಗಳಿಗೆ ಉದಾಹರಣೆಗೆ ಫೀಡ್ಸ್ ರಿಯಾಯಿತಿ ದರದಲ್ಲಿ ನೀಡಬಹುದು, ಅದು ಬಿಟ್ಟು ಇವರು ತಮ್ಮ ಮೋಜಿಗೋಸ್ಕರ ಸಹಕಾರ ಸಂಘದ ಹಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಸರ್ಕಾರವು ಸಹಿಸುವುದಿಲ್ಲ, ನಮಗೆ ಲಾಭವು ಬೇಡ ನಷ್ಟವು ಬೇಡ, ಸರಿಯಾದ ರೀತಿಯಲ್ಲಿ ಸಂಘವನ್ನು ಸರಿದೂಗಿಸಿಕೊಂಡು ಹೋಗಬೇಕಾದದ್ದು ಅಧಿಕಾರದಲ್ಲಿದ್ದವರ ಕರ್ತವ್ಯವಾಗಿದೆ, ಒಕ್ಕೂಟಗಳಲ್ಲಿ ಶಿಸ್ತನ್ನು ತರಲು ಚಿಂತನೆ ನಡೆಸುತ್ತಿದ್ದೇವೆ, ಮುಖ್ಯಮಂತ್ರಿಗಳು ಬಹಳ ಖಾರವಾಗಿ ನಮಗೆ ಹೇಳಿದ್ದಾರೆ, ಒಕ್ಕೂಟಗಳಲ್ಲಿ ಶಿಸ್ತನ್ನು ತರಬೇಕು ಎಂದು. ಶಿಸ್ತಾಗಿ ನಡೆಸಬೇಕೆಂಬುದೇ ನಮ್ಮ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.

ಮುಂದಿನ ದಿನಗಳಲ್ಲಿ ಇನ್ನೂ 2 ರು. ಹಾಲಿನ ದರ ಏರಿಕೆ?

ಇತ್ತೀಚಿನ ದಿನಗಳಲ್ಲಿ ಸರ್ಕಾರದ ವತಿಯಿಂದ 3 ರು. ಪ್ರತಿ ಲೀಟರ್ ಹಾಲಿಗೆ ದರ ಹೆಚ್ಚು ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ 2 ರು. ಹೆಚ್ಚು ಮಾಡುವ ಪ್ರಸ್ತಾವನೆ ಇದ್ದು, ಸದ್ಯದಲ್ಲೆ ದರ ಹೆಚ್ಚು ಮಾಡುವುದಿಲ್ಲ, ಮುಂದೆ ನೋಡೋಣ ಎಂದರು.

ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಅನುಸೂಯ, ಮೈಮುಲ್ ಎಂಡಿ ವಿಜಯ್, ಮಾಜಿ ಎಂಡಿ ಸಣ್ಣತಮೇಗೌಡ, ಗ್ರಾಪಂ ಅಧ್ಯಕ್ಷ ವನಿತಾ, ಸಾವಿತ್ರಮ್ಮ, ನಿಶ್ಚಿತ್, ಸಿಇಓ ಮಂಜುನಾಥ್, ಜಯಂತ್, ದಿವಾಕರ್, ಡಿ.ಟಿ. ಸ್ವಾಮಿ, ಲೋಕೇಶ್, ಆರ್.ಎಸ್. ಮಹದೇವ್, ವಿಜಯ ರಾಜರಾಜೇ ಅರಸ್, ವಿಜಿಕುಮಾರ್, ಮಾದೇವ ಇದ್ದರು.

click me!