ಶಿವಾಜಿ ಮಹಾರಾಜರ ದೇಶಾಭಿಮಾನದ ಗುಣಗಳನ್ನು ನಾವು ಬೆಳೆಸಿಕೊಳ್ಳಬೇಕು: ಸಂಗಣ್ಣ ಕರಡಿ

By Kannadaprabha News  |  First Published Feb 25, 2023, 10:26 AM IST

ಅಪ್ರತಿಮ ದೇಶಭಕ್ತರಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರು ಸ್ವರಾಜ್ಯ ಕಲ್ಪನೆ ಮೂಡಿಸಿದ ನಾಯಕರಾಗಿದ್ದಾರೆ ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.


ಕೊಪ್ಪಳ (ಫೆ.25) : ಅಪ್ರತಿಮ ದೇಶಭಕ್ತರಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರು ಸ್ವರಾಜ್ಯ ಕಲ್ಪನೆ ಮೂಡಿಸಿದ ನಾಯಕರಾಗಿದ್ದಾರೆ ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ(Department of Kannada and Culture) ಸಹಯೋಗದಲ್ಲಿ ನಗರದ ಸಾಹಿತ್ಯ ಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಶ್ರೀ ಛತ್ರಪತಿ ಶಿವಾಜಿ ಜಯಂತಿ(Chhatrapati Shivaji Jayanti)ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಷ್ಟಾ್ರಭಿಮಾನಕ್ಕೆ ಶಿವಾಜಿ(Shivaji maharaj) ಎನ್ನುವ ಹೆಸರೇ ಪ್ರೇರಣೆಯಾಗಿದೆ. ನಮ್ಮ ಸಂಸ್ಕೃತಿ ಹಾಗೂ ರಾಷ್ಟ್ರದ ಸಂರಕ್ಷಣೆಗೆ ಹೋರಾಡಿದ ಶ್ರೇಷ್ಠ ನಾಯಕರಾಗಿದ್ದಾರೆ. ಮಾತೆ ಜೀಜಾಬಾಯಿ ಅವರು ಶಿವಾಜಿಗೆ ಪ್ರೇರಣೆಯಾಗಿದ್ದು, ಬಾಲ್ಯದಿಂದಲೇ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡರು. ಶಿವಾಜಿಯು ಅಪ್ರತಿಮ ದೇಶಭಕ್ತರಾಗಿ ಮೆರೆದಿದ್ದು, ಇಂತಹ ಹೆಮ್ಮೆಯ ಪುತ್ರನನ್ನು ಪಡೆದಿರುವುದು ಭಾರತಾಂಬೆಯ ಪುಣ್ಯ ಎಂದರು.

Tap to resize

Latest Videos

undefined

ಕೊಪ್ಪಳ: ಹಾಸ್ಟೆಲ್‌ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್‌ಗೂ ತತ್ವಾರ!

ಶಿವಾಜಿ ಮಹಾರಾಜರ ದೇಶಾಭಿಮಾನದ ಗುಣಗಳನ್ನು ನಾವು ಬೆಳೆಸಿಕೊಳ್ಳಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲರೂ ಶಿಕ್ಷಣವಂತರಾಗಿ, ಸಂಘಟಿತರಾಗಿ ಬಾಳಬೇಕು. ಈ ನಿಟ್ಟಿನಲ್ಲಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು.

ವಿಧಾನ ಪರಿಷತ್‌ ಸದಸ್ಯರಾದ ಹೇಮಲತಾ ನಾಯಕ(Hemalatha Nayaka]  ಮಾತನಾಡಿ, ಮರಾಠ ಸಮುದಾಯ(Maratha community)ದವರ ಅಭಿವೃದ್ಧಿಗಾಗಿ ಸರ್ಕಾರವು ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಅಭಿವೃದ್ಧಿ ನಿಗಮ ಸ್ಥಾಪನೆಯಾಗಿದೆ. ಅಲ್ಲದೇ ಮರಾಠ ಸಮುದಾಯದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ಬಜೆಟ್‌ನಲ್ಲಿಯೂ ಅನುದಾನ ನೀಡಿದೆ ಎಂದರು.

ಕರ್ನಾಟಕ ಮರಾಠ ಅಭಿವೃದ್ಧಿ ನಿಗಮದ(Karnataka Maratha Development Corporation) ಅಧ್ಯಕ್ಷ ಎಂ.ಜಿ. ಮುಳೆ(MG Mule) ಮಾತನಾಡಿ, ಶಿವಾಜಿ ಮಹಾರಾಜರಿಗೂ ಹಾಗೂ ಕರ್ನಾಟಕದ ನೆಲಕ್ಕೂ ಅವಿನಾಭಾವ ಸಂಬಂಧವಿದೆ ಎಂದರು. ರಾಜ್ಯ ಸರ್ಕಾರವು ನಿಮಗಕ್ಕೆ .100 ಕೋಟಿ ನೀಡಿದೆ. ಸಮುದಾಯದವರು ನಿಗಮದ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಕೊಪ್ಪಳದ ಹಿರಿಯ ಲೇಖಕಿ ಸಾವಿತ್ರಿ ಮುಜುಮ್‌ದಾರ್‌ ಅವರು ಛತ್ರಪತಿ ಶಿವಾಜಿ ಮಹಾರಾಜರ ಕುರಿತು ವಿಶೇಷ ಉಪನ್ಯಾಸ ನೀಡಿ, ಭಾರತದ ಇತಿಹಾಸದಲ್ಲಿ ಸುಪ್ರಸಿದ್ಧ ಸಾಮ್ರಾಜ್ಯವನ್ನು ಸ್ಥಾಪಿಸಿದ ಶಿವಾಜಿಯವರು ಚಿಕ್ಕ ವಯಸ್ಸಿನಲ್ಲಿಯೇ ದೇಶಾಭಿಮಾನದ ಸ್ವಭಾವ ಬೆಳೆಸಿಕೊಂಡಿದ್ದರು. ಬಾಲ್ಯದಲ್ಲಿಯೇ ಸೈನ್ಯವನ್ನು ಕಟ್ಟಿದಂತಹ ಕೀರ್ತಿ ಶಿವಾಜಿಯವರದಾಗಿದೆ. ಅವರ ಸಾಮ್ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇತ್ತು. ಮಹಿಳೆಯರ ಮೇಲೆ ಕಣ್ಣು ಹಾಕುವಂತಹ ದುಷ್ಟರ ಕಣ್ಣುಗಳನ್ನು ಕೀಳುವ ಶಿಕ್ಷೆ ನೀಡಲಾಗುತ್ತಿತ್ತು. ಶಿವಾಜಿ ಮಹಾರಾಜರು ರೈತರ ಹಾಗೂ ಪರಿಸರದ ಬಗ್ಗೆ ಅತ್ಯಂತ ಕಾಳಜಿಯುಳ್ಳವರಾಗಿದ್ದರು. ಎಲ್ಲ ಪ್ರಜೆಗಳಿಗೂ ಸಮಬಾಳು ನೀಡಿದ ಮಹಾರಾಜರು. ಇಂತಹ ಮಹಾನ್‌ ಶಿವಾಜಿ ಅವರಿಗೆ ಅವರ ತಾಯಿಯೇ ಉತ್ತಮ ವ್ಯಕ್ತಿತ್ವ ರೂಪಿಸುವ ಶಕ್ತಿಯಾಗಿದ್ದರು. ಈ ನಿಟ್ಟಿನಲ್ಲಿ ಎಲ್ಲ ತಾಯಂದಿರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ದೇಶಾಭಿಮಾನ ಬೆಳೆಸಬೇಕು ಎಂದರು.

ಸಮಾರಂಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಎಸ್‌. ಪಾಟೀಲ್‌, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ, ನಗರಸಭೆ ಸದಸ್ಯರಾದ ಮುತ್ತುರಾಜ ಕುಷ್ಟಗಿ, ವಿರೂಪಾಕ್ಷಪ್ಪ, ಗಣ್ಯರಾದ ಸಿ.ವಿ. ಚಂದ್ರಶೇಖರ, ವೀರೇಶ ಮಹಾಂತಯ್ಯನಮಠ, ಸೋಮಶೇಖರ ಹಿಟ್ನಾಳ, ಸಮಾಜದ ಮುಖಂಡರಾದ ಕಮಲೇಶ ರಾವ್‌, ನಾಗೇಶ ಬಡಿಗೇರ, ಮಾರುತಿ ಕಾರಟಗಿ, ವಿಶ್ವನಾಥ ಅರಕೇರಿ, ಲಕ್ಷ್ಮಣ, ದಿನೇಶ ಆರ್ಯರ್‌, ಉಮೇಶ ಸುರ್ವೇ, ನಿಂಗರಾಜ ಉಪಸ್ಥಿತರಿದ್ದರು.

ಸ್ವಸಹಾಯ ಸಂಘಗಳಿಂದ ಮಹಿಳೆಯರ ಅಭಿವೃದ್ಧಿ: ಸಚಿವೆ ಶೋಭಾ ಕರಂದ್ಲಾಜೆ

ಜಯಂತ್ಯುತ್ಸವ ನಿಮಿತ್ತ ಶಿವಾಜಿ ಮಹಾರಾಜರ ಭಾವಚಿತ್ರದ ಮೆರವಣಿಗೆಯು ಅಶೋಕ ವೃತ್ತ, ಜವಾಹರ ರಸ್ತೆ, ಗಡಿಯಾರ ಕಂಭ ಮಾರ್ಗವಾಗಿ ತುಳಜಾಭವಾನಿ ದೇವಸ್ಥಾನದ ವರೆಗೆ ವಿಜೃಂಭಣೆಯಿಂದ ನೆರವೇರಿತು.

click me!